Sunday, 15th December 2024

ರಾಗಿ ಹೊಲದಲ್ಲಿದ್ದ ಹೆಬ್ಬಾವು ರಕ್ಷಣೆ

ಹುಳಿಯಾರು: ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿ ಗ್ರಾಮದ ಬಳಿಯ ಹೊಲದಲ್ಲಿ ರಾಗಿ ಕೊಯ್ಲು ಮಾಡುವಾಗ ಕಾಣಿಸಿ ಕೊಂಡ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಗ್ರಾಮದ ನಾಗಣ್ಣ ಅವರ ಹೊಲದಲ್ಲಿ ರಾಗಿ ಕೊಯ್ಲು ಮಾಡುವ ವೇಳೆ ಹಾವು ಕಾಣಿಸಿಕೊಂಡಿತ್ತು. ನಂತರ ಹೊಲದ ಮಾಲೀ ಕರು ಹೆಬ್ಬಾವು ಇರುವುದನ್ನು ಖಚಿತಪಡಿಸಿಕೊಂಡು ಬುಕ್ಕಾಪಟ್ಟಣ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದರು.
ಉಪಅರಣ್ಯಾಧಿಕಾರಿ ಸಿದ್ಧಲಿಂಗಮೂರ್ತಿ ಅವರ ನೇತೃತ್ವದ ತಂಡ ತಮ್ಮಡಿಹಳ್ಳಿಗೆ ಆಗಮಿಸಿ 3 ವರ್ಷ ವಯಸ್ಸಿನ 7 ಅಡಿ ಉದ್ದದ 12 ಕೆಜಿ ತೂಕದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

ಆರಣ್ಯ ವೀಕ್ಷಕ ಸುರೇಶ್, ಸಂತೋಷ್, ಪಿಸಿಪಿ ವಾಚರ್ ಸಂತೋಷ್, ರಂಗನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.