Saturday, 14th December 2024

ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಶಾಲೆಗೆ ಬಣ್ಣ

ಹರಪನಹಳ್ಳಿ: ರಾಷ್ಟ್ರಪಿತ ಗಾಂಧಿ ಜಯಂತಿ ನಿಮಿತ್ಯ ಸಂತೋಷ್ ಲಾಡ್ ಫೌಂಡೇಷನ್-ಕರ್ನಾಟಕ ವತಿಯಿಂದ ಹಮ್ಮಿಕೊಳ್ಳ ಲಾಗಿರುವ ‘ಶಾಲೆಗೆ ಬಣ್ಣ’ ಎಂಬ ವಿನೂತನ ಕಾರ್ಯಕ್ರಮಕ್ಕೆ  ಹರಪನಹಳ್ಳಿ ಪಟ್ಟಣದ ಹರಿಹರ ವೃತ್ತದಲ್ಲಿನ ಬಾಲಕೀಯರ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡಿಗೆ, ಯುವ ಮುಖಂಡ ತೆಲಿಗಿ ಉಮಾಕಾಂತ  ಬಣ್ಣ ಹಚ್ಚುವುದರ ಮೂಲಕ ಚಾಲನೆ ನೀಡಿದರು.
ಪಟ್ಟಣದ ಬಾಲಕೀಯರ ಸರ್ಕಾರಿ ಪ್ರೌಢ ಶಾಲೆ ಹಾಗೂ ಜ್ಯೂನಿಯರ್ ಕಾಲೇಜ್ ಕಾಂಪೌಂಡಿಗೆ ಬಣ್ಣ ಹಚ್ಚಿ, ನೂತನ ವಿಜಯ ನಗರ ಜಿಲ್ಲೆಯ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಸಾರುವ ಚಿತ್ರಗಳನ್ನು ಶಾಲಾ ಕಾಂಪೌಂಡಿನ ಮೇಲೆ ಕಲಾವಿದರ ಮೂಲಕ ಚಿತ್ರಕಲಾಕೃತಿ ರಚಿಸಲು ಸಂತೋಷ್ ಲಾಡ್-ಫೌಂಡೇಷನ್ ಮುಂದಾಗಿರು ವುದು ಪ್ರಶಂಸದಾಯಕ ವಿಚಾರ. ಗ್ರಾಮೀಣ ಮಟ್ಟದಲ್ಲಿಯೂ ಕೂಡ ಈ ಕಾರ್ಯಕ್ರಮ ಮುಂದುವರೆದರೆ ಕರೋನ ಕಾಲದ ನಂತರ ಆರಂಭಗೊಂಡಿರುವ ಶಾಲೆಗಳಿಗೆ ಹೊಸ ಕಳೆ ಬರಲಿದೆ ಎಂದು ಕಾಂಗ್ರೆಸ್ ಮುಖಂಡ ತೆಲಿಗಿ ಉಮಾಕಾಂತ ಅಭಿಪ್ರಾಯಪಟ್ಟಿ ದ್ದಾರೆ.
ಗಾಂಧಿ ಜಯಂತಿ ಎಂಬುದು ಕೇವಲ ಜಯಂತಿ ಆಚರಣೆಗೆ ಸೀಮಿತ ಮಾಡದೇ ಶಾಲೆಗಳಿಗೆ ಬಣ್ಣ ಹಚ್ಚಿ, ಶಾಲಾ ಪಠ್ಯದಲ್ಲಿ ದಾಖಲಾಗಿರುವ ಸಾಂಸ್ಕೃತಿಕ ವ್ಯಕ್ತಿಗಳ ಹಾಗೂ ಐತಿಹಾಸಿಕ ಸ್ಥಳಗಳ ಚಿತ್ರಕಲಾಕೃತಿಗಳನ್ನು ಶಾಲಾ ಕಾಂಪೌಂಡ ಮೇಲೆ ಚಿತ್ರಿಸಿದರೆ ವಿಧ್ಯಾರ್ಥಿಗಳ ಕಲಿಕಾ ಸಾಮಾರ್ಥ್ಯ ಹೆಚ್ಚಾಗುವುದು ಎಂಬ ಉದ್ದೇಶದಿಂದ ಮಾಜಿ ಸಚಿವರಾದ ಸಂತೋಷ್ ಲಾಡ್ ರವರು ಗಾಂಧಿ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಫೌಂಡೇ ಷನ್ ವತಿಯಿಂದ ಶಾಲಾ ಕಾಂಪೌಂಡಿಗೆ ಬಣ್ಣ ಬಳಿಯುವ ಮೂಲಕ ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದು ಸಂತೋಷ್ ಲಾಡ್ ಫೌಂಡೇಚನ್ನಿನ ಹರಪನಹಳ್ಳಿ ಅಧ್ಯಕ್ಷ ತಳವಾರ ಮಂಜುನಾಥ ಕಾರ್ಯಕ್ರಮದ ಉದ್ದೇಶವನ್ನು ಸ್ಪಷ್ಟ ಗೊಳಿಸಿದರು.
