ಮುದ್ದೇಬಿಹಾಳ: ಸರೂರಿನ ಆರಾಧ್ಯದೈವ ರೇವಣಶಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭೇಟಿ ನೀಡಿದ ಸಮಾಜ ಸೇವಕ ಸಿ.ಬಿ.ಅಸ್ಕಿ ಅವರಿಗೆ ಸರೂರ ಹಾಲುಮತ ಗುರುಪೀಠದ ಗುರುಗಳು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಸ್ಕಿ ಪೌಂಡೆಶನ್ ಮುಖ್ಯಸ್ಥ ಸಿ.ಬಿ.ಅಸ್ಕಿ ತಾಲೂಕಿನ ಸರೂರ ಗ್ರಾಮದಲ್ಲಿ ನಿರ್ಮಾಣವಾಗು ತ್ತಿರುವ ೧ಕೋಟಿ ವೆಚ್ಚದ ಯಾತ್ರಾ ನಿವಾಸ ಕಟ್ಟಡದ ಕಾಮಗಾರಿಯು ಅರ್ದಕ್ಕೆ ನಿಂತಿರುವದು ವಿಪರ್ಯಾಸ ಕೂಡಲೆ ಶಾಸಕರು ಯಾತ್ರಾ ನಿವಾಸ ಕಟ್ಟಡ ಕಾಮಗಾರಿಯನ್ನು ಮುಗಿಸಿ ಸಕಲ ಭಕ್ತರಿಗೆ ಅನೂಕೂಲವಾಗು ವಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಹಾಲುಮತ ಶ್ರೀರೇವಣಸಿದ್ದೇಶ್ವರ ಮೂಲಪೀಠವು ಮೋದಲಿನಿಂದಲು ಭಕ್ತರಪಾಲಿನ ಆರಾಧ್ಯದೈವವಾಗಿದೆ. ಭಕ್ತರಿಗೆ ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯವನ್ನು ಮಾಡುವದರಲ್ಲಿ ಮೂಂಚೂನಿಯಲ್ಲಿದೆ. ಮಠದ ಸಾಮಾಜಿಕ ಕಾರ್ಯ ಹೀಗೆ ಮುಂದು ವರೆಯಲಿ ಎಂದು ಹೇಳಿದರು.
ಈ ಸಮಯದಲ್ಲಿ ಶಿವಯ್ಯ ಪೂಜಾರ, ಸಿದ್ದಯ್ಯ ಗುರುವಿನ, ಶ್ರೀಶೈಲ ಪೂಜಾರಿ, ಪ್ರಭುಗೌಡ ಪಾಟೀಲ, ಮೆಹಬೂಬ ಮಕಾನದಾರ, ಅರವಿಂದ ಕಾಸಿನಕುಂಟಿ ಮತ್ತಿತರರು ಇದ್ದರು.