Saturday, 27th April 2024

ಕನ್ನಡದ ಕಿಚ್ಚು ಗ್ರಾಮೀಣ ಭಾಗದಲ್ಲಿ ಪಸರಿಸಿದೆ: ಪ.ಗು ಸಿದ್ದಾಪೂರ

ಇಂಡಿ: ತಡವಲಗಾ ಗ್ರಾಮದ ಜೋಡಗುಡಿಯ ಹತ್ತಿರ ಕನ್ನಡ ನಾಡು ನುಡಿಯ ಸಮ್ಮೀಲ ಮಾಡಿರುವುದು ವಿಶೇಷ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ. ಕನ್ನಡ ನಾಡು ನುಡಿ, ಜಲ, ನೆಲ ಸ್ವಾಭಿಮಾನದ ಕಿಚ್ಚು ಪ್ರತಿ ಗ್ರಾಮೀಣ ಭಾಗದಲ್ಲಿ ಹಚ್ಚಿದ ಕಸಾಪ ಬಳಗಕ್ಕೆ ಅಭಿನಂದನೆಗಳು ಎಂದು ರಾಜ್ಯೋತ್ಸವ ಪ್ರಶೇಸ್ತಿ ಪುರಸ್ಕೃತ ಪ.ಗು.ಸಿದ್ದಾಪೂರ ಹೇಳಿದರು.

ವಿಶ್ವಚೇತನ ಶೈಕ್ಷಣಿಕ ಸಾಂಸ್ಕೃತಿಕ ಸಾಹಿತಿಕ ಸಾಮಾಜಿಕ ಸೇವಾ ಅಭಿವೃದ್ದಿ ಸಂಸ್ಥೆ, ಶ್ರೀಮರುಳಸಿದ್ದೇಶ್ವರ ದೇವಸ್ಥಾನ ಸಮಿತಿ ಜೋಡಗುಡಿಯ ಹತ್ತಿರ ಸಾಹಿತಿಕ ಮತ್ತು ಸಾಂಸ್ಕೃತಿಕ ವೇದಿಕೆ ಶಾಖೆ ಇಂಡಿ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಭೀಮಾತೀರ ಎಂಬ ಕುಖ್ಯಾತಿ ಪಡೆದಿರುವುದು ನಿಮ್ಮೇಲ್ಲರಿಗೂ ಗೊತ್ತು ಇದು ಭೀಮಾತೀರ ಅಲ್ಲ ಚಿಂತಕರ ಚಾವುಡಿ ಸಾಹಿತಿಗಳ ಬೀಡು ಹೃಯವಂತರ ನಾಡು ಕನ್ನಡ ನಾಡು ನುಡಿಯ ಚಿಂತನೆ ನಡೆಯುತ್ತಿದೆ ಎಂದರೆ ಅರ್ಶ್ಚರ್ಯ ಜಾತ್ರೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಕನ್ನಡ ಕಾರ್ಯಕ್ರಮ ಮಾಡುತ್ತಿರುವುದು ಕಸಾಪ ಬಳಗದ ಸ್ವಾಭಿಮಾನದ ಸಂಗತಿ ,ಭೀಕರ ಬರಗಾಲ ಸಂಭವಿಸಿದ್ದು ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳು ಆಗಬೇಕಾಗಿದೆ ಮುಂಬರುವ ದಿನಗಳಲ್ಲಿ ಸರಕಾರಗಳಿಂದ ರೈತಪರ ವಿಚಾರಧಾರೆಗಳು ನಡೆಯಲಿ ಇಂತಹ ಹತ್ತು ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಕನ್ನಡ ನಶೀಸುತ್ತಿದೆ ಎಂದು ಹೇಳುವುದು ಸರಿಯಾದ ಕ್ರಮವಲ್ಲ ಕನ್ನಡ ಮತ್ತಷ್ಟು ಶ್ರೀಮಂತಿಕೆಯಾಗುತ್ತಿದೆ ಎಂದು ತಡವಲಗಾ ಶ್ರೀಮಠದ ಅಭಿನವ ಶ್ರೀರಾಚೋಟೇಶ್ವರ ಶಿವಾಚಾ ರ್ಯರು ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಅರ್ಶೀವಚನ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಆಶೇಯ ನುಡಿಗಳಾಡಿದರು.

ರಾಜೋತ್ಸವ ಪ್ರಶೇಸ್ತಿ ಪುರಸ್ಕೃತರಾದ ಪ,ಗು ಸಿದ್ದಾಪೂರ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ವಾಸುದೇವ ಹೇರಕಲ್ ಕೃತಿ ಬಿಡುಗೆ ಮಾಡಿ ಸಾಹಿತ್ಯ ನಡೆದು ಬಂದ ದಾರಿ ಹಾಗೂ ಕನ್ನಡ ನಾಡಿನ ಹಿರಿಮೆ ಗರಿಮೆ, ಕನ್ನಡ ಜನರ ಹೃದಯ ಶ್ರೀಮಂತಿಕೆ, ರಾಜ ಮಹಾರಾಜರ ಆಳಿಕೆ ಕುರಿತು ಮಾರ್ಮಿಕ ಮಾತುಗಳಾಡಿದರು.

ಗುತ್ತಿಗೆದಾರ ಚಂದ್ರಶೇಖರ ರೂಗಿ, ತಮ್ಮಣ್ಣಾ ಪೂಜಾರಿ , ಗ್ರಾಮ ಪಂ ಅಧ್ಯಕ್ಷ ರಮೇಶ ಹೊಸಮನಿ, ಶಿವಾನಂದ ಶಾಸ್ತಿç, ಬಾಬುಸಾಹುಕಾರ ಮೇತ್ರಿ, ಬಸವರಾಜ ಇಂಡಿ, ಮಳಸಿದ್ದ ಬ್ಯಾಳಿ, ಡಾ.ಕಾಂತು ಇಂಡಿ, ಪಿ.ಎಂ ಹೂಗಾರ, ಬಿ.ಎಸ್ ಪಾಟೀಲ, ಶಂಕರ ಚವ್ಹಾಣ, ಅಶೋಕ ಮಿರ್ಜಿ, ಸಚೀನ ರೂಗಿ, ಗುಂಡು ರೂಗಿ,ಬಾಬುರಾಜ ಕಲಘಟಗಿ ಸೇರಿದಂತೆಕಸಾಪ ಪದಾಧಿಕಾರಿಗಳು ತಡವಲಗಾ ಗ್ರಾಮದ ಗಣ್ಯರು ವೇದಿಕೆಯಲ್ಲಿದ್ದರು.

ಡಾ.ಕಾಂತು ಇಂಡಿ ಸ್ವಾಗತಿಸಿ, ಶಿಕ್ಷಕ ಬಸವರಾಜ ಗೊರನಾಳ ನಿರೂಪಿ, ಬಸವರಾಜ ಕಲಘಟಗಿ, ಸುಗೂರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!