Thursday, 21st November 2024

Shivamogga News: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ 3 ಯುವಕರು ನಾಪತ್ತೆ

Shivamogga News

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ 3 ಯುವಕರು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ (Shivamogga News) ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ನಡೆದಿದೆ. ಚೇತನ್, ಸಂದೀಪ್, ರಾಜು ಕಣ್ಮರೆಯಾದವರು.

ಯುವಕರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆ ವೇಳೆ ತೆಪ್ಪದಲ್ಲಿದ್ದ ಇನ್ನಿಬ್ಬರು ಯುವಕರು ದಡ ಸೇರಿದ್ದಾರೆ. ಇದೀಗ ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಾಗಿರುವ ಮೂವರು ಯುವಕರಿಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Goods Train Derailment: ಹಳಿ ತಪ್ಪಿದ ಗೂಡ್ಸ್‌ ರೈಲು; ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಬೀದರ್‌ನಲ್ಲಿ ಒಗ್ಗರಣೆ ಅನ್ನ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಬೀದರ್: ಒಗ್ಗರಣೆ ಅನ್ನ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ (Bidar News) ಹುಮನಾಬಾದ್‌ನಲ್ಲಿ ನಡೆದಿದೆ. ಬಸವತೀರ್ಥ ವಿದ್ಯಾಪೀಠ ಶಾಲೆಯಲ್ಲಿ ಘಟನೆ ನಡೆದಿದೆ. ಒಗ್ಗರಣೆ ಅನ್ನ ತಿಂದ ಬಳಿಕ 50 ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆನ್ನೆ ರಾತ್ರಿ ಉಳಿದ ಅನ್ನಕ್ಕೆ ಇಂದು ಒಗ್ಗರಣೆ ನೀಡಿ ಮಕ್ಕಳಿಗೆ ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹುಮನಾಬಾದ್ ಪಟ್ಟಣದ ಹೊರವಲಯದ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಆಸ್ಪತ್ರೆಗೆ ಎಂಎಲ್‌ಸಿ ಭೀಮಾರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ಬೆಂಗಳೂರಿನ ಲಾಲ್‌ ಬಾಗ್‌ ಅನ್ನು ಹಾಡಿಹೊಗಳಿದ ಡೊನಾಲ್ಡ್‌ ಟ್ರಂಪ್‌; ಹಾಸ್ಯನಟನ ಮಿಮಿಕ್ರಿಗೆ ಭೇಷ್‌ ಎಂದ ನೆಟ್ಟಿಗರು!

ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!

murder case

ಮಡಿಕೇರಿ: ಗೋವಾದಲ್ಲಿ 18 ವರ್ಷಗಳ ಕೊಲೆಯಾಗಿದ್ದ (Murder Case) ಕೊಡಗಿನ (coorg news) ಬಾಲಕಿಯೊಬ್ಬಳ ಶವಕ್ಕೆ ಸೋಮವಾರ ರಾತ್ರಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ಪ್ರಕರಣದಲ್ಲಿ ಕೊಲೆ (Crime news) ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದ್ದು, ಜೈಲಿನಲ್ಲಿದ್ದಾನೆ.

ಪ್ರಕರಣ ಹೀಗಿದೆ: ಕೊಡಗು ಜಿಲ್ಲೆಯ ಅಯ್ಯಂಗೇರಿಯ 13 ವರ್ಷ ದ ಬಾಲಕಿ ಸಫಿಯಾಳನ್ನು 2006ರಲ್ಲಿ ಕಾಸರಗೋಡಿನ ಕೆ.ಸಿ.ಹಂಝ ಎಂಬಾತ ಮನೆ ಕೆಲಸಕ್ಕೆಂದು ಗೋವಾಕ್ಕೆ ಕರೆದೊಯ್ದಿದ್ದ. ಅಲ್ಲಿ ಬಿಸಿ ಗಂಜಿ ಮೈಮೇಲೆ ಬಿದ್ದು ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಆಕೆಯನ್ನು ಕೊಲೆ ಮಾಡಿ, ಮೃತದೇಹವನ್ನು ಮೂರು ತುಂಡುಗಳನ್ನಾಗಿ ಕತ್ತರಿಸಿ ಗೋವಾದಲ್ಲೇ ಹೂತಿದ್ದ. ಬಳಿಕ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೋಷಕರಿಗೆ ತಿಳಿಸಿದ್ದ.

ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ‘ಸಫಿಯಾ ಕ್ರಿಯಾಸಮಿತಿ’ ಎಂಬ ಸಮಾನ ಮನಸ್ಕರ ಗುಂಪೊಂದನ್ನು ರಚಿಸಿಕೊಂಡು ಕಾಸರಗೋಡಿನಲ್ಲಿ ಸತತ 90 ದಿನ ಪ್ರತಿಭಟಿಸಿದ್ದರು. ನಂತರ ಕೇರಳ ಸರ್ಕಾರವು ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಿತ್ತು. ತನಿಖೆ ನಡೆಸಿದಾಗ, 2008ರಲ್ಲಿ ಬಾಲಕಿಯ ಅಸ್ಥಿಪಂಜರ ಗೋವಾದಲ್ಲಿ ಪತ್ತೆಯಾಗಿತ್ತು. ಹಂಝನನ್ನು ಬಂಧಿಸಲಾಗಿತ್ತು. ಕಾಸರಗೋಡು ಸೆಷೆನ್ಸ್ ನ್ಯಾಯಾಲಯ ಆತನಿಗೆ ಮರಣದಂಡನೆ ವಿಧಿಸಿತ್ತು. 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು.

ಆದರೆ, ಸಫಿಯಾಳ ಅಸ್ಥಿಪಂಜರ ಕಾಸರಗೋಡು ನ್ಯಾಯಾಲಯದ ಸುಪರ್ದಿಯಲ್ಲೇ ಉಳಿದಿತ್ತು. ದೇಹದ ಅವಶೇಷಗಳನ್ನು ಹಸ್ತಾಂತರಿಸುವಂತೆ ಪೋಷಕರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ನವೆಂಬರ್ 6ರಂದು ಕಾಸರಗೋಡಿನ ಜಿಲ್ಲಾ ಪ್ರಧಾನ ನ್ಯಾಯಾಲಯ ತಲೆಬುರುಡೆ ಹಾಗೂ ಮೂಳೆಗಳನ್ನು ಹೆತ್ತವರ ವಶಕ್ಕೆ ನೀಡುವಂತೆ ಆದೇಶಿಸಿತ್ತು. ಸೋಮವಾರ ಅಸ್ಥಿಪಂಜರವನ್ನು ಕೊಚ್ಚಿನ್‌ನ ವಿಧಿವಿಜ್ಞಾನ ಪ್ರಯೋಗಾಲಯದಿಂದ
ತಂದ ಪೋಷಕರು ಅಯ್ಯಂಗೇರಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಇದನ್ನೂ ಓದಿ: Naxal activity: ಕಾಫಿನಾಡಿನಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ; ಮುಂಡಗಾರು ಲತಾ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