Sunday, 24th November 2024

Self Harming: ಆನ್‌ಲೈನ್‌ ರಮ್ಮಿ ಆಡಿ 5 ಲಕ್ಷ ರೂ. ನಷ್ಟ; ಮನನೊಂದು ಲಾರಿ ಮಾಲೀಕ ಆತ್ಮಹತ್ಯೆ

Self Harming

ಬೆಂಗಳೂರು: ಆನ್‌ಲೈನ್‌ ರಮ್ಮಿ ಹಾಗೂ ಬೆಟ್ಟಿಂಗ್‌ ಆ್ಯಪ್‌ಗಳಿಂದ ಹಲವು ಯುವಕರು ಲಕ್ಷಾಂತರ ರೂ. ಹಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಆನ್‌ಲೈನ್‌ ರಮ್ಮಿ ಗೇಮ್ ಆಡಿ ಸುಮಾರು 5 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದರಿಂದ ಮನನೊಂದು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೆಪೇಟೆಯ ಲಾರಿ ಮಾಲೀಕ ಚಂದ್ರಶೇಖರ್ (45) ನೇಣಿಗೆ ಶರಣಾಗಿದ್ದಾರೆ. ಇವರು ಮನೆಯಲ್ಲಿ ಪತ್ನಿ ಸೀರೆ ಬಳಸಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Pralhad Joshi: ಎಫ್‌ಸಿಐನಿಂದ 10,700 ಕೋಟಿ ರೂ. ಇಕ್ವಿಟಿಗೆ ಕೇಂದ್ರ ಸರ್ಕಾರದ ಅನುಮೋದನೆ: ಜೋಶಿ ಮಾಹಿತಿ

ವಿಡಿಯೊ ಮಾಡುವಾಗ ಯುವತಿಯ ಎದೆ ಮುಟ್ಟಿ ಪರಾರಿಯಾದ 10 ವರ್ಷದ ಬಾಲಕ; ಬೆಂಗಳೂರಲ್ಲಿ ವಿಕೃತ ಕೃತ್ಯ!

Physical Abuse

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಾಲಕನೊಬ್ಬ ಯುವತಿಯ ಎದೆ ಮುಟ್ಟಿ ಪರಾರಿಯಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿಡಿಯೊ ವ್ಲಾಗ್ ಮಾಡಲು ಯುವತಿ ಮುಂದಾಗಿದ್ದಾಳೆ. ಈ ವೇಳೆ ಎದುರಿನಿಂದ ಸೈಕಲ್‌ನಲ್ಲಿ ಬಂದ ಬಾಲಕ, ಹಾಯ್… ಎನ್ನುತ್ತಾ ಯುವತಿ ಎದೆಯ ಭಾಗಕ್ಕೆ ಕೈ ಹಾಕಿ ಪರಾರಿಯಾಗಿದ್ದಾನೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ವಿಡಿಯೊ ಹಂಚಿಕೊಂಡು, ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ ಕಣ್ಣೀರು ಹಾಕಿದ್ದಾಳೆ.

