ಪಾವಗಡ : ಪಟ್ಟಣದ ಶಾರದ ವಿದ್ಯಾಶಾಲೆ ಯಲ್ಲಿ ಸಮಗ್ರ ಸೇವಾಭಿವೃದ್ದಿ ಸಂಸ್ಥೆಯ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ
ಅಧ್ಯಕ್ಷ ಮುನಿಸ್ವಾಮಿ ಹಾಗೂ ಕಾರ್ಯದರ್ಶಿ ಶಶಾಂಕ್ ಮಾತನಾಡಿದರು.
ಪಾವಗಡ ತಾಲೂಕಿನಲ್ಲಿ ಕೋವಿಡ್19 ಪ್ರಕರಣಗಳು ತಡೆಯಲು ವಿವಿಧ ಸಂಘಟನೆ ಗಳು ಹಾಗೂ ರಾಜಕೀಯ ಪಕ್ಷಗಳು ಅವರದೇ ಆದ ಸೇವೆ ಗಳು ಸಲ್ಲಿಸುತ್ತ ಬರುತ್ತಿವೆ. ಇದೇ ರೀತಿಯಲ್ಲಿ ತಾಲೂಕಿನ ವಿವಿಧ ಕಡೆಗಳಲ್ಲಿ ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ವತಿಯಿಂದ ಸುಮಾರ ಇಪ್ಪತ್ತು ಲಕ್ಷ ವೆಚ್ಚದಲ್ಲಿ ಸ್ಯಾನಿಟೈಸ್ ಸಿಂಪಡಣೆ ಕಾರ್ಯ ಪ್ರಾರಂಭ ಮಾಡಿದ್ದು.ಇದಕ್ಕೆ ತಹಸೀಲ್ದಾರ್. ಹಾಗು ಇಒ ರವರ ಅಪ್ಪಣೆ ಪ್ರತಿ ಪಡೆದು ಕೆಲಸವನ್ನು ಪ್ರಾರಂಭಿಸಲಾಗಿದೆ.ಅದರೆ ಏಕ ಏಕಿ ತಹಶಿಲ್ದಾರ್ ಕೆ. ಆರ್.ನಾಗರಾಜ್ ಕರೆ ಮಾಡಿ ಜಿಲ್ಲಾಧಿಕಾರಿ ಯವರ ಅಪ್ಪಣೆ ಪ್ರತಿ ಪಡೆದು ಸ್ಯಾನಿಟೈಸ್ ಕೆಲಸ ಮಾಡಿ ಎಂದು ತಿಳಿಸಿರುವ ಹಿಂದೆ ಅಸಹಾಯಕತೆ ಯನ್ನು ಹೊರ ಹಾಕಿರುವುದರ ಹಿಂದೆ ಕೆಲ ಕಾಣದ ರಾಜಕೀಯ ಸೋಂಕು ಕಂಡು ಬಂದ ಹಾಗೆ ಕಾಣಿಸುತ್ತಿದೆ ಎಂದು ಸಂಘದ ಕಾರ್ಯದರ್ಶಿ ಶಶಾಂಕ್ ಆರೋಪಿಸಿದ್ದಾರೆ.
ತಾಲೂಕಿನಲ್ಲಿ ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಮಗ್ರ ಸೇವಾಭಿವೃದ್ದ ಟ್ರಸ್ಟ್ ವತಿಯಿಂದ ತಮಿಳುನಾಡಿನ ಸುಗುರಾಧನ ಸಂಸ್ಥೆ ಯೊಂದಿಗೆ ಒಪ್ಪಂದ ಮಾಡಿಕೊಂಡು ತಾಲೂಕಿನ252 ಹಳ್ಳಿಗಳಿಗೆ ಸ್ಯಾನಿಟೈಸ್ ಸಿಂಪಡಣೆ ಕಾರ್ಯಕ್ಕೆ ಇದೇ ತಾಲೂಕಿನ ತಹಸೀಲ್ದಾರ್ ಇತರೆ ಅಧಿಕಾರಿಗಳುಗಳೇ ಮೇ 18 ರಂದು ಚಾಲನೆ ನೀಡಿ ತದ ನಂತರ ಎರಡನೇ ದಿನಕ್ಕೆ ಸ್ಥಗಿತಗೊಳಿಸಲಾಗಿರುವುದು ವಿಪರ್ಯಾಸವೇ ಸರಿ.
ನಾವು ನಮ್ಮ ತಾಲೂಕಿನ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಕೆಲಸ ಮಾಡುತ್ತಿದ್ದೇವೆ ಕಷ್ಟವೆಂದ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳು ತಾಲೂಕಿನ ಜನರ ಸೇವೆ ಮಾಡಲಿಕ್ಕೆ ಅನುಮತಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಮುನಿಸ್ವಾಮಿ.ಮದ್ದೆ ನರಸೇಗೌಡ, ರವಿಕುಮಾರ್, ಕೆ.ಟಿ.ಹಳ್ಳಿ ಚಂದ್ರು, ತಿಪ್ಪೇಸ್ವಾಮಿ ಇತರರು ಇದ್ದರು.