ಇಂಡಿ : ಬಂಜಾರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು,ಇವೆಲ್ಲವುಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿರುವುದಕ್ಕೆ ಎಸ್ಸಿ,ಎಸ್ಟಿ ಎಲ್ಲ ಸಮುದಾಯದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರದ ಸಚಿವ ಸಂಪುಟದ ಸಚಿವರಿಗೆ ಅಭಿನಂದನೆಗಳು. ಹಾಗೆಯೇ ಸದಾಶಿವ ಆಯೋಗದ ವರದಿ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಬಂಜಾರ ಸಮುದಾಯದ ಮುಖಂಡ ವಿಜಯ ಕುಮಾರ ರಾಠೋಡ ಮುಖ್ಯಮಂತ್ರಿ ಗಳಿಗೆ ಆಗ್ರಹಿಸಿದರು.
ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆರ್ಥಿಕವಾಗಿ ಹಿಂದುಳಿ ದರುವ ಬಂಜಾರ ಸಮುದಾಯವರು ಇಲ್ಲಿಯ ವರೆಗೂ ತುತ್ತಿನ ಚೀಲ ತುಂಬಿಸಿಕೊಳ್ಳಲು ಶಿಕ್ಷಣ ಕಲಿಯಬೇಕಾದ ಮಕ್ಕಳನ್ನು ಕರೆದು ಕೊಂಡು ದುಡಿಯಲು ನೆರೆಯ ಮಹಾರಾಷ್ಟç,ಗೊವಾ ರಾಜ್ಯಗಳಿಗೆ ಗೂಳೆ ಹೋಗುತ್ತಿದ್ದಾರೆ. ರಾಜ್ಯದ ಬಹುತೇಕ ತಾಂಡಾ ಗಳು ಅಭಿವೃದ್ದಿಯಿಂದ ವಂಚಿತಗೊ0ಡಿವೆ.
ಹಲವು ತಾಂಡಾಗಳು ಇನ್ನೂ ಕಂದಾಯ ಗ್ರಾಮಕ್ಕೆ ಒಳಪಟ್ಟಿರುವುದಿಲ್ಲ.ಈ ಎಲ್ಲ ಅಂಶ ಗಳನ್ನು ಅರಿತು ವಾಸ್ತವಿಕ ನೆಲೆಗೆಟ್ಟಿನ ಮೇಲೆ ರಾಜ್ಯದ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹವಾಗಿದೆ.ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮತ್ತಷ್ಟು ಬಲ ತುಂಬಿದ0ತಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಮೀಸಲಾತಿ ಹೆಚ್ಚಳ ಪ್ರಸ್ತಾಪ ಅಂಗೀಕಾರಗೊ0ಡಿರುವುದು ಕೂಡಲೆ ಕೇಂದ್ರ ಸರ್ಕಾರಕ್ಕೆ ಕಳುಹಿಸ ಬೇಕು. ಸರ್ಕಾರದ ಈ ನಿರ್ಧಾರಕ್ಕೆ ಅಭಿನಂದಿಸುವುದಾಗಿ ಹೇಳಿದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಚವ್ಹಾಣ,ಗ್ರಾಪಂ ಸದಸ್ಯ ಭೀಮು ಚವ್ಹಾಣ,ಪುರಸಭೆ ಸದಸ್ಯರಾದ ಪಿಂಟೂ ರಾಠೋಡ ಜಯರಾಮ ಚವ್ಹಾಣ, ರಾಜೇಶ ಪವಾರ, ಧರ್ಮು ರಾಠೋಡ, ಬಂಜಾರ ಯುವ ಘಟಕದ ಅಧ್ಯಕ್ಷ ರಾಜು ಪವಾರ, ರಂಗನಾಥ ಚವ್ಹಾಣ, ಸುರೇಶ ಚವ್ಹಾಣ, ಲೇಸು ರಾಠೋಡ, ಗಣೇಶ ಚವ್ಹಾಣ, ಮೋಹನ ರಾಠೋಡ, ಅವಿನಾಶ ಚವ್ಹಾಣ, ಸಂಜು ರಾಠೋಡ,ನಾಗೇಶ ರಾಠೋಡ,ಗಿರೀಶ ರಾಠೋಡ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.