Tuesday, 17th December 2024

Self Harming: ಕೆಲಸದ ಒತ್ತಡದಿಂದ ಬೇಸತ್ತು ಮುಖ್ಯೋಪಾಧ್ಯಾಯ ಆತ್ಮಹತ್ಯೆ

Self Harming

ಚನ್ನಪಟ್ಟಣ: ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರೊಬ್ಬರು (School Head Master) ವಿಷ ಕುಡಿದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ (Channapatna news) ತಾಲೂಕಿನ ಕುವೆಂಪು ಬಡಾವಣೆಯಲ್ಲಿ ನಡೆದಿದೆ. ಕೆಲಸದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಚನ್ನಪಟ್ಟಣ ತಾಲೂಕಿನ ಎಲೆತೋಟದಳ್ಳಿಯ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಸುಖೇಂದ್ರ (58) ಮೃತ ಶಿಕ್ಷಕ. ಶಾಲೆಯಲ್ಲಿ ಎಲ್ಲಾ ಕಾರ್ಯವನ್ನು ನಿಗದಿತ ಸಮಯಕ್ಕೆ ಮುಗಿಸಬೇಕೆಂದು ಇಲಾಖೆಯಿಂದ ಒತ್ತಡ ಇತ್ತು ಎನ್ನಲಾಗಿದೆ. ಒತ್ತಡವಿದ್ದುದರಿಂದಲೇ ನಮ್ಮ ತಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪುತ್ರ ಹೇಮಂತ್ ದೂರು ನೀಡಿದ್ದಾರೆ.

ಸುಖೇಂದ್ರ ಅವರು ಕೆಲಸದ ಒತ್ತಡಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವ್ಯಾಪಾರಕ್ಕೆ ಬಂದ ದಂಪತಿಯ ಮಗು ಕಿಡ್ನ್ಯಾಪ್

ದಾವಣಗೆರೆ: ಅಲೆಮಾರಿ ದಂಪತಿಯ 1 ವರ್ಷದ ಗಂಡು ಮಗುವನ್ನು ಅಪಹರಣ (child kidnap case) ಮಾಡಲಾಗಿದೆ. ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹರಪನಹಳ್ಳಿ ಪೊಲೀಸ್ ಠಾಣೆಗೆ ಮಗುವಿನ ತಂದೆ ಯುವರಾಜ್ ದೂರು ನೀಡಿದ್ದರು. ದೂರು ನೀಡಿ 1 ತಿಂಗಳಾದರೂ ಪೊಲೀಸರು ಪತ್ತೆಹಚ್ಚಿಲ್ಲ ಎಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿಕ್ಕಳ್ಳಿ ಮೂಲದ ಯುವರಾಜ್- ಸಾರಿಕಾ ದಂಪತಿ, ಮಗು ಅಪಹರಣವಾಗಿ 1 ತಿಂಗಳಾದರೂ ಸುಳಿವು ಸಿಕ್ಕಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಚಿಕ್ಕಳ್ಳಿ ಮೂಲದ ಕುಟುಂಬ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದರು. ಹರಪನಹಳ್ಳಿಯ ಯಮಹಾ ಶೋರೂಮ್ ಬಳಿ ಟೆಂಟ್ ಹಾಕಿದ್ದರು. ಪುತ್ರ ಆರ್ಯನ್ ಜತೆ ಟೆಂಟ್​ನಲ್ಲೇ ಯುವರಾಜ್, ಸಾರಿಕಾ ನೆಲೆಸಿದ್ದರು. ನವೆಂಬರ್ 16ರ ರಾತ್ರಿ ಟೆಂಟ್​ನಲ್ಲಿ ಮಲಗಿದ್ದಾಗ ಮಗುವಿನ ಅಪಹರಣ ಮಾಡಲಾಗಿದೆ.

ಇದನ್ನೂ ಓದಿ: Self Harming: ಹೆಂಡತಿ ಕಾಟಕ್ಕೆ ಮತ್ತೊಂದು ಬಲಿ, ಕಿರುಕುಳದಿಂದ ನೊಂದು ಪೊಲೀಸ್‌ ಆತ್ಮಹತ್ಯೆ