Thursday, 14th November 2024

Self Harming: ಕೈಗಾ ಅಣುಸ್ಥಾವರದ ಅಧಿಕಾರಿ ಪಿಸ್ತೂಲ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ

kaiga nuclear power plant

ಕಾರವಾರ: ಉತ್ತರ ಕನ್ನಡ ಜಿಲ್ಲೆಯ (Uttara Kannada news) ಕಾರವಾರದ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ (Kaiga nuclear power plant) ಕರ್ತವ್ಯ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಸಿಐಎಸ್‌ಎಫ್ ಅಧಿಕಾರಿ ತಮ್ಮ ಪಿಸ್ತೂಲಿನಿಂದ ಶೂಟ್‌ ಮಾಡಿಕೊಂಡು (Self Harming) ಸಾವಿಗೀಡಾಗಿದ್ದಾರೆ.

ಕಾರವಾರ ತಾಲೂಕಿನ ಕೈಗಾ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಕ್ಷಣಾ ಸಿಬ್ಬಂದಿ ತನ್ನ ಪಿಸ್ತೂಲಿನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ನಡೆದಿದೆ. ಬಿಹಾರ ಮೂಲದ ಅರವಿಂದ್​ ಮೃತ ಸಿಐಎಸ್‌ಎಫ್ ಸಿಬ್ಬಂದಿ. ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವುದು ಖಾಸಗಿ ಕಾರಣದಿಂದಲೋ ಅಥವಾ ಅಧಿಕಾರಿಗಳ ಕಿರುಕುಳ ಕಾರಣದಿಂದಲೋ ಎಂಬುದು ಇನ್ನೂ ತಿಳಿದಿಲ್ಲ. ಸದ್ಯ ಯಾವುದೇ ಡೆತ್‌ ನೋಟ್‌ ದೊರೆತಿಲ್ಲ. ರಕ್ಷಣಾ ಸಿಬ್ಬಂದಿಯ ಆತ್ಮಹತ್ಯೆಯಿಂದ ಕೈಗಾದಲ್ಲಿ ಆತಂಕ‌ ಸೃಷ್ಠಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನ ಹೋಟೆಲ್‌ಗೆ ಬಾಂಬ್‌ ಬೆದರಿಕೆ

ಬೆಂಗಳೂರು: ಬೆಂಗಳೂರಿನ ‌(bengaluru news) ಪ್ರತಿಷ್ಠಿತ ಪಂಚತಾರಾ ಹೋಟೆಲ್ ಐಬಿಎಸ್‌ಗೆ ಇಮೇಲ್‌ ಮೂಲಕ ಬಾಂಬ್ ಬೆದರಿಕೆ (bomb hoax, bomb threat) ಬಂದಿದೆ. ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿರುವ ಐಬಿಎಸ್ ಹೋಟೆಲ್ ಮೇಲ್ ಐಡಿಗೆ ಅಪರಿಚಿತರಿಂದ ಬೆದರಿಕೆ ಸಂದೇಶ ಬಂದಿದೆ.

ಇದನ್ನು ನೋಡಿದ ಹೋಟೆಲ್​ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಸಂಪಂಗಿರಾಮನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶ್ವಾನ ದಳ, ಬಾಂಬ್ ಪತ್ತೆ ದಳ ದೌಡಾಯಿಸಿ ಹೋಟೆಲ್​ನಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ ತಪಾಸಣೆ ನಡೆಸಿದರು.