ಮೈಸೂರು: ನೇಣು ಬಿಗಿದಿರುವ (Self harming) ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆಯಾಗಿವೆ. ಮೈಸೂರು (Mysuru news) ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹೊನ್ನೂರಿನ ಖಾಲಿ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ ಮತ್ತು ಪಲ್ಲವಿ ಎಂಬವರ ಶವ ಪತ್ತೆಯಾಗಿದೆ. ಇವರು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮೃತ ಸುರೇಶ್ ಸಾಲಗಾರರ ಕಿರುಕುಳದಿಂದ ಪತ್ನಿಯೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ತೆಪ್ಪ ಮಗುಚಿ ಮೂವರು ನೀರುಪಾಲು
ಶಿವಮೊಗ್ಗ: ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ (Sharavati Backwaters) ನಡೆದಿದೆ.
ನದಿಗೆ ಬಿದ್ದ ಒಟ್ಟು ಐವರ ಪೈಕಿ ರಾಜು, ಸಂದೀಪ್ ಭಟ್ ಮತ್ತು ಚೇತನ್ ನಾಪತ್ತೆಯಾಗಿದ್ದು, ನವೀನ್ ಹಾಗೂ ಯಶ್ವಂತ್ ಈಜಿಕೊಂಡು ದಡ ಸೇರಿದ್ದಾರೆ. ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಆರಂಭವಾಗಿದೆ.