ಶಿವಮೊಗ್ಗ: ಸ್ತ್ರೀಯರ ಮೇಲಿನ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗುವ ಮಹಿಳಾ ಆಯೋಗದಂತೆ ಪುರುಷರಿಗೂ ಆಯೋಗ ರಚಿಸಬೇಕು ಎಂದು ಕಾರ್ವೆಟೆಕಾ ಹ್ಯೂಮನ್ ರೈಟ್ಸ್ ವೆಲ್ಫೇರ್ ಹಾಗೂ ಕ್ರೈಂ ಕಂಟ್ರೋಲ್ ಫೌಂಡೇಶನ್ ಶಿವಮೊಗ್ಗ ಘಟಕ (Shivamogga News) ಒತ್ತಾಯಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಘಟಕದ ಅಧ್ಯಕ್ಷ ಸಂತೋಷ್ ಹೊನ್ನೆಗುಂಡಿ ಅವರು, ಮಹಿಳೆಯರಿಗೆ ಏನೇ ತೊಂದರೆಯಾದರೂ ಅದನ್ನು ಆಲಿಸಲು ಮಹಿಳಾ ಆಯೋಗ ಇದೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ಪುರುಷರು ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ಅವರ ರಕ್ಷಣೆಗೆ ಯಾವ ಕಾನೂನನೂ ಇಲ್ಲ. ಹೀಗಾಗಿ ಪುರುಷ ಆಯೋಗ ರಚನೆಯ ಬೇಡಿಕೆಯನ್ನು ಮುಂದಿಟ್ಟಿದ್ದೇವೆ ಎಂದು ತಿಳಿಸಿದರು.
ಹಲವು ಬಾರಿ ಅಮಾಯಕ ಪುರುಷರ ಮೇಲೆ ವರದಕ್ಷಿಣೆ, ಅತ್ಯಾಚಾರ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ಇವುಗಳಲ್ಲಿ ಸಾಕಷ್ಟು ಕೇಸ್ಗಳು ಸುಳ್ಳಾಗಿವೆ. ಕೊನೆಯಲ್ಲಿ ಇದು ರಾಜಿಯಲ್ಲಿ ಅಂತ್ಯವಾಗುತ್ತದೆ. ಪುರುಷ ಏನೂ ತಪ್ಪು ಮಾಡದೇ ಹೋದರೂ ಅವರ ಜೀವನ, ಕೀರ್ತಿ, ಯಶಸ್ಸು ಎಲ್ಲಾ ಮಣ್ಣುಪಾಲಾಗುತ್ತದೆ. ಹೀಗಾಗಿ ಇಂತಹ ನೊಂದ ಪುರುಷರಿಗೂ ಆಯೋಗ ಬೇಕು ಎಂದು ಸಂತೋಷ್ ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Waqf Board: ವಕ್ಫ್ ವಿವಾದ; ಸಚಿವ ಜಮೀರ್ ಅಹ್ಮದ್ ವಿರುದ್ಧ ಹೈ ಕಮಾಂಡ್ಗೆ ಕಾಂಗ್ರೆಸ್ ಶಾಸಕರ ಪತ್ರ
ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಹಾಗೂ ಸಂಬಂಧ ಪಟ್ಟವರಿಗೆ ನಮ್ಮ ಸಂಸ್ಥೆ ಮನವಿ ಮಾಡಲಿದೆ. ಎಲ್ಲಿ ಸುಳ್ಳು ಕೇಸುಗಳಾಗಿರುತ್ತದೆಯೇ, ಅವರ ಪರವಾಗಿ ಇರುವಂತಹ, ನೊಂದವರಿಗೆ ಸ್ಪಂದನೆ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಅದನ್ನು ಕಾಪಾಡುವ ಕಾರ್ಯವನ್ನು ನಾವು ಸದಾ ನಿರ್ವಹಿಸುತ್ತಿದ್ದೇವೆ. ಇದೀಗ ಪುರುಷ ಆಯೋಗಕ್ಕೆ ಬೇಡಿಕೆ ಇರಿಸಿದ್ದೇವೆ ಎಂದರು.
