ಬೆಂಗಳೂರು: ಇತಿಹಾಸ ಪ್ರಸಿದ್ದ ಶಬರಿಮಲೆ(Sabarimala Yatra) ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ವಾರ್ಷಿಕ ಮಂಡಲ- ಮಕರ ಜ್ಯೋತಿ ಉತ್ಸವ ಶುರುವಾಗಿದೆ. ದೇಶಾದ್ಯಂತ ಭಕ್ತಗಣವೇ ಪುಣ್ಯಕ್ಷೇತ್ರದ ಹರಿದು ಬರುತ್ತಿವೆ. ಇದೀದ ರಾಜ್ಯ ಭಕ್ತರಿಗಾಗಿ ನೈಋತ್ಯ ರೈಲ್ವೆ (South Westran Railway) ಕರ್ನಾಟಕದಿಂದ ವಿಶೇಷ ರೈಲು ಸೇವೆಯನ್ನು ಆರಂಭಿಸಿದೆ. ಮೂರು ತಿಂಗಳು ರೈಲು ಸಂಚರಿಸಲಿವೆ.
ಈ ಕುರಿತು ನೈಋತ್ಯ ರೈಲ್ವೆ ವಲಯವು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿದೆ. ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ.
ಪ್ರಯಾಣಿಕರ ವಿಶೇಷ ಗಮನಕ್ಕೆ:
— South Western Railway (@SWRRLY) November 13, 2024
ಶಬರಿಮಲೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆ.#SWRupdates #SpecialTrains #Sabarimala pic.twitter.com/8ubWQ80P0C
ನಿತ್ಯ ಸಂಚರಿಸುವ ರೈಲುಗಳು
- ರೈಲು ಸಂಖ್ಯೆ 07371 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ.
- ರೈಲು ಸಂಖ್ಯೆ 07372 ಎಸ್ಎಸ್ಎಸ್ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ.
- 2 ಎಸಿ ಟು ಐಉರ್, 2 ಎಸಿ ತ್ರಿ ಟೈಯರ್, 6 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್ಡಿ ಸೇರಿದಂತೆ 18 ಬೋಗಿಗಳನ್ನು ಹೊಂದಿರಲಿದೆ.
ವಾರಕ್ಕೊಮ್ಮೆ ವಿಶೇಷ ರೈಲು
- ಹೆಚ್ಚುವರಿಯಾಗಿ ಇನ್ಮುಂದೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೊಮ್ಮೆ ಒಂದು ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಹುಬ್ಬಳ್ಳಿಯಿಂದ ಪ್ರತಿ ಮಂಗಳವಾರ ಹೊರಟು ಮರುದಿನ ಬುಧವಾರ ಕೊಟ್ಟಾಯಂ ತಲುಪಲಿದೆ.
- ರೈಲು ಸಂಖ್ಯೆ 07371 ಹುಬ್ಬಳ್ಳಿ-ಕೊಟ್ಟಾಯಂ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು ಮರುದಿನ ಬುಧವಾರ ಮಧ್ಯರಾತ್ರಿ 12ಕ್ಕೆ ಕೊಟ್ಟಾಯಂ ತಲುಪಲಿದೆ.
- ರೈಲು ಸಂಖ್ಯೆ 07372 ಕೊಟ್ಟಾಯಂ-ಹುಬ್ಬಳ್ಳಿ ವಾರಕ್ಕೊಮ್ಮೆ ವಿಶೇಷ ರೈಲು ಪ್ರತಿ ಮಂಗಳವಾರ ಮಧ್ಯರಾತ್ರಿ 12:50ಕ್ಕೆ ಕೊಟ್ಟಾಯಂನಿಂದ ಹೊರಟು ಮರುದಿನ ಬುಧವಾರ ಮಧ್ಯಾಹ್ನ 03:00ಕ್ಕೆ ಹುಬ್ಬಳ್ಳಿ ತಲುಪಲಿದೆ. ಈ ರೈಲು ಎಸಿ ಟು ಟೈಯರ್, ಎಸಿ ತ್ರೀ ಟೈಯರ್, ಸ್ಲೀಪರ್ ಕ್ಲಾಸ್, ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎಸ್ಎಲ್ಆರ್ಡಿ ಬೋಗಿಗಳನ್ನು ಹೊಂದಿದೆ.
ಇನ್ನು ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಆದ www.enquiry.indianrail.gov.in ಗೆ ಅಥವಾ NTES ಆ್ಯಪ್ ಮೂಲಕ ಅಥವಾ 139ಕ್ಕೆ ಡಯಲ್ ಮಾಡುವ ಮೂಲಕ ತಿಳಿದುಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ: ಬಸ್ ಅಪಘಾತ: ಶಬರಿಮಲೆ ಯಾತ್ರಿಕರಿಗೆ ಗಾಯ