ತುಮಕೂರು: ತಾಲೂಕಿನ ಹೀರೆಹಳ್ಳಿ ಸಮೀಪ ರಾಯರಪಾಳ್ಯ ಗ್ರಾಮದ ನಿವಾಸಿ ಪ್ರತಾಪ್ ಅವರ ರಾಗಿ ಹೊಲದಲ್ಲಿ ಅಡಗಿದ್ದ ಸುಮಾರು 9 ಅಡಿ ಉದ್ದದ ಹೆಬ್ಬಾವನ್ನು ವಾರ್ಕೊ ಸಂಸ್ಥೆಯವರು ರಕ್ಷಣೆ (Snake Rescue) ಮಾಡಿದ್ದಾರೆ. ರಾಗಿ ತೆನೆ ಕಟಾವು ಮಾಡುವಾಗ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಭಯಭೀತರಾಗಿದ್ದ ಕೆಲಸದವರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪ್ರತಾಪ್, ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | No Smoking: ಸರ್ಕಾರಿ ಕಚೇರಿ, ಆವರಣಗಳಲ್ಲಿ ಧೂಮಪಾನ, ತಂಬಾಕು ಸೇವನೆ ನಿಷೇಧ
ಸಂಸ್ಥೆಯ ಉರಗ ರಕ್ಷಕರಾದ ಮನು ಅಗ್ನಿವಂಶಿ ಮತ್ತು ಚೇತನ್ ಸ್ಥಳಕ್ಕೆ ಆಗಮಿಸಿ ಬೃಹತ್ ಗಾತ್ರದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ, ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಯ ಸಹಾಯವಾಣಿ 9964519576 ಕರೆ ಮಾಡಬಹುದು ಎಂದು ಉರಗ ರಕ್ಷಕ ಮನು ಮಾಹಿತಿ ನೀಡಿದ್ದಾರೆ.