Friday, 22nd November 2024

ವೇತನ ಸಮಸ್ಯೆ: ಕಿಡ್ನಿ ಮಾರಾಟಕ್ಕಿದೆ ಎಂದ ಸಾರಿಗೆ ನೌಕರ

ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿದ ಗಂಗಾವತಿ ಘಟಕದ ನಿರ್ವಾಹಕ ಹನುಮಂತ

ಕೊಪ್ಪಳ: ಈಶಾನ್ಯ ಕರ್ನಾಟಕ ಸಾರಿಗೆ ನೌಕರನೋರ್ವ ತನಗೆ ಸರಿಯಾದ ವೇತನ ಸಿಗದ ಕಾರಣ ತನ್ನ ಕುಟುಂಬ ನಿರ್ವಹಣೆ ಮಾಡಲಾಗದ ಸ್ಥಿತಿ ಬಂದೊದಗಿದ ಕಾರಣ ತನ್ನ ಕಿಡ್ನಿ ಮಾರಾಟ ಮಾಡುವುದಾಗಿ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿದ್ದಾನೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಘಟಕದಲ್ಲಿ ನಿರ್ವಾಹಕನಾಗಿ ಕೆಲಸ ಮಾಡುವ ಹನುಮಂತ ಕಲೆಗಾರ ಪೋಸ್ಟ್ ಹಾಕಿದ್ದಾನೆ. ಕೋವಿಡ್ ನಂತರ ಸಾರಿಗೆ ನೌಕರರಿಗೆ ಸರಿಯಾಗಿ ಕೆಲಸ ಹಾಗೂ ವೇತನ ದೊರೆಯುತ್ತಿಲ್ಲ. ಹನುಮಂತನಿಗೆ 16 ಸಾವಿರ ವೇತನ ವಿದ್ದು, ಮೊದಲು 10 ಸಾವಿರಗಿಂತಲೂ ಅಧಿಕ ಹಣ ಕೈ ಸೇರುತ್ತಿತ್ತು.

ಕಳೆದೆರೆಡು ತಿಂಗಳಿಂದ ಅರ್ಧ ಸಂಬಳವೆಂದು 3,300 ವೇತನ ಹಾಕಿದ್ದಾರೆ. ಕುಟುಂಬ ಸಮೇತ ಕುಷ್ಟಗಿ ಪಟ್ಟಣದಲ್ಲಿ ವಾಸ ವಿದ್ದು, ಮನೆ ಬಾಡಿಗೆಯೇ 3 ಸಾವಿರ ಇದೆ. ತಾಯಿ, ಹೆಂಡತಿ ಹಾಗೂ ಮೂರು ಮಕ್ಕಳಿದ್ದು, ರೇಷನ್ ತರಲು ಸಹ ಹಣವಿಲ್ಲ ದಂತಾಗಿದೆ. ತಾಯಿಗೆ ಆರೋಗ್ಯ ಸಮಸ್ಯೆ ಇದ್ದು, ಚಿಕಿತ್ಸೆ ಕೊಡಿಸಬೇಕಿದೆ. ಹೀಗಾಗಿ ಮನನೊಂದು ಕಿಡ್ನಿ ಮಾರಾಟ ಮಾಡುವು ದಾಗಿ ಪೋಸ್ಟ್ ಹಾಕಿದ್ದೇನೆ ಎಂದು ಹನುಮಂತಪ್ಪ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಕೋಟ್…
ಕಂಡಕ್ಟರ್ ಹನುಮಂತನ ಕಳೆದ 6 ತಿಂಗಳ ಕರ್ತವ್ಯದ ಹಾಜರಾತಿ ಪರಿಶೀಲಿಸಿದಾಗಿ ಅವರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದೇ ವಿಷಯಕ್ಕೆ ಈ ಹಿಂದೆ ಅಮಾನತು ಆಗಿದ್ದರು. ವೈಯಕ್ತಿಕ ಕಾರಣಕ್ಕಾಗಿ ರಜೆ ಮಾಡುವುದಾಗಿ ಹೇಳಿದ್ದರು ಆದರೆ ಯಾವುದೇ ದಾಖಲಾತಿ ಸಲ್ಲಿಸಿಲ್ಲ. ವೈಯಕ್ತಿಕ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತಂದಲ್ಲಿ ಸರಿಪಡಿಸಲಾಗುವುದು. ಆರೋಗ್ಯ ಸಮಸ್ಯೆ ಇದ್ದಲ್ಲಿ ಸಂಸ್ಥೆಯಿಂದ ಸಹಕಾರ ನೀಡಲಾಗುವುದು.
ಸಂಜೀವಮೂರ್ತಿ, ಗಂಗಾವತಿ ಡಿಪೋ ಮ್ಯಾನೇಜರ್