Friday, 22nd November 2024

SBI Recruitment 2024: ಗಮನಿಸಿ: SBIಯಲ್ಲಿ ಖಾಲಿ ಇದೆ 1,513 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

SBI Recruitment 2024

ಬೆಂಗಳೂರು: ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎನ್ನುವ ನಿಮ್ಮ ಕನಸು ನನಸಾಗುವ ದಿನ ಹತ್ತಿರಲ್ಲೇ ಇದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಖಾಲಿ ಇರುವ ವಿವಿಧ ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (SBI Recruitment 2024). ಡೆಪ್ಯುಟಿ ಮ್ಯಾನೇಜರ್‌, ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ ಸೇರಿದಂತೆ ಒಟ್ಟು 1,513 ಹುದ್ದೆಗಳು ಖಾಲಿ ಇವೆ. ಬಿಇ/ಬಿ.ಟೆಕ್‌,ಎಂಇ/ಎಂ.ಟೆಕ್‌ ವಿದ್ಯಾರ್ಹತೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್‌ 4 (Job Guide).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಪ್ರಾಜೆಕ್ಟ್‌ ಮ್ಯಾನೇಜ್‌ಮೆಂಟ್‌ & ಡೆಲಿವರಿ- 187 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫ್ರಾ ಸಪೋರ್ಟ್‌ & ಕ್ಲೌಡ್ ಆಪರೇಷನ್ಸ್‌- 412 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) -ನೆಟ್‌ವರ್ಕಿಂಗ್‌ ಆಪರೇಷನ್ಸ್‌ – 80 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌, ಎಂಇ/ಎಂ.ಟೆಕ್‌
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಐಟಿ ಆರ್ಕಿಟೆಕ್ಟ್‌ – 27 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್ಸ್) – ಇನ್ಫರ್ಮೇಷನ್‌ ಸೆಕ್ಯುರಿಟಿ – 7 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಡೆಪ್ಯುಟಿ ಮ್ಯಾನೇಜರ್‌ – 798 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ – ಐಟಿ ರಿಸ್ಕ್‌ – 1 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ
ಅಸಿಸ್ಟಂಟ್‌ ವೈಸ್‌ ಪ್ರೆಸಿಡೆಂಟ್‌-ಐಟಿ ರಿಸ್ಕ್‌ – 1 ಹುದ್ದೆ, ವಿದ್ಯಾರ್ಹತೆ: ಬಿಇ/ಬಿ.ಟೆಕ್‌/ಎಂಸಿಎ/ಎಂಇ/ಎಂ.ಟೆಕ್‌/ಎಂ.ಎಸ್‌ಸಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 21ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಅರ್ಜಿ ಶುಲ್ಕವಾಗಿ ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಸಿ ಅಭ್ಯರ್ಥಿಗಳು 750 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಮೂಲಕ ನಡೆಸುವ ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಹುದ್ದೆಗಳಿಗೆ ಅನುಗುಣವಾಗಿ 48,480 ರೂ. – 93,960 ರೂ. ಮಾಸಿಕ ವೇತನ ದೊರೆಯಲಿದೆ.

ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅಸಿಸ್ಟಂಟ್‌/ಡೆಪ್ಯುಟಿ ವೈಸ್‌ ಪ್ರೆಸಿಡೆಂಟ್‌ ಹುದ್ದೆಗಳ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: sbi.co.inಗೆ ಭೇಟಿ ನೀಡಿ.

ಈ ಸುದ್ದಿಯನ್ನೂ ಓದಿ: Job Guide: ಸೈಂಟಿಸ್ಟ್‌ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌: ಇಲ್ಲಿದೆ ಹೊಸ ಟೈಮ್‌ ಟೇಬಲ್‌