ಉತ್ತರ ಭಾರತ ಮೂಲದ ನೇಹಾ ಬಿಸ್ವಾಲ್ ಕಿರುಕುಳಕ್ಕೆ ಒಳಗಾದ ಯುವತಿ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ವ್ಲಾಗ್ ಮಾಡಲು ಮುಂದಾದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ನೇಹಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದು, ನಗರದಲ್ಲಿ ಒಬ್ಬಂಟಿಯಾಗಿ ಯುವತಿಯರು ರಸ್ತೆಯಲ್ಲಿ ಓಡಾಡುವುದು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಮಾಡಿದ್ದಾಳೆ. ಯುವತಿಯ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಕಣ್ಣೀರಿಡುತ್ತಾ ಮಾತನಾಡಿರುವ ಯುವತಿ, ನನಗೆ ಇಂತಹ ಕಹಿ ಅನುಭವ ಹಿಂದೆಂದೂ ಎದುರಾಗಿರಲಿಲ್ಲ. ನಾನು ವಿಡಿಯೊ ಮಾಡುತ್ತಿದ್ದಾಗ ಸೈಕಲ್‌ನಲ್ಲಿ ಎದುರಿಗೆ ಬಂದ ಸುಮಾರು 10 ವರ್ಷದ ಬಾಲಕ ಮೊದಲು ನನ್ನನ್ನು ಗೇಲಿ ಮಾಡಿದ, ಬಳಿಕ ನಾನು ಮಾತನಾಡುತ್ತಿದ್ದದ್ದನ್ನು ಅನುಕರಿಸಿ, ಕಿರುಕುಳ ನೀಡಿ ಪರಾರಿಯಾದ. ಈ ರೀತಿಯಾದರೆ ಮಹಿಳೆಯರು ಸುರಕ್ಷಿತವಾಗಿ, ಭಯವಿಲ್ಲದೆ ಒಬ್ಬಂಟಿಯಾಗಿ ಓಡಾಡುವುದು ಹೇಗೆ? ಎಂದು ಯುವತಿ ಕಿಡಿಕಾರಿದ್ದಾಳೆ.

ಎದೆ ಭಾಗ ಮುಟ್ಟಿ ಬಾಲಕ ಸೈಕಲ್‌ನಲ್ಲಿ ಪರಾರಿಯಾಗುವಾಗ ನಾನು ಕಿರುಚಿದೆ. ಈ ವೇಳೆ ಸ್ಥಳೀಯರು ಬಾಲಕನನ್ನು ಹಿಡಿದು, ಏನಾಯ್ತು ಎಂದು ಕೇಳಿದರು. ಬಳಿಕ ಕೆಲವರು ಅವನು ಹುಡುಗ, ಬಿಟ್ಟುಬಿಡಿ ಎಂದು ಮನವಿ ಮಾಡಿದರು. ಯಾಕೆ ಈ ರೀತಿ ಮಾಡಿದೆ ಎಂದು ಬಾಲಕನನ್ನು ಪ್ರಶ್ನಿಸಿದಾಗ, ಸೈಕಲ್‌ ಬ್ಯಾಲೆನ್ಸ್‌ ತಪ್ಪಿ ಯುವತಿಯ ಮೇಲೆ ಬಿದ್ದಿದ್ದೇನೆ ಎಂದು ಬಾಲಕ ಹೇಳಿದ್ದಾಗಿ ಯುವತಿ ಹೇಳಿದ್ದಾಳೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಬೆಂಬಲ ಸಿಕ್ಕಿದ್ದರೂ, ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಸಿಲ್ಲ ಎನ್ನಲಾಗಿದೆ. ನೇಹಾ ನಂತರ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಿಂದ ವಿಡಿಯೊವನ್ನು ತೆಗೆದು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Nivin Pauly: ಲೈಂಗಿನ ಕಿರುಕುಳ ಪ್ರಕರಣದಿಂದ ಮಲಯಾಳಂ ನಟ ನಿವಿನ್‌ ಪೌಲಿಗೆ ಕ್ಲೀನ್‌ ಚಿಟ್‌!

ನೇಹಾ ಇನ್‌ಸ್ಟಾಗ್ರಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿರುವ ಪಬ್, ಕ್ಲಬ್, ಶಾಪಿಂಗ್ ಮಾಲ್ ಸೇರಿ ಕೋರಮಂಗಲ, ಬಿಟಿಎಂ ಲೇಔಟ್, ಮಡಿವಾಳ ಸೇರಿ ವಿವಿಧ ಪ್ರದೇಶಗಳಲ್ಲಿನ ವಿಶೇಷತೆಗಳನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲುವ ಹವ್ಯಾಸ ಹೊಂದಿದ್ದಾಳೆ.