Saturday, 14th December 2024

ಶ್ರೀ ಸಿದ್ಧಲಿಂಗ ಮಹಾರಾಜರ ೯೫ನೇ ಪುಣ್ಯಾರಾಧನೆ

ಇಂಡಿ : ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಪವಾಡ ಪುರುಷ ಶ್ರೀ ಸಿದ್ಧಲಿಂಗ ಮಹಾರಾಜರ ೯೫ನೇ ಪುಣ್ಯಾರಾಧನೆಯ ಅಂಗವಾಗಿ ಇದೇ ಸೆ.೧೬ ರಿಂದ ೧೮ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ.

ಸೆ. ೧೬ ರಂದು ಬೆಳಿಗ್ಗೆ ೮ಕ್ಕೆ ಶ್ರೀ ಪರಮೇಶ್ವರ, ಅಮೋಘಸಿದ್ಧೇಶ್ವರ, ಸಂಗನಬಸವೇಶ್ವರ ಹಾಗೂ ಸಿದ್ಧಲಿಂಗ ಮಹಾರಾಜರ ಶಿಲಾ ಮೂರ್ತಿಗಳ ಭವ್ಯ ಮೆರವಣಿಗೆಯೊಂದಿಗೆ ಪುರ ಪ್ರವೇಶ ಕಾರ್ಯಕ್ರಮ ನಡೆಯಲಿದೆ.

ಸೆ. ೧೭ ರಂದು ಬೆಳಿಗ್ಗೆ ೫ಕ್ಕೆ ಶ್ರೀ ಶಂಕರಲಿAಗ ಮಹಾಶಿವಯೋಗಿಗಳು ಹಾಗೂ ಶ್ರೀ ಸಿದ್ಧ ಲಿಂಗ ಮಹಾರಾಜರ ಶಿಲಾ ಮೂರ್ತಿಗೆ ರುದ್ರಾಭಿಷೇಕ ನಡೆಯಲಿದೆ. ನಂತರ ೯.೩೦ಕ್ಕೆ ಶ್ರೀ ಸಿದ್ಧಲಿಂಗ ಮಹಾರಾಜರ ನೂತನ ನವೀಕರಣಗೊಂಡ ಗುಂಪಾ ಉದ್ಘಾಟನೆ ನಡೆಯಲಿದೆ.

ಬಂಥನಾಳದ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಯರನಾಳದ ಗುರು ಸಂಗನಬಸವ ಮಹಾಶಿವಯೋಗಿಗಳು, ಮುಗಳ ಖೋಡದ ಶ್ರೀ ಮುರುಘರಾಜೇಂದ್ರ ಮಹಾಶಿವಯೋಗಿಗಳು, ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ, ಗೊಳಸಾರದ ಶ್ರೀ ಅಭಿನವ ಪುಂಡಲಿAಗ ಮಹಾಸ್ವಾಮೀಜಿ, ಅಹಿರ ಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಅಗರಖೇಡದ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮೀಜಿ, ತುಂಗಳದ ಅಕ್ಕಮಹಾದೇವಿ ಅಮ್ಮನವರು ಹಾಗೂ ಹೂವಿನ ಹಿಪ್ಪರಗಿಯ ದ್ರಾಕ್ಷಾಯಣಿ ಅಮ್ಮನವರು ಭಾಗವಹಿಸಿ ಈ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉದ್ಯಮಿ ಬಾಬುಗೌಡ ಬಿರಾದಾರ ಪಾಲ್ಗೊಳ್ಳಲಿದ್ದಾರೆ. ನಂತರ ೧೦ ಗಂಟೆಗೆ ಮಠದ ಪ್ರಸಾದ ನಿಲಯದ ನೂತನ ಕಟ್ಟಡದ ಉದ್ಘಾಟನೆ ಜರುಗಲಿದೆ.

ಇದೇ ದಿನ ಸಂಜೆ ೫ಕ್ಕೆ ಇಲ್ಲಿನ ಕಮರಿಮಠದ ಸೇವಾ ಸಮಿತಿಯ ವತಿಯಿಂದ ಪುಣ್ಯಾರಾಧನೆಯ ಅಂಗವಾಗಿ ಕಳೆದ ಆ.೩೧ ರಿಂದ ಹಮ್ಮಿಕೊಂಡ ಹೂವಿನ ಹಿಪ್ಪರಗಿಯ ಶಿವಶರಣಿ ದ್ರಾಕ್ಷಾಯಣಿ ಅಮ್ಮನವರು ನಿತ್ಯ ಸಂಜೆ ೭ ಗಂಟೆಯಿ0ದ ೮.೩೦ರ ವರೆಗೆ ನಡೆಸಿಕೊಂಡು ಬಂದ ಬಂಥನಾಳದ ತ್ರಿವಿಧ ದಾಸೋಹಿ ಲಿಂ. ಸಂಗನಬಸವ ಮಹಾಶಿವಯೋಗಿಗಳ ಜೀವನ ಚರಿತ್ರೆ ಕುರಿತ ಪುರಾಣ ಕಾರ್ಯಕ್ರಮದ ಮಹಾಮಂಗಲೋತ್ಸವ ಜರುಗಲಿದೆ. ಬಂಥನಾಳದ ಶ್ರೀ ಡಾ. ವೃಷಭಲಿಂಗ ಶಿವಯೋಗಿಗಳು, ಅಚಲೇರಿಯ ಶ್ರೀ ಬಸವರಾಜೇಂದ್ರ ಮಹಾಸ್ವಾಮೀಜಿ, ಶ್ಯಾವಳದ ಶ್ರೀ ವಿಠ್ಠಲಲಿಂಗ ಮಹಾರಾಜರು ಈ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.

ಹಳಿಂಗಳಿಯ ಶ್ರೀ ಶಿವಾನಂದ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ, ವಿಶೇಷ ಸನ್ಮಾನಿತರಾಗಿ ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಸಿದ್ಧಲಿಂಗಯ್ಯ ಮಠ ಹಾಗೂ ಧಾರವಾಡದ ಕೆ.ಎ.ಎಸ್. ಪರೀಕ್ಷಾರ್ಥ ಅಧಿಕಾರಿ ಅನುರಾಧಾ ಮಠ ಭಾಗವಹಿಸಲಿದ್ದಾರೆ.

ಬಳಿಕ ಇಡೀ ರಾತ್ರಿ ಸಾಮೂಹಿಕವಾಗಿ ವಿವಿಧ ಭಜನಾ ತಂಡಗಳಿAದ ಸಪ್ತಾಹ ಭಜನೆ ನಡೆಯಲಿದೆ. ಸೆ. ೧೮ ರಂದು ಬೆಳಿಗ್ಗೆ ೧೦ಕ್ಕೆ ಜಗದ್ಗುರು ಪೀಠದ ಪಾದಪೂಜಾ ಸಮಾರಂಭವು ಸೋಲಾಪುರದ ಸಿದ್ರಾಮಪ್ಪ ಕರಜಗಿಕರ ದಂಪತಿಗಳಿAದ ನೆರವೇರಲಿದೆ. ಸಂಜೆ ೫ಕ್ಕೆ ಬಂಥನಾಳದ ಲಿಂಗೈಕ್ಯ ಶ್ರೀ ಸಂಗನಬಸವ ಮಹಾಶಿವಯೋಗಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಕಮರಿಮಠದ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.