Wednesday, 18th December 2024

Self employment Loan: ಸ್ವಯಂ ಉದ್ಯೋಗಕ್ಕೆ ಸಾಲ ಲಭ್ಯ, ಡಿ.29 ಕೊನೆಯ ದಿನ; ಇಂದೇ ಅರ್ಜಿ ಸಲ್ಲಿಸಿ

food cart

ಬೆಂಗಳೂರು: ಕರ್ನಾಟಕ ಸರ್ಕಾರದ ಅಂಬೇಡ್ಕರ್‌ ಅಭಿವೃದ್ದಿ ನಿಗಮವು ಸ್ವಯಂ ಉದ್ಯೋಗ (Self employment) ಯೋಜನೆಯಡಿ ಸಾರಥಿ ಫುಡ್‌ ಕಾರ್ಟ್‌ (Food cart) ಸ್ಥಾಪನೆ ಸಾಲ (loan) ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆಯ ದಿನವಾಗಿದೆ.

2024-25ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ನೇರ ಸಾಲ-ಕುರಿ ಸಾಕಾಣಿಕೆ ಯೋಜನೆ, ಸ್ವಾವಲಂಬಿತ ಸಾರಥಿ-ಫುಡ್ ಕಾರ್ಟ್ ಯೋಜನೆಗಳಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ನಿಗಮದ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳು ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ https://sevasindhu.karnataka.gov.in

ಸ್ವಯಂ ಉದ್ಯೋಗ ನೇರಸಾಲ-ಕುರಿ ಸಾಕಾಣಿಕೆ ಯೋಜನೆ : ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುರಿ ಸಾಕಾಣಿಕೆ ಉದ್ದೇಶಕ್ಕಾಗಿ ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುವುದು. ಘಟಕ ವೆಚ್ಚ ರೂ.1 ಲಕ್ಷ, ಸಹಾಯಧನ ರೂ. 50 ಸಾವಿರ, ಸಾಲ ರೂ. 50 ಸಾವಿರ.

ಸ್ವಾವಲಂಬಿತ ಸಾರಥಿ-ಫುಡ್ ಕಾರ್ಟ್ : ಸ್ವಾವಲಂಬಿತ ಸಾರಥಿ ಯೋಜನೆಯಡಿ ಫುಡ್‍ಕಾರ್ಟ್ ಉದ್ದೇಶಕ್ಕಾಗಿ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಮಾತ್ರ ಬ್ಯಾಂಕ್‍ಗಳ ಸಹಯೋಗದೊಂದಿಗೆ ಯೋಜನೆ ಅನುಷ್ಟಾನ. ಸಾಲದ ಮೊತ್ತಕ್ಕೆ ಶೇ.75 ರಷ್ಟು ಅಥವಾ ಗರಿಷ್ಟ ರೂ.4 ಲಕ್ಷಗಳ ಸಹಾಯಧನ. ಉಳಿದ ಮೊತ್ತ ಬ್ಯಾಂಕ್ ಸಾಲ ಆಗಿರುತ್ತದೆ.

ಆಸಕ್ತಿಯುಳ್ಳ ಅರ್ಹ ಪರಿಶಿಷ್ಟ ಜಾತಿಗೆ ಸೇರಿದ ಈ ಹಿಂದೆ ನಿಗಮದಿಂದ ಯಾವುದೇ ಸಾಲ ಸೌಲಭ್ಯ ಪಡೆಯದ 18 ರಿಂದ 50 ವರ್ಷ ವಯೋಮಿತಿ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರು. 2023-24 ನೇ ಸಾಲಿನಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವುದಿಲ್ಲ

ಯೋಜನೆಗಳ ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್ https://adcl.karnataka.gov.in ಅಥವಾ ಕಲ್ಯಾಣ ಮಿತ್ರ ಏಕೀಕೃತ ಎಸ್‍ಸಿ, ಎಸ್‍ಟಿ ಸಹಾಯವಾಣಿ 9482300400 ನ್ನು ಸಂಪರ್ಕಿಸಬಹುದು.

ಅರ್ಜಿಯನ್ನು ಡಿಸೆಂಬರ್ 29 ರೊಳಗೆ ಗ್ರಾಮ ಓನ್ ಕರ್ನಾಟಕ, ಓನ್ ಬೆಂಗಳೂರು ಸೇವಾ ಕೇಂದ್ರ ಹಾಗೂ https://Sevasindhu.karnataka.gov.in ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವವರು ಉದ್ದೇಶ ಬದಲಾವಣೆ ಇಚ್ಛಿಸಿದಲ್ಲಿ ನೇರವಾಗಿ ವೆಬ್‍ಸೈಟ್ ವಿಳಾಸ https://swdcorp.karnataka.gov.in/ADCLPortal ನಲ್ಲಿ ಉದ್ದೇಶ ಬದಲಾವಣೆ ಮಾಡಬಹುದಾಗಿರುತ್ತದೆ. ಅಥವಾ ಸಂಬಂಧಿಸಿದ ಜಿಲ್ಲಾ ಕಚೇರಿಗಳಲ್ಲಿ ಮನವಿ ಪತ್ರ ಸಲ್ಲಿಸಬಹುದಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇದನ್ನೂ ಓದಿ: Jobs alert: ಬಿಇಎಲ್‌ನಲ್ಲಿ 1.20 ಲಕ್ಷ ರೂ. ಸಂಬಳದ ಹುದ್ದೆಗಳಿವೆ, ಇಂದೇ ಅಪ್ಲೈ ಮಾಡಿ