Friday, 22nd November 2024

ಗದಗ: ಪೊಲೀಸ್ ವರಿಷ್ಠಾಧಿಕಾರಿಯಾಗಿ ಶಿವಪ್ರಕಾಶ್ ದೇವರಾಜು ವರ್ಗಾವಣೆ

ಕಾರವಾರ: ಮಂಡ್ಯ ಹಾಗೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಳಿಗೆ ಅಂತೂ ವರ್ಗಾವಣೆ ಆದೇಶ ನೀಡಿ ಸರ್ಕಾರ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ.

2019ರ ಆಗಸ್ಟ್ ತಿಂಗಳಿನಲ್ಲಿ ಉತ್ತರ ಕನ್ನಡಕ್ಕೆ ನೇಮಕಗೊಂಡಿದ್ದ ಶಿವಪ್ರಕಾಶ್ ದೇವರಾಜು, ದಶಕಗಳಷ್ಟು ಹಳೆಯ ಪ್ರಕರಣಗಳ ಆರೋಪಿಗಳ ಬಂಧನ, ಅಕ್ರಮ ಜಾನುವಾರು ಸಾಗಾಟಕ್ಕೆ ಬ್ರೇಕ್ ಹಾಕುವ ಕಾರ್ಯ, ಓಸಿ ಮಟ್ಕಾಕ್ಕೆ ಕಡಿವಾಣ ಸೇರಿದಂತೆ ಹೀಗೆ ಹತ್ತು ಹಲವು ಕಾರ್ಯಗಳ ಮೂಲಕ ಗಮನ ಸೆಳೆದಿದ್ದರು.

ಅಂತಿಮವಾಗಿ ಆದೇಶ ಜಾರಿಯಾಗದೆ, ವರ್ತಿಕಾ ಅವರನ್ನು ಮಂಡ್ಯಕ್ಕೆ ನಿಯುಕ್ತಿಗೊಳಿಸಲಾಗಿತ್ತು. ಶಿವಪ್ರಕಾಶ್ ದೇವರಾಜು ಉತ್ತರ ಕನ್ನಡದಲ್ಲೇ ಮುಂದುವರಿ ದಿದ್ದರು. ಇದೀಗ ಎರಡನೇ ಬಾರಿಗೆ ವರ್ಗಾವಣೆ ಆದೇಶ ವಾಗಿದ್ದು, ಈ ಬಾರಿ ಶಿವಪ್ರಕಾಶ್ ದೇವರಾಜು ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಉತ್ತರ ಕನ್ನಡಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾಗಿದ್ದ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ವರ್ಗಾಯಿ ಸಲಾಗಿದೆ.

ಇದೀಗ ಮಾಡಲಾದ ಆದೇಶದಂತೆ ನಿಯುಕ್ತಿಯಾದರೆ ಡಾ.ಸುಮನ್ ಡಿ.ಪೆನ್ನೇಕರ್ ಅವರು ಉತ್ತರ ಕನ್ನಡದ ಮೊದಲ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಗೆ ಈವರೆಗೆ ಮಹಿಳಾ ಅಧಿಕಾರಿಗಳು ಎಸ್‌ಪಿಯಾಗಿ ನೇಮಕವಾಗಿರಲಿಲ್ಲ.

ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ಇಂಕಾಗ್ಲೋ ಜಮೀರ್ 2012ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಡಾ.ಸುಮನ್ ಮೊದಲ ಮಹಿಳಾ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.