Friday, 13th December 2024

ಸಾಹಿತ್ಯದಲ್ಲಿನ ಮೌಲ್ಯ ಅರಿತುಕೊಂಡು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು

ಬಸವನಬಾಗೇವಾಡಿ: ೧೨ನೇ ಶತಮಾನದ ಶರಣರ ವಚನ ಸಾಹಿತ್ಯದಲ್ಲಿನ ಮೌಲ್ಯಗಳನ್ನು ಅರಿತುಕೊಂಡು ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ದಿ.ಮಲ್ಲಮ್ಮ ಗೌಡತಿ ಪಾಟೀಲ, ದಿ.ರಾಮಣ್ಣ ಕುಂಬಾರ ಅವರ ಸ್ಮರಣರ‍್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕರ‍್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಿ ಹಿರೇಮಠ ಮಾತನಾಡಿ, ಶರಣರ ಅನುಭಾವದಿಂದ ರಚನೆಯಾದ ವಚನ ಸಾಹಿತ್ಯವು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ೧೨ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದಲ್ಲಿ ೩೫ ಶಿವಶರಣೆಯರಿದ್ದರು.

ಹೆಣ್ಣು-ಗಂಡು, ಮೇಲು-ಕೀಳು ಎಂಬ ಭೇದ ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶ್ರಮಿಸು ವುದರೊಂದಿಗೆ ಸಮಾಜದಲ್ಲಿನ ಮೌಢ್ಯ ಗಳನ್ನು ಶರಣರು ವಿರೋಧಿಸಿದರು. ಶರಣರ ವಚನಗಳಲ್ಲಿ ಹೃದಯಕ್ಕೆ ತಟ್ಟುವ ವಿಷಯಗಳಿವೆ. ಅವರು ದಾಸೋಹ, ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು ಎಂದು ಹೇಳಿದರು.

ಜಗತ್ತು ಇಂದು ಸಂಕುಚಿತವಾಗುತ್ತಿದೆ. ರ‍್ಮ, ಜಾತಿಗಳ ನಡುವೆ ಸಾಮರಸ್ಯದ ಸೇತುವೆ ನರ‍್ಮಿಸಬೇಕಾದ ಅಗತ್ಯತೆ ಇದೆ. ಯುವಕರು ವಚನ ಸಾಹಿತ್ಯ ಓದಿ ಸುಂದರ ಬದುಕು ರೂಪಿಸಿಕೊಳ್ಳಬೇಕು. ಇಂದು ಸಾಕ್ಷರತೆ ಪ್ರಮಾಣ ಹೆಚ್ಚಳವಾಗಿದೆ. ಆದರೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದ ನೀಯ. ವಚನ ಸಾಹಿತ್ಯದಲ್ಲಿನ ಮೌಲ್ಯಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದು ಹೇಳಿದರು.

ನರಸಲಗಿ ಅರಣ್ಯ ಸಂರಕ್ಷಣಾಧಿಕಾರಿ ಭಾಗ್ಯಶ್ರೀ ಬಿರಾದಾರ ಮಾತನಾಡಿ, ಉತ್ತಮ ಆಚಾರ ವಿಚಾರಗಳಿಂದ ಬದುಕು ಸರ‍್ಥಕ ವಾಗಲಿದೆ. ಅಂತಹ ಮೌಲ್ಯಗಳು ವಚನಗಳಲ್ಲಿವೆ. ಶುದ್ಧ ಕಾಯಕ ನಿಷ್ಟೆ ಬೆಳೆಸಿಕೊಂಡು ಸರಳ ಜೀವನ ನಡೆಸಿ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ ಗೌರವ ಸಲಹೆಗಾರ ಎ.ಎಂ.ಹಳ್ಳೂರ ಮಾತನಾಡಿದರು.

ನಿವೃತ್ತ ಶಿಕ್ಷಕಿ ಬಸಲಿಂಗಮ್ಮ ಕುಂಬಾರ, ಮೇಘಾ ಪಾಟೀಲ, ಶಿಕ್ಷಕ ಹುಸೇನಬಾಷಾ ಮಸಬಿನಾಳ, ಈರನಗೌಡ ಪಾಟೀಲ ಇದ್ದರು.
ಕಸಾಪ ತಾಲ್ಲೂಕು ಘಟಕದ ಗೌರವ ಕರ‍್ಯರ‍್ಶಿ ವೈ.ಎನ್.ಮಿಣಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದತ್ತಿ ಸಂಚಾಲಕ ಪ್ರಭಾಕರ ಖೇಡದ ಸ್ವಾಗತಿಸಿದರು, ಕೊಟ್ರೇಶ ಹೇಗಡ್ಯಾಳ ನಿರೂಪಿಸಿದರು, ರವಿ ರಾಠೋಡ ವಂದಿಸಿದರು.