ಕೊಲ್ಹಾರ: ಜಗತ್ತಿನ ಮುಂಚೂಣಿ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಮಂಗಳವಾರ ಸರ್ವರ್ ಡೌನ್ ಸಮಸ್ಯೆ ಅನುಭವಿಸಿದ ಘಟನೆ ಕೊಲ್ಹಾರ ತಾಲೂಕಿನಾದ್ಯಂತ ಕಂಡುಬಂದಿತು.
ಮಂಗಳವಾರ ರಾತ್ರಿ10 ಗಂಟೆಯ ಹೊತ್ತಿಗೆ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಮುಖಪುಟ ತೆರೆದುಕೊಳ್ಳದೆ ಬಳಕೆದಾರರು ಪರದಾಡುವಂತಾಯಿತು.
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು: ಜನರು ತಮ್ಮ ಖಾತೆಗಳಿಗೆ ಲಾಗಿನ್ ಮಾಡಲು ಸಾಧ್ಯವಾಗಲಿಲ್ಲ. ತಾಲೂಕಿನಾದ್ಯಂತ ಸಾಮಾಜಿಕ ಮಾಧ್ಯಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ ಪ್ರೊಫೈಲ್‌ಗಳು ಮುಖಪುಟ ತೆರೆದುಕೊಳ್ಳದ ಕಾರಣ ಸಮಸ್ಯೆಗಳನ್ನು ಎದುರಿಸು ತ್ತಿರುವುದು ಕಂಡುಬಂದಿತು.