ಈ ಬಾರಿ ಇಡೀ ಅಕ್ಟೋಬರ್ ತಿಂಗಳು ಗಾಂಧಿ ಜಯಂತಿಯನ್ನು  ಆಚರಿಸಲು ಉದ್ದೇಶಿಸಿರುವ ಸಂತೋಷ್ ಲಾಡ್ ಫೌಂಡೇಶನ್, ಹರಪನಹಳ್ಳಿ ಪಟ್ಟಣದ ಈ ಎರಡೂ ಶಾಲೆಗಳ ಕಾಂಪೌಂಡಿಗೆ ವರ್ಣರಂಜಿತ ಬಣ್ಣ ಲೇಪನ ಮಾಡಿ ತದನಂತರದಲ್ಲಿ ಕಲಾ ವಿದರ ಮೂಲಕ ಸಾಂಸಕೃತಿಕ ಅಭಿರುಚಿ ಹೊಂದಿದ, ವಿಧ್ಯಾರ್ಥಿಗಳ ಪಠ್ಯಕ್ಕೆ ಸಂಭಂಧಿಸಿದ ಹಾಗೂ ಮಹಾತ್ಮ ಗಾಂಧಿಯವರ ವಿವಿಧ ಭಂಗಿಯ ಚಿತ್ರಕಲಾಕೃತಿಯನ್ನು ರಚಿಸಿ ವಿಧ್ಯಾರ್ಥಿಗಳ ಕಲಿಕಾ ಸ್ಥಳಕ್ಕೆ ಮೆರುಗು ತರುವ ಯೋಜನೆ ಹೊಂದಿದೆ. ಹರಪನಹಳ್ಳಿ ತಾಲ್ಲೂಕಿನಾದ್ಯಂತ ಸಂತೋಷ್ ಲಾಡ್ ಫೌಂಡೇಷನ್ ಕೈಗೊಳ್ಳುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀಷಾನ್ ಹ್ಯಾರಿಸ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಾದಿಕ್ ಸಾಲಮೂರಳ್ಳಿ, ಎನ್.ಎಸ್.ಯು.ಐ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ್ ಯಾದವ್, ಯುವ ಕಾಂಗ್ರೆಸ್ ಕಾರ್ಯಕರ್ತರಾದ ತಿಮ್ಮಲಾಪುರ ಕೃಷ್ಣಕಾಂತ್, ಬಾಲಾಜಿ, ಮೋಹನ್, ಗಣೇಶ್, ಅಹ್ಮದ, ವೆಂಕಟೇಶ್, ಶಶಾಂಕ್, ಸಾಧಿಕ್ ಮೆಡ್ಲೆರಿ, ನಾಗರಾಜ್ ಮುಂತಾದವರಿದ್ದರು.
ನವರಾತ್ರಿಗೆ ಅನಂತನಹಳ್ಳಿ ಗ್ರಾಮಕ್ಕೆ ಬಣ್ಣ.
ಹರಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಂತನಹಳ್ಳಿ ಗ್ರಾಮವೂ ಚಿಕ್ಕ ಗ್ರಾಮವಾಗಿ ನೈಸರ್ಗಿಕ ಕಲ್ಲುಬಂಡೆಗಳ ಮೇಲೆ ವಿಸ್ತಾರಗೊಂಡಿದೆ. ಹರಪನಹಳ್ಳಿ ಪಟ್ಟಣದಿಂದ ಹರಿಹರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹರಪನಹಳ್ಳಿ ಪಟ್ಟಣದಿಂದ 7.00  ಕಿ.ಮಿ ಅಂತರದಲ್ಲಿ ಕಾಣಸಿಗುವ ಅನಂತನಹಳ್ಳಿ ಗ್ರಾಮದಲ್ಲಿ ಸಂಪೂರ್ಣವಾಗಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ಬದುಕು ಕಟ್ಟಿಕೊಂಡಿದ್ದಾರೆ.
 ಕಲ್ಲು ಗಣಿಗಾರಿಕೆಗಳಲ್ಲಿ ಕೈ ಕೆಲಸ ಮಾಡಿಕೊಂಡಿರುವ, ಆರ್ಥಿಕವಾಗಿ ಅತೀ ಹಿಂದುಳಿದಿರುವ  ಇಲ್ಲಿನ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ‘ನವರಾತ್ರಿ-ದಸರ’ ಹಬ್ಬದ ನಿಮಿತ್ಯ ‘ಸಂತೋಷ್ ಲಾಡ್ ಫೌಂಡೇಷನ್’ ನೇತೃತ್ವದಲ್ಲಿ  ಗ್ರಾಮದ ಸಮಸ್ತ ಮನೆಗಳಿಗೆ ಹಾಗೂ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವರ್ಣರಂಜಿತ ಬಣ್ಣಗಳನ್ನು ಬಳಿಯಲು ಉದ್ದೇಶಿಸ ಲಾಗಿದೆ ಎಂದು ಸಂತೋಷ್ ಲಾಡ್ ಫೌಂಡೇಷನ್ ಕಾರ್ಯದರ್ಶಿ ಇರ್ಫಾನ್ ಮುದಗಲ್ ತಿಳಿಸಿದ್ದಾರೆ.