ಕೊಲ್ಹಾರ: ತಾಲೂಕಿನ ಮುಳವಾಡ ರೇಣುಕಾದೇವಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ಶಿವರಾಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 11 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ “ಶಿವರಾಯ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಮಾರ್ಚ್ 1 ರ ಶುಕ್ರವಾರ ಸಾಯಂಕಾಲ 6 ಗಂಟೆಗೆ ಮುಳವಾಡ ರಂಗ ಮಂದಿರದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಸಿ ಆಸಂಗಿ ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಬಬಲಾದಿಮಠ ಮಠದ ಗುರು ಚಕ್ರವರ್ತಿ ಸಿದ್ರಾಮಯ್ಯ ಶ್ರೀಗಳು ವಹಿಸಿಕೊಳ್ಳುವರು, ಸಾನಿಧ್ಯ ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಲಘಾಣ ನಾಗಲಿಂಗೇಶ್ವರ ಆಶ್ರಮದ ಸದಾನಂದ ಮಹಾರಾಜರು ವಹಿಸಿಕೊಳ್ಳುವರು. ಗ್ರಾ ಪಂ ಅಧ್ಯಕ್ಷ ಹಣಮಂತ ಕಳಸಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳುವರು. ಸಚಿವ ಶಿವಾನಂದ ಎಸ್. ಪಾಟೀಲ್ ಉದ್ಘಾಟನೆ ನೆರವೇರಿಸುವರು. ಬಿ.ಪಿ ಕೆಂಗನಾಳ, ಬಾ.ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ತಾನಾಜಿ ನಾಗರಾಳ, ನ್ಯಾಯವಾದಿ ಪಿ.ಬಿ ತನಕೇದಾರ, ಬಿಜೆಪಿ ಮುಖಂಡ ಅಪ್ಪಣ್ಣ ಐಹೊಳೆ ಜ್ಯೋತಿ ಬೆಳಗಿಸುವರು ಎಂದು ತಿಳಿಸಿದರು.
ಪ್ರಶಸ್ತಿ ಪ್ರಧಾನ: ಪ್ರಸಕ್ತ ಸಾಲಿನ ಶಿವರಾಯ ಶ್ರೀ ಪ್ರಶಸ್ತಿಗೆ ವಿವಿಧ ಸಾಧಕರನ್ನು ಆಯ್ಕೆ ಮಾಡಲಾಗಿದೆ ವೈದ್ಯಕಿಯ ಕ್ಷೇತ್ರದ ಸಾಧನೆಗೆ ಡಾ.ಸೋಮ ಶೇಖರ ಹಣಮಶೆಟ್ಟಿ, ನಾಟಿ ವೈದ್ಯ ಕ್ಷೇತ್ರ ರಾಚಯ್ಯ ಪುರಾಣಿಕಮಠ, ಕೃಷಿ ಕ್ಷೇತ್ರ ಸಚಿನ ಬಾಲಗೊಂಡ, ಶಿಕ್ಷಣ ಕ್ಷೇತ್ರ ಎಸ್.ಎಂ ದೇಸಾಯಿ, ಸಾಹಿತ್ಯ ಕ್ಷೇತ್ರ ಮಹ್ಮದಗೌಸ ಹವಾಲ್ದಾರ್ ಸಾಹಿತಿಗಳು, ದೇಶ ಸೇವೆಗೆ ಯೋಧ ಪರಮಾನಂದ ಬಾಗೇವಾಡಿ, ಸಮಾಜ ಸೇವೆ ವಸಂತ ಉಕ್ಕಲಿ ಅವರಿಗೆ ಶಿವರಾಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದ್ದಾರೆ.