ವಿಶೇಷ ವರದಿ: ರಂಗನಾಥ ಕೆ. ಮರಡಿ ತುಮಕೂರು
ಕರೋನಾ 2ನೇ ಅಲೆಯ ತೀವ್ರ ಸಂಕಷ್ಟದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಸರಕಾರ ಘೋಷಿಸಿರುವ 3 ಸಾವಿರ ಪರಿಹಾರ ಧನ ಬಹುತೇಕ ಕಲಾವಿದರ ಖಾತೆಗೆ ಬರುವುದು ಅನುಮಾನ.
ಸರ್ವರ್ ಸ್ಲೋ ಆಗಿ ಅಪ್ಲಿಕೇಷನ್ ಹಾಕಲು ಹರಸಾಹಸ ಪಡಬೇಕು. ಏನಾದರೂ ಮಾಡಿ ಸರ್ಜಿ ಸಲ್ಲಿಸಿದರೂ ಒಟಿಪಿ ಸಮಸ್ಯೆ ಯಿಂದ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ ಒಟಿಪಿ ಹೋಗುತ್ತದೆ. ಬಹುತೇಕ
ಕಲಾವಿದರು ಲಿಂಕ್ ಮಾಡಿಲ್ಲ. ಹಳ್ಳಿಯ ಭಾಗದಲ್ಲಿರುವ ಕಲಾವಿದರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಸುಮ್ಮನಾಗಿದ್ದಾರೆ. ಸರಕಾರ ಇದಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿಲ್ಲ.
ಹೆಲ್ಪ್ಲೈನ್ ನಾಟ್ರೀಚಬಲ್: ಸರಕಾರ ಸಂಕಷ್ಟದಲ್ಲಿರುವ ಕಲಾದರಿಗೆ ನೀಡುವ 3 ಸಾವಿರ ಪಡೆಯಲು ಹಲವು ಅಡೆತಡೆ ಗಳಿರುವಾಗ ಸಮರ್ಪಕವಾಗಿ ವಿತರಿಸುವ ಕ್ರಮಕೈಗೊಳ್ಳಬೇಕು. ಹೆಲ್ಪ್ಲೈನ್ ನಂಬರ್ಗಳಿಗೆ ಕರೆ ಮಾಡಿದರೆ ನಾಟ್ ರೀಚಬಲ್, ಸ್ವಿಚ್ಆಫ್ ಬರುತ್ತಿದೆ. ಅರ್ಜಿ ಹಾಕಲು ಸಮಯಾವಕಾಶವನ್ನು ಮುಂದೂಡಬೇಕು ಎಂಬುದು ಕಲಾವಿದರ ಒತ್ತಾಯ.
ನಕಲಿ ಕಲಾವಿದರ ಬಗ್ಗೆ ಎಚ್ಚರಿಕೆ: ಸಹಾಯಧನ ಪಡೆಯಲು ನಕಲಿ ಕಲಾವಿದರ ಅರ್ಜಿ ಹಾಕುವ ಸಾಧ್ಯತೆ ಇರುತ್ತದೆ. ಆದ್ದರಿಂದ 5 ಜನ ಸದಸ್ಯರನ್ನೊಳಗೊಂಡ ಜಿಲ್ಲಾ ಸಹಾಯಕ ನಿರ್ದೇಶಕರ ನೇತೃತ್ವ ಸಮಿತಿ ಅರ್ಜಿ ಪರಿಶೀಲನೆ ವೇಳೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಾಗಿದೆ.
***
ಅರ್ಜಿ ಸಲ್ಲಿಸಲು ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ವ್ಯವಸ್ಥೆ ಇಲ್ಲ. ಹೇಗಾದರೂ ಮಾಡಿ ನಗರಕ್ಕೆ ಹೋದರೂ ಅರ್ಜಿ
ಹಾಕಲು ಆಗಿಲ್ಲ. ಅಧಿಕಾರಿಗಳನ್ನು ಕೇಳಿದರೆ, ನಮಗೆ ಯಾವ ಅಧಿಕಾರ ಇಲ್ಲ ಎನ್ನುತ್ತಾರೆ. ಅರ್ಜಿ ಹಾಕಿದರೂ ಒಟಿಪಿ ಬರಲಿಲ್ಲ. ಆಧಾರ್ಗೆ ಲಿಂಕ್ ಮಾಡಿಸಲು ಈಗ ಸಾಧ್ಯವಿಲ್ಲ. ಕಲಾವಿದರಿಗೆ 3 ಸಾವಿರ ಕೇವಲ ಕನಸಿನ ಮಾತು.
– ರಾಮಣ್ಣ ಹಿರಿಯ ಜನಪದ ಕಲಾವಿದ