Thursday, 12th December 2024

Self Harming: ಲಿವ್ ಇನ್ ರಿಲೇಶನ್‌ನಲ್ಲಿದ್ದ ನಟಿ ಮದುವೆಗೆ ನಿರಾಕರಣೆ; ಆತ್ಮಹತ್ಯೆಗೆ ಶರಣಾದ ಯುವಕ

Self Harming

ಬೆಂಗಳೂರು: ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪ್ರೇಯಸಿ, ಧಾರಾವಾಹಿ ನಟಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವಕನೊನ್ನ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮದನ್ (25) ಮೃತ ಯುವಕ. ಈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Self Harming).

ಘಟನೆಯ ಹಿನ್ನೆಲೆ

ʼಕನ್ನಡತಿʼ ಧಾರಾವಾಹಿಯಲ್ಲಿ ನಟಿಸಿದ್ದ ವೀಣಾ ಮತ್ತು ಮದನ್ ಪರಸ್ಪರ ಪ್ರೀತಿಸುತ್ತಿದ್ದು, ಕೆಲವು ದಿನಗಳಿಂದ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಇಬ್ಬರೂ ಮಂಗಳವಾರ ರಾತ್ರಿ ಒಂದೇ ರೂಮಿನಲ್ಲಿ ಪಾರ್ಟಿ ಕೂಡ ಮಾಡಿದ್ದರು. ಈ ವೇಳೆ ಮದನ್ ವೀಣಾಗೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಆದರೆ ವೀಣಾ ಮದುವೆಯನ್ನು ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಇದರಿಂದ ನೊಂದ ಮದನ್‌ ಮಧ್ಯರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಮದನ್ ಇವೆಂಟ್ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರಲ್ಲಿ ಡೆಕೊರೇಟ್ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಸಿರಿಯಲ್ ಸೆಟ್‌ನಲ್ಲಿ ವೀಣಾಳ ಪರಿಚಯವಾಗಿತ್ತು. ಬಳಿಕ ಇಬ್ಬರ ಮಧ್ಯೆ ಸಲುಗೆ ಬೆಳೆದಿತ್ತು. ಇಬ್ಬರು ಲೀವಿಂಗ್ ರಿಲೇಶನ್ ಹೊಂದಿದ್ದರು ಎನ್ನಲಾಗಿದೆ.

ಸದ್ಯ ವೀಣಾಗಳನ್ನು ವಶಕ್ಕೆ ಪಡೆದಿರುವ ಹುಳಿಮಾವು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೀಣಾ ಧಾರಾವಾಹಿ ಜತೆಗೆ ಕೆಲವು ಜಾಹೀರಾತುಗಳಲ್ಲಿಯೂ ನಟಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ: Assault case: ಕೆಲಸ ಸಿಕ್ಕಿಲ್ಲ ಅಂತ ಬಿಎಂಟಿಸಿ ಕಂಡಕ್ಟರ್​ಗೆ ಚಾಕುವಿನಿಂದ ಇರಿದ ಸೈಕೋ ಪ್ರಯಾಣಿಕ!