Sunday, 15th December 2024

ಪತ್ರಕರ್ತರ ಸಂಘ: ನೂತನ ಅಧ್ಯಕ್ಷ ಎಂ.ಗುಂಡಪ್ಪ ಪ್ರ.ಕಾರ್ಯದರ್ಶಿಯಾಗಿ ವಿರೇಶ ಹರಕಂಚಿ ಆಯ್ಕೆ

ಸಿರವಾರ : ಪತ್ರಕರ್ತರ ಚುನಾವಣೆ ಫಲಿತಾಂಶ ಹೊರಬಿದಿದ್ದೆ.ನೂತನ ಅಧ್ಯಕ್ಷರಾಗಿ ಎಂ.ಗುಂಡಪ್ಪ ಪ್ರಧಾನ ಕಾರ್ಯದರ್ಶಿ ಯಾಗಿ ವಿರೇಶ ಹರಕಂಚಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಿರವಾರ ತಾಲ್ಲೂಕು ಘಟಕದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದಿದ್ದು ಅವಿರೋಧವಾಗಿ ನೂತನ ತಾಲ್ಲೂಕ ಅಧ್ಯಕ್ಷರಾಗಿ ಎಂ ಗುಂಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ವಿರೇಶ ಹರಕಂಚಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಜಿಲ್ಲಾಧ್ಯಕ್ಷರಾದ ಆರ್ ಗುರುನಾಥ ಅಧಿಕೃತವಾಗಿ ಪ್ರಕಟಿಸಿ ದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ೨೦೨೨-೨೫ ನೇ ಸಾಲಿನ ನೂತನ ತಾಲ್ಲೂಕ ಘಟಕದ ಪದಾಧಿಕಾರಿಗಳ ಆಯ್ಕೆ ಗಾಗಿ ಸಭೆ ಕರೆಯಲಾಗಿತ್ತು ಜಿಲ್ಲಾ ಅಧ್ಯಕ್ಷರಾ ದ ಆರ್.ಗುರುನಾಥ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿ ಕಾರಿ ಗಳನ್ನು ಆಯ್ಕೆ ಮಾಡಲಾಯಿತು.

ಸರ್ವ ಸದಸ್ಯರ ಒಮ್ಮತದದಿಂದ ಒಪ್ಪಿಗೆ ಸೂಚಿಸಿದರು. ನಂತರ ನೂತನ ಪದಾಧಿಕಾರಿ ಗಳಿಗೆ ಸನ್ಮಾನ ಮಾಡಿ, ನಂತರ ಮಾತ ನಾಡಿದ ಅಧ್ಯಕ್ಷರಾದ ಆರ್ ಗುರುನಾಥ ಒಗ್ಗಟಿನಲ್ಲಿ ಬಲವಿದೆ ಎಂದು ತೋರಿಸಿದ್ದಿರಾ. ಈ ಒಗ್ಗಟ್ಟಿನ ಒಮ್ಮತ್ತ ಮುಂದೆಯು ಸಹ ಹೀಗೆ ಇರಬೇಕು. ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಅಧ್ಯಕ್ಷ ಸ್ಥಾನ ನಿಭಾಯಿಸಲು ಮುಂದಾಗಬೇಕು ಎಂಬ ಸಲಹೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಎಂ. ಪಾಷಾ, ಶರಣ ಬಸವ ನೀರಮಾನ್ವಿ, ಸೂಗೂರೇಶ್ವರ ಗುಡಿ ವೆಂಕಟೇಶ ಹೂಗಾರ್, ಸಿರವಾರ ತಾಲೂಕು ಮಾಜಿ ಅಧ್ಯಕ್ಷ ಸುರೇಶ ಹೀರಾ, ಬಿಹೆಡ್ ರಾಮಣ್ಣ, ಶಿವಕುಮಾರ್ ಕವಿತಾಳ ಸೇರಿದಂತೆ ಸಿರವಾರ ಹಾಗೂ ಕವಿತಾಳ ಸದಸ್ಯರಿದ್ದರು.