Monday, 16th December 2024

Self Harming: ಹೆಂಡ್ತಿ ಕಾಟಕ್ಕೆ ಬೇಸತ್ತು ಪ್ರಾಣ ಬಿಟ್ಟ ಮತ್ತೊಬ್ಬ ವ್ಯಕ್ತಿ; ಡೆತ್‌ ನೋಟ್‌ ಬರೆದು ಆತ್ಮಹತ್ಯೆ

Self Harming

ನೆಲಮಂಗಲ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಇದೀಗ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆ ಸಿಲುವೆಪುರದಲ್ಲಿ ನಡೆದಿದೆ.

ಬಾಲರಾಜ್(41) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಪತ್ನಿಯ ಕಿರುಕುಳ ಹಾಗೂ ಅಕೆಯ ಅಕ್ರಮ ಸಂಬಂಧದಿಂದ ಬೇಸತ್ತು ಬಾಲರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. 18 ವರ್ಷಗಳ ಹಿಂದೆ ಕುಮಾರಿ ಎಂಬಾಕೆಯನ್ನು ಬಾಲರಾಜ್ ಎರಡನೇ ಮದುವೆಯಾಗಿದ್ದ. ಕಿರುಕುಳದ ಜತೆಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ. ಇದರಿಂದ ಪತ್ನಿ ಮನೆ ತೊರೆದು ತವರು ಸೇರಿದ್ದಳು. ಇತ್ತ ಯಾರು ಇಲ್ಲದ ವೇಳೆ ಮನೆಯ ಫ್ಯಾನ್​ಗೆ ನೇಣುಬಿಗಿದು ಕೊಂಡು ಬಾಲರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಬಾಲರಾಜ್ ಗ್ರಾಮಾಂತರ ಭಾಗದಲ್ಲಿ ಕ್ರಿಕೆಟ್ ಪಟುವಾಗಿದ್ದರು. ತನ್ನ ಮೃತದೇಹದ ಜತೆ ತಾನು ಪಡೆದಿದ್ದ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಅವರ ಕೊನೆಯ ಆಸೆಯಂತೆ ಶವದ ಪೆಟ್ಟಿಗೆಯಲ್ಲಿ ಎಲ್ಲವನ್ನು ಇಟ್ಟು ಶವ ಸಂಸ್ಕಾರ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Kerala Commando: ರಜೆ ಕೊಡಲಿಲ್ಲವೆಂದು ಗುಂಡು ಹಾರಿಸಿಕೊಂಡು ಪೊಲೀಸ್‌ ಕಮಾಂಡೋ ಆತ್ಮಹತ್ಯೆ

ಪೊಲೀಸ್‌ ಮೇಲೆ ಹಲ್ಲೆ ಮಾಡಿದ ರೌಡಿ ಕಾಲಿಗೆ ಗುಂಡು ಹಾರಿಸಿ ಸೆರೆ

ಬೆಂಗಳೂರು: ಬಂಧನದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ (Assault Case) ಯತ್ನಿಸಿದ ರೌಡಿಶೀಟರ್‌ (Rowdy Sheeter) ಲೋಕಿ ಎಂಬಾತನ ಕಾಲಿಗೆ ಬೆಂಗಳೂರು ಪೊಲೀಸರು (Bengaluru police) ಗುಂಡು ಹಾರಿಸಿ (Police Firing) ಸೆರೆಹಿಡಿದಿದ್ದಾರೆ.

ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ. ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಲೋಕೇಶ್‌ ಅಲಿಯಾಸ್‌ ಲೋಕಿ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ರೌಡಿಶೀಟರ್ ಮನೋಜ್ ಮೇಲೆ ಲೋಕಿ ಗ್ಯಾಂಗ್ ದಾಳಿ ಮಾಡಿತ್ತು. ಘಟನೆ ಬಳಿಕ ಲೋಕಿ ಮತ್ತು ಆತನ ಗ್ಯಾಂಗ್ ತಲೆಮೆರೆಸಿಕೊಂಡಿತ್ತು. ಇಂದು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಲೋಕಿ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಜಿಗಣಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಫೈರಿಂಗ್ ಮಾಡಿದ್ದಾರೆ. ಗಾಯಗೊಂಡಿರುವ ರೌಡಿ ಶೀಟರ್ ಲೋಕಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.