Self Harming: ಸಚಿವರ ಸಹಾಯಕನ ಹೆಸರು ಬರೆದಿಟ್ಟು ಸರ್ಕಾರಿ ನೌಕರ ಕಚೇರಿಯಲ್ಲೇ ಆತ್ಮಹತ್ಯೆ
ಬೆಳಗಾವಿ: ಮತ್ತೊಬ್ಬ ಸರ್ಕಾರಿ ಅಧಿಕಾರಿ (Officer Self Harming) ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆತ್ಮಹತ್ಯೆ ಕೂಡ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಕಂಡುಬಂದಿದೆ. ಬೆಳಗಾವಿಯಲ್ಲಿ (Belagavi crime news) ಸರ್ಕಾರಿ ನೌಕರ ರಾಜ್ಯ ಸರ್ಕಾರದ ಸಚಿವರ ಆಪ್ತ ಸಹಾಯಕನ ಹೆಸರನ್ನು ಬರೆದಿಟ್ಟು ತಹಸೀಲ್ದಾರರ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಎಫ್ಡಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶಿಲ್ದಾರ್ ಆಫೀಸ್ನಲ್ಲಿ ಘಟನೆ ನಡೆದಿದೆ. ತಹಶಿಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್ಡಿಸಿ) ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರನಾಗಿದ್ದಾರೆ. ತಹಶೀಲ್ದಾರ್ ಬಸವರಾಜ ನಾಗರಾಳ ಕಚೇರಿಯಲ್ಲಿಯೇ ನೇಣು ಬಿಗಿದುಕೊಂಡಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸರ್ಕಾರಿ ನೌಕರ ಆತ್ಮಹತ್ಯೆಗೆ ಶರಣಾಗುವ ಮುನ್ನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಆಪ್ತ ಸಹಾಯಕನ (ಪಿಎ) ಹೆಸರು ಬರೆದಿಟ್ಟಿದ್ದಾರೆ. ಬೆಳಗಾವಿಯ ತಹಶಿಲ್ದಾರ್ ಬಸವರಾಜ್ ನಾಗರಾಳ ಚೇಂಬರ್ನಲ್ಲಿಯೇ ಕೆಲಸ ಮಾಡುತ್ತಿದ್ದ ಎಫ್ಡಿಸಿ ರುದ್ರಣ್ಣ ಯಡಣ್ಣವರ ಇದೇ ಬೆಳಗಾವಿ ಜಿಲ್ಲೆಯ ರಾಯಭಾಗ ಮೂಲದರಾಗಿದ್ದರು. ನೌಕರ ಬರೆದಿಟ್ಟಿದ್ದ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತಹಶಿಲ್ದಾರ್, ಖಡೇಬಜಾರ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್ಲ್ಲಿ ಬೆಳಗಾವಿ ತಹಶಿಲ್ದಾರ್ ಕಚೇರಿ ಸಿಬ್ಬಂದಿಯ ವಾಟ್ಸಪ್ ಗ್ರೂಪಲ್ಲಿ ರುದ್ರಣ್ಣ ಸಂದೇಶ ರವಾನಿಸಿದ್ದರು. ನಾನು ಆತ್ಮಹತ್ಯೆಗೆ ಶರಣಾಗುವುದಾಗಿ ಗ್ರೂಪ್ನಲ್ಲಿ ಮೆಸೇಜ್ ಮಾಡಿದ್ದರು. ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ ಹಾಗೂ ಸಚಿವರ ಆಪ್ತ ಸಹಾಯಕ ಸೋಮು ಅವರೇ ಕಾರಣ. ಇನ್ನು ಡೆತ್ ನೋಟ್ನಲ್ಲಿ ಬರೆದಿಟ್ಟ ಸೋಮು ದೊಡದವಾದ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಆಗಿದ್ದಾರೆ. ನಮ್ಮ ತಹಶಿಲ್ದಾರ್ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮೆಸೇಜ್ ಮೂಲಕ ಮನವಿ ಮಾಡಿದ್ದು, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರ್ಗಾವಣೆಯಾಗಿದ್ದ ರುದ್ರಣ್ಣ
ಮೃತ ಸರ್ಕಾರಿ ನೌಕರ ರುದ್ರಣ್ಣ ಅವರು ನಿನ್ನೆಯಷ್ಟೇ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾವಣೆ ಆಗಿದ್ದರು. ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರಿಂದ ಆದೇಶ ಹೊರಡಿಸಲಾಗಿತ್ತು. ಎಫ್ಡಿಸಿ ರುದ್ರಣ್ಣ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಟುಂಬಸ್ಥರು ಧಾವಿಸಿದ್ದಾರೆ. ರುದ್ರಣ್ಣನ ಪತ್ನಿ ಗಿರಿಜಾ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಇಂಥ ಸಾವಿನ ಪ್ರಕರಣಗಳು ಸರ್ಕಾರಕ್ಕೂ ಸಚಿವರಿಗೂ ತಲೆನೋವು ಸೃಷ್ಟಿಸಿದ್ದಲ್ಲದೆ, ಮಹಾ ರಾಜಕೀಯ ಬಿರುಗಾಳಿಗೂ ಕಾರಣವಾಗಿವೆ. ಈಗಾಗಲೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಶಿವಮೊಗ್ಗದಲ್ಲಿ ಸರ್ಕಾರಿ ನೌಕರ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದಾಗಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿ ಜೈಲಿಗೆ ಹೋಗುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಯಾದಗಿರಿಯಲ್ಲಿ ನಡೆದ ಪಿಎಸ್ಐ ಪರಶುರಾಮ್ ಸಾವಿನ ಹಿನ್ನೆಲೆಯಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಹಾಗೂ ಪುತ್ರನ ಒತ್ತಡ- ಲಂಚದ ಆರೋಪ ಕೇಳಿಬಂದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಎರಡೂ ರಾಜಕೀಯದಲ್ಲಿ ಸಾಕಷ್ಟು ಕೋಲಾಹಲ ಎಬ್ಬಿಸಿವೆ.
ಇದನ್ನೂ ಓದಿ: Viral Video: ಪೋಷಕರೇ ಎಚ್ಚರ… ಎಚ್ಚರ…! ಚೂಯಿಂಗ್ ಗಮ್ ಗಂಟಲಿಗೆ ಸಿಲುಕಿ 4 ವರ್ಷದ ಮಗು ಸಾವು