Thursday, 12th December 2024

ಸಮಕಾಲಿನ ಶರಣರಲ್ಲಿ ಸಮಗಾರ ಹರಳಯ್ಯನವರು ಒಬ್ಬರು

ಇಂಡಿ: ೧೨ನೇ ಶತಮಾನದಲ್ಲಿ ಅಣ್ಣಬಸವಣ್ಣ ಅಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಾಮಾಜಿಕ ಅಸಮಾನತ್ಯ ಹೋಗಲಾಡಿಸಲು ಶ್ರಮಿಸಿದ ಧಾರ್ಮಿಕ ಯುಗಪುರುಷ ಇವರ ಸಮಕಾಲಿನ ಶರಣರಲ್ಲಿ ಸಮಗಾರ ಹರಳಯ್ಯ ನವರು ಒಬ್ಬರಾಗಿದ್ದು ಇಂತಹ ಪರಂಪರೆಯ ಸಮುದಾಯ ನಿಮ್ಮದಾ ಗಿದೆ ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.

ಪಟ್ಟಣದ ಶಂಕರ ಪಾರ್ವತಿ ಭವನದಲ್ಲಿ ಶಿವಶರಣ ಸಮಗಾರ ಹರಳಯ್ಯನವರ ನೂತನ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹರಳಯ್ಯಾ ಚರ್ಮಗಾರ ಪ.ಜಾ. ವಿದೋದ್ದೇಶಗಳ ಸಹಕಾರ ಸಂಘ ನಿ, ಕಟ್ಟಡ ಭೂಮಿ ಪೂಜಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಬಸವಣ್ಣನವರು ಮೇಲಪಂಕ್ತಿಯಲ್ಲಿ ಹುಟ್ಟಿದರೂ ಕೂಡಾ ಕೆಳ ಸಮುದಾಯದವರನ್ನು ಲಿಂಗದೀಕ್ಷೆ ನೀಡಿ ಶರಣರನ್ನಾಗಿ ಮಾಡಿ ಜಗದಗಲ ಮೆರೆಯುವಂತೆ ಮಾಡಿ ದ್ದಾರೆ.

ಬಸವಣ್ಣನವರು ಒಮ್ಮೆ ಹಳರಳಯ್ಯನವರ ಹತ್ತಿರ ಹೋಗಿ ಯೋಗಕ್ಷೇಮ ವಿಚಾರಿಸಲು ಹೋದಾಗ ಶರಣು ಶರಣಾರ್ಥಿ ಹರಳ್ಯನವರಿಗೆ ಎಂದು ಬಸವವಣ್ಣನವರು ಹೇಳಿದಾಗ ಇವರ ನಯವಿನಮ್ರತೆಗೆ ಮೆಚ್ಚಿ ಹರಳಯ್ಯ ನವರು ತನ್ನ ಶರೀರದ ಚರ್ಮದಿಂದ ಪಾದುಕೆ ಮಾಡಿ ತಲೆಯ ಮೇಲೆ ಹೊತ್ತು ಬಸವಣ್ಣನವರಿಗೆ ಅರ್ಪಿಸಿದಾಗ ಬಸವಣ್ಣ ಪಾದುಕೆಯನ್ನು ತಮ್ಮ ಕಾಲಿಗೆ ಧರಿಸದೆ ತಲೆ ಮೇಲೆ ಹೊತ್ತುಕೊಂಡು ಮಾನವೀಯ ಮೌಲ್ಯಗಳಿಂದ ಮೇರೆದ ಶರಣರಾಗಿದ್ದಾರೆ.

ಬಸವಣ್ಣನವರ ಬಗ್ಗೆ ಹರಳಯ್ಯನವರಿಗೆ ಅಪಾರ ಪ್ರೀತಿ, ಭಕ್ತಿ ಇತ್ತು ಇಂತಹ ದಾರ್ಶನಿಕರ ಜೀವನ ಅನುಕರಣಿಯವಾಗಿದೆ. ಈ ಸಮುದಾಯ ಸಂಸ್ಕಾರ ವ0ತರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಸಮಾಜದಲ್ಲಿ ಬೇರೆ ಸಮುದೊಂದಿಗೆ ಪ್ರೀತಿ ,ಅಕ್ಕರೆ ಗೌರವಯುತ ಜೀವನ ಸಾಗಿಸುತ್ತಾರೆ. ಶಿಕ್ಷಣ ಮನುಷ್ಯನಿಗೆ ಸಂಸ್ಕಾರವ0ತರನ್ನಾಗಿ ಮಾಡುತ್ತದೆ ಸಮುದಾಯದ ಜನತೆ ಶಿಕ್ಷಣ ಪಡೆದು ಸಮಾಜದಲ್ಲಿ ಸದೃಡರಾಗಬೇಕು.

ದಮನಿತರ ಧ್ವನಿಯಾದ ಅಣ್ಣಬಸವಣ್ಣನವರ, ಡಾ.ಬಿ. ಆರ್ ಅಂಬೇಡ್ಕರವರ ವಿಚಾರಧಾರೆಗಳಿಂದ ನಾವೇಲ್ಲಾ ಸಾಗಬೇಕಾಗಿದೆ ಪಟ್ಟಣದಲ್ಲಿ ಅಣ್ಣಬವಸಣ್ಣನವರ ವೃತ್ತ ಹಾಗೂ ಹರಳಯ್ಯನವರ ಮೂರ್ತಿ ಮೇರವಣಿಗೆ ಸಂಧರ್ಬ ನೋಡಿದರೆ ೧೨ನೇ ಶತಮಾನದ ಶರಣರು ಸಮಾಗಮ ಆದಂತೆ ಕಂಡ ಬಂದಿತ್ತು ಇಂತಹ ಶರಣ, ಸಂತರ ವಿಚಾರಗಳು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.

ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.

ಸಮಾಜದ ಗೌರವಾಧ್ಯಕ್ಷ ಜೆ.ಕೆ ತಳಕೇರಿ, ತಾಲೂಕಾ ಅಧ್ಯಕ್ಷ ವಿಠ್ಠಲ ಮಾವಿನಹಳ್ಳಿ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಪುರಸಭೆ ಅಧ್ಯಕ್ಷೆ ಬನ್ನೇಮ್ಮಾ ಹದರಿ,ಹಣಮಂತ ಕೊಡತೆ, ರಾಜ ಚಾಬುಕಸವಾರ, ಮಹೇಶ ಹೊನಬಿಂದಗಿ, ಪರಶುರಾಮ ಚಾಬುಕಸವಾರ, ಪರಶುರಾಮ ಕಬಾಡೆ. ತುಕಾರಾಮ ಹರಳ್ಯಾ, ಸೈದು ಕೊಡಹೊನ್ನ. ಜಟ್ಟೆಪ್ಪ ಹೊಸಮನಿ, ಧರ್ಮೆಂದ್ರ ಚಾಬುಕಸವಾರ, ರಾಘವೇಂದ್ರ ಕೊಡಹೊನ್ನ, ಯಲ್ಲಪ್ಪ ಬಾಮಣೆ ರವಿ ಕೊಡ ಹೊನ್ನ ಸೇರಿದಂತೆ ಅನೇಕ ಮುಖಂಡರು ಇದ್ದರು.