Thursday, 12th December 2024

ಸರ್.ಎಂ. ವಿಶ್ವೇಶ್ವರಯ್ಯನವರ ಅನುಯಾಯಿಯಾಗಿ ಸಮಾಜದ ಅಭಿವೃದ್ಧಿ ಕಾರ್ಯ: ಕುಸುಮ ಜಗದೀಶ್

ಹರಪನಹಳ್ಳಿ: ಇಂದು ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ೧೬೦ನೇ ಜನ್ಮದಿನಾರಣೆಯ ಈ ದಿನವನ್ನು ಅಂದರೆ ಸಪ್ಟೆಬಂರ್ ೧೫ ಕ್ಕೆ ಪ್ರತಿ ವರ್ಷ ಭಾರತದಲ್ಲಿ ಇಂಜಿನಿಯರ್ಗಳ ದಿನಾಚರಣೆ ಎಂದು ಪ್ರಾರಂಭವಾಗಿದೆ. ದೇಶಕ್ಕೆ ಸರ್.ಎಂ. ವಿಶ್ವೇಶ್ವರಯ್ಯನವರ ಮಾಡಿರುವ ಕಾರ್ಯ ಅಜರಾಮರವಾಗಿ ಉಳಿಯುವಂತ ಕಾರ್ಯವನ್ನು ಮಾಡಿದ ವಿಶ್ವೆಶ್ವರಯ್ಯರವರನ್ನು ಇಂದು ನೆನೆಯಬೇಕಾಗಿದೆ. ಎಂದು ತರಳಬಾಳು ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕಾರ್ಯದರ್ಶಿ, ಕುಸುಮ ಜಗದೀಶ್ ಪ್ರತಿಪಾದಿಸಿದರು.

ಪಟ್ಟಣದ ತರಳಬಾಳು ವಿದ್ಯಾಸಂಸ್ಥೆಯ ತಮ್ಮ ಕಚೇರಿಯಲ್ಲಿ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಫಿಸಿ ಬಳಿಕ ಮಾತನಾಡಿದ ಅವರು ದೇಶವನ್ನು ಅಭಿವೃದ್ಧಿ ಕಡೆ ಕೊಂಡೊ ಯ್ಯಲು ದೇಶದ ಇಂಜಿನಿಯರ್‌ಗಳ ಪಾತ್ರ ಬಹಳ ಮುಖ್ಯ ಇಂತಹ ಮಹನೀಯರ ದಿನವನ್ನು ಪ್ರತಿದಿನ ನೆನೆಯಬೇಕಾಗಿದೆ ದೇಶದಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಿಸಿ ನಾಡಿನ ಅಭಿವೃದ್ದಿಗೆ ಶ್ರಮಿಸಿ ವಿಷಲವಾದ ಅಣೆ ಕಟ್ಟುಗಳನ್ನು ಕಟ್ಟಿರುವುದಕ್ಕೆ ಕಾಣ್ನುತುಂಬಿ ನೋಡಲು ಎರಡು ಕಣ್ಣು ಸಾಲದು, ಕರ್ನಾಟಕದಲ್ಲಿ ಕೆ.ಆರ್.ಎಸ್. ಡ್ಯಾಂ, ಭದ್ರವತಿಯ ಉಕ್ಕು ಮತ್ತು ಕಬ್ಬಿಣದ ಕಾರ್ಖಾನೆಯನ್ನು ಜಾರಿಗೆ ತಂದು ನಾಡಿನ ಜನತೆಗೆ ಉದ್ಯೋಗ ವನ್ನು ಕಲ್ಪಿಸಿ ಕೊಡುವಲ್ಲಿ ಪ್ರಮುಖ ಪಾತ್ರ ಸರ್.ಎಂ. ವಿಶ್ವೇಶ್ವರಯ್ಯದವರಾಗಿದೆ ಎಂದು ವಿಶ್ಲೇಷಿಸಿದರು.

ದೇಶದ ಪ್ರತಿಯೊಬ್ಬ ಭಾರತಿಯರು ಕೂಡ ತಮ್ಮದೇಯಾದ ವೃತ್ತಿಯಲ್ಲಿ ಶ್ರದ್ದೆ, ಹಾಗೂ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಿದಾಗ ದೇಶವನ್ನು ಅಭಿವೃದ್ದಿ ಕಡೆ ಕೊಂಡೊಯ್ಯಲಿಕ್ಕೆ ಸಾಧ್ಯವಾಗುತ್ತದೆ. “ ಉತ್ತಮವಾಗಿ ಕೆಲಸ ಮಾಡು, ಉತ್ತಮವಾಗಿ ಗಳಿಸು, ಉತ್ತಮವಾಗಿ ಜೀವಿಸು, ಸರ್.ಎಂ. ವಿಶ್ವೇಶ್ವರಯ್ಯ ರವರ ಅನುಯಾಯಿಗಳಾದ ಇಂಜಿನಿಯರ್‌ಗಳಿಗೆ ಶುಭವಾಗಲಿ ಎಂದು ಇಂಜಿನಿಯರ್‌ಗಳಿಗೆ ಶುಭಾಶೆಯ ಕೋರಿದರು.