ಕೊಲ್ಹಾರ: ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಗುರುವಾರ ಸಾಯಂಕಾಲ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಟ್ಟಣದ ಪ್ರಸನ್ನಕುಮಾರ್ ದೇಸಾಯಿ ಅವರು “ಕನ್ನಡ ನಾಡಿನ ಜೀವನದಿ” ಗೀತೆಯನ್ನು ಅದ್ಭುತವಾಗಿ ಹಾಡುವ ಮೂಲಕ ನೆರೆದ ಜನರನ್ನು ರಂಜಿಸಿದರು.
ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಸನ್ನಕುಮಾರ್ ದೇಸಾಯಿ ಕೊಲ್ಹಾರ ಪಟ್ಟಣದವರೇ ಆಗಿದ್ದು. ಅವರ ಅದ್ಭುತ ಕಂಠದಲ್ಲಿ ಮೂಡಿಬಂದ “ಜೀವನದಿ” ಚಲನಚಿತ್ರದ ಕನ್ನಡ ನಾಡಿನ ಜೀವನದಿ ಎನ್ನುವ ಗೀತೆಯು ನೆರೆದ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಪ್ರಸನ್ನಕುಮಾರ್ ದೇಸಾಯಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಂತಹ ಉನ್ನತ ಮಟ್ಟದ ಸ್ಥಾನದಲ್ಲಿದ್ದರು ಕೂಡ ಕನ್ನಡ ಗೀತೆಯನ್ನು ಹಾಡುವ ಮೂಲಕ ಕನ್ನಡ ಪ್ರೇಮವನ್ನು ಮೆರೆಯುವುದರ ಜೊತೆಗೆ ನೆರೆದಿದ್ದ ಸಾರ್ವಜನಿಕರ ಹಾಗೂ ಮಕ್ಕಳ ಪ್ರೀತಿಗೆ ಪಾತ್ರರಾದರು.