Thursday, 12th December 2024

ಪಿಡಿಓಗಳಿಂದ ಲಕ್ಷಾಂತರ ರೂ. ಅವ್ಯವಹಾರ ತನಿಖೆಗೆ ಲೋಕೇಶ್ವರ ಆಗ್ರಹ

ತಿಪಟೂರು : ಕೇಂದ್ರ ಸರ್ಕಾರದಿಂದ ಎನ್.ಆರ್.ಐ.ಜಿ ಯೋಜನೆಯಡಿ ರೈತರಿಗೆ ಕೊಟ್ಟಿಗೆ, ಷೆಡ್ ಹಾಗೂ ಇಂಗುಗುAಡಿಗಳ ನಿರ್ಮಾಣಕ್ಕೆ ಫಲಾನುಭವಿಗಳಿಗೆ ನೀಡಬೇಕಿದ್ದ ಲಕ್ಷಾಂತ್ರರ ರೂಪಾಯಿಗಳನ್ನು ಪಿಡಿಓಗಳು ಅಕ್ರಮವಾಗಿ ಬೇರೆ ವೆಂಡರ್ ಗಳ ಅಕೌಂಟ್ ಗಳಿಗೆ ವರ್ಗಾಯಿಸಿ ಅಕ್ರಮ ಎಸಗಿದ್ದು ಈ ಬಗ್ಗೆ ಲೋಕಾಯುಕ್ತ ಅಥವಾ ಎಸಿಬಿ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಲೋಕೇಶ್ವರ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲ್ಲೂಕಿನ ಬಿಳಿಗೆರೆ, ಹಿಂಡಿಸ್ಕೆರೆ ಹಾಗೂ ತಡಸೂರು ಗ್ರಾಮ ಪಂಚಾಯಿತಿಗಳಲ್ಲಿ ಈ ಅಕ್ರಮ ನಡೆದಿರುವುದು ತಿಳಿದು ಬಂದಿದ್ದು ಇನ್ನೂ ಹಲವಾರು ಗ್ರಾಮಪಂಚಾಯಿತಿಗಳಿ0ದ ಮಾಹಿತಿ ಪಡೆಯುತ್ತಿದ್ದು ಸದ್ಯದಲ್ಲಿಯೇ ವಿವರಗಳನ್ನು ನೀಡುವುದಾಗಿ ತಿಳಿಸಿದರು. ಕೇಂದ್ರ ಸಕಾರದಿಂದ ಬರುವ ಯಾವುದೇ ಯೋಜನೆಯ ಹಣವನ್ನು ಫಲಾನುಭವಿಗಳ ಅಕೌಂಡ್ ಗಳಿಗೇ ನೇರವಾಗಿ ವರ್ಗಾವಣೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಎಲ್ಲ ಫಲಾನುಭವಿಗಳ ಹಣವನ್ನು ಒಬ್ಬನೇ ವೆಂಡರ್ ಹೆಸರಿಗೆ ಸುಮಾರು ೬೦ ರಿಂದ ೭೦ ಲಕ್ಷ ಹಣವನ್ನು ವರ್ಗಾವಣೆ ಮಾಡಲಾಗಿದ್ದು ಇದನ್ನು ತಾಲ್ಲೂಕು ಪಂಚಾಯಿತಿಯ ಇಓ ಯಾಕೆ ಗಮನಿಸಿಲ್ಲ ಅಥವಾ ಗಮನ ಬಂದರೂ ಯಾಕೆ ಪ್ರಶ್ನಿಸಲಿಲ್ಲ ಎಂದು ತಿಳಿಯ ಬಯಸಿದರು.

ಈ ವಿಚಾರಗಳು ಬಯಲಾದ ಮೇಲೆ ಕಳೆದ ಎರಡು ದಿನಗಳಿಂದ ಪಿಡಿಓಗಳು ಫಲಾನುಭವಿಗಳನ್ನು ಭೇಟಿ ಮಾಡಿ ಅವರಿಗೆ ಹಣವನ್ನು ನೀಡಿ ವೆಂಡರ್ ಅಕೌಂಡ್ ಗೆ ಹಣ ವರ್ಗಾಯಿಸಲು ತಾವೇ ಒಪ್ಪಿಗೆ ನೀಡಿರುವುದಾಗಿ ಪತ್ರಗಳನ್ನು ಪಡೆಯುತ್ತಿರುವು ದಾಗಿ ಮಾಹಿತಿ ಬಂದಿದೆ. ಈ ಕೂಡಲೇ ಸಿಇಓ ತನಿಖೆಗೆ ಆದೇಶ ನೀಡಿದರೆ ಸತ್ಯಾಂಶ ಬಯಲಿಗೆ ಬರುತ್ತದೆ ಎಂದರು.

ನಗರದಲ್ಲಿ ಪ್ರತಿ ವರ್ಷ ಮಳೆ ಬಂದಾಗ ಗಣೇಶ ಚಿತ್ರಮಂದಿರದ ಮುಂಭಾಗ ಮುಖ್ಯ ರಸ್ತೆಯಲ್ಲಿ ಯುಜಿಡಿ ತುಂಬಿ ರಸ್ತೆಗೆ ಹರಿದು ಸುಮಾರು ಅರ್ದ ಕಿಮೀ ನಷ್ಟು ಮುಖ್ಯರಸ್ತೆಯಲ್ಲಿ ಯುಜಿಡಿಯ ಕೊಳಚೆ ತುಂಬಿಕೊAಡು ಜನ ಓಡಾಡದ ಪರಿಸ್ಥಿತಿ ಉಂಟಾಗು ತ್ತದೆ. ಇದಕ್ಕೆ ಯುಜಿಡಿಯ ಕಳಪೆ ಕಾಮಾಗಾರಿ ಹಾಗೂ ಅವೈಜ್ಞಾನಿಕ ನಿರ್ವಹಣೆಯೇ ಕಾರಣ. ಅಲ್ಲದೆ ಈಡೇನಹಳ್ಳಿಯ ರಾಜಕಾಲುವೆಯ ಬಳಿ ಯುಜಿಡಿ ಡೈವರ್ಟಿಂಗ್ ಪ್ಲೇಟ್ ಸ್ಥಾಪಿಸಿದ್ದು ಅಲ್ಲಿ ಯುಜಿಡಿಯ ಕೊಳಚೆ ನೀರು ಲೀಕ್ ಆಗಿ ಈಚನೂರು ಕೆರೆಗೆ ಹರಿದುಹೋಗುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಇದನ್ನು ಸರಿಪಡಿಸಿ ರಸ್ತೆಯ ಮೇಲೆ ಹಾಗು ಕೆರೆಗೆ ಯುಜಿಡಿ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಎಪಿಎಂಸಿ ಸದಸ್ಯ ಬಸವರಾಜು, ಮುಖಂಡರಾದ ಶಂಕರಣ್ಣ, ಕಿರುತೆರೆ ನಟ ದಯಾನಂದಸಾಗರ್ ಇತರರು ಉಪಸ್ಥಿತರಿದ್ದರು.