Wednesday, 23rd October 2024

Special Trains: ದೀಪಾವಳಿಗಾಗಿ ಬೆಂಗಳೂರಿನಿಂದ ವಿಶೇಷ ರೈಲು ಸೌಲಭ್ಯ

Vande Bharat Train

ಬೆಂಗಳೂರು: ದೀಪಾವಳಿ ಹಬ್ಬದ (Deepavali 2024) ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ನಿಭಾಯಿಸಲು ಮತ್ತು ಪ್ರಯಾಣಿಕರ ಮನವಿ ಮೇರೆಗೆ ನೈಋತ್ಯ ರೈಲ್ವೆಯು (Indian Railways) ಕೆಲವು ವಿಶೇಷ ರೈಲುಗಳನ್ನು (Special Trains) ಓಡಿಸಲು (bangalore news) ನಿರ್ಧರಿಸಿದೆ.

ಕೆ ಎಸ್ ಆರ್ ಬೆಂಗಳೂರು – ಚೆನ್ನೈ ಎಗ್ಮೋರ್ ನಿಲ್ದಾಣಗಳ ನಡುವೆ ಎರಡು ಟ್ರಿಪ್ ಮತ್ತು ಎಸ್ ಎಸ್ ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೇ ನಿರ್ಧರಿಸಿದೆ.

ದೀಪಾವಳಿ (Deepavali Festival) ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ (Bengaluru News) ಈ ಮಾರ್ಗಗಳಿಗೆ ಹೆಚ್ಚುವರಿ ವಿಶೇಷ ರೈಲು (Deepavali Special Trains) ಸೇವೆ ಒದಗಿಸಲು ಭಾರತೀಯ ರೈಲ್ವೇ (Indian Railways) ನಿರ್ಧರಿಸಿದೆ. ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ವೇಳೆ ಜನಗಳ ದಟ್ಟಣೆ ತಡೆಯಲು ಹಾಗೂ ಪ್ರಯಾಣ ಸುಗಮಗೊಳಿಸಲು ಈ ಮೂಲಕ ಉದ್ದೇಶಿಸಲಾಗಿದೆ.

ಹಬ್ಬಗಳ ಸಂದರ್ಭಗಳಲ್ಲಿ ರೈಲುಗಳು ತುಂಬಿ ತುಳುಕುತ್ತಿದ್ದು, ಇದನ್ನು ಗಮನಲ್ಲಿಟ್ಟುಕೊಂಡು ಭಾರತೀಯ ರೈಲ್ವೆಯು ಹೆಚ್ಚುವರಿಯಾಗಿ ವಿಶೇಷ ರೈಲುಗಳನ್ನು ಒದಗಿಸುತ್ತಿದೆ. ಇದೀಗ ದೀಪಾವಳಿ ಹಿನ್ನೆಲೆ ಬೆಂಗಳೂರಿನಿಂದ ಈ ಕೆಳಗಿನ ಮಾರ್ಗಗಳಿಗೆ ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆ ನೀಡಲು ಮುಂದಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಈ ವಿಶೇಷ ರೈಲುಗಳು ಸೇವೆ ಒದಗಿಸಲಿದ್ದು, ಪ್ರಮುಖವಾಗಿ ಬೆಂಗಳೂರು ಹಾಗೂ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಈ ವಿಶೇಷ ರೈಲುಗಳು ಸೇವೆ ನೀಡಲಿವೆ.

ಬೆಂಗಳೂರಿನಿಂದ ಜೋಧಪುರದ ಭಗತ್ ರೈಲ್ವೇ ನಿಲ್ದಾಣಕ್ಕೆ, ಹುಬ್ಬಳ್ಳಿಯಿಂದ ಉತ್ತರಖಂಡದ ಹೃಷಿಕೇಶಕ್ಕೆ ವಿಶೇಷ ರೈಲು ಸೇವೆ ಒದಗಿಸಲಿದೆ. ಅಲ್ಲದೆ, ಶೀಘ್ರದಲ್ಲೇ ಬೆಂಗಳೂರಿನಿಂದ ಕರ್ನಾಟಕದ ವಿವಿಧ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ವಿಶೇಷ ರೈಲು ವೇಳಾಪಟ್ಟಿ ಬಿಡುಗಡೆ ಆಗಲಿದೆ.

ರೈಲು ಸಂಖ್ಯೆ 07363/07364 ಎಸ್‌ಎಸ್‌ಎಸ್ ಹುಬ್ಬಳ್ಳಿ-ಯೋಗ ನಗರ ಹೃಷಿಕೇಶ ಮಾರ್ಗದಲ್ಲಿ ವಾರದಲ್ಲಿ ವಿಶೇಷ ನಾಲ್ಕು ಟ್ರಿಪ್ ಒಡಲಿದೆ. 07363 ರೈಲು ಹುಬ್ಬಳ್ಳಿ ರೈಲು ನಿಲ್ದಾಣದಿಂದ ರಾತ್ರಿ 8:30ಕ್ಕೆ ಹೊರಡಲಿದೆ. ಅಕ್ಟೋಬರ್ 14ರಿಂದ ನವೆಂಬರ್ 4ರ ವರೆಗೆ ಈ ವಿಶೇಷ ರೈಲು ಸೇವೆ ಒದಗಿಸಲಿದೆ. ಇನ್ನು ಇದೇ ಹೃಷಿಕೇಶದಿಂದ ಮರಳಿ ಹುಬ್ಬಳ್ಳಿಗೆ ಬರುವ ರೈಲು ಸಂಖ್ಯೆ 07364, ಹೃಷಿಕೇಶದಿಂದ ಬೆಳಗ್ಗೆ 6:15ಕ್ಕೆ ಹೊರಡಲಿದ್ದು, ಇದು ಅಕ್ಟೋಬರ್ 17ರಿಂದ ನವೆಂಬರ್ 7ರ ವರೆಗೆ ಸೇವೆ ಒದಗಿಸಲಿದೆ. ಹುಬ್ಬಳ್ಳಿಯಿಂದ ಹೊರಡುವ ಈ ರೈಲು ಧಾರವಾಡ-ಲೊಂಡಾ-ಬೆಳಗಾವಿ-ಪುಣೆ-ಗ್ವಾಲಿಯರ್-ಮಥುರಾ-ಹಜ್ರತ್, ನಿಜಾಮುದ್ದೀನ್-ಹರಿದ್ವಾರ ನಿಲ್ದಾಣಗಲ್ಲಿ ನಿಲುಗಡೆ ಆಗಲಿದೆ. ಬಳಿಕ ಹೃಷಿಕೇಶ್ ತಲುಪಲಿದ್ದು, ಹೃಷಿಕೇಶ್‌ದಿಂದ ವಾಪಾಸ್‌ ಬರುವ ರೈಲು ಕೂಡ ಇದೇ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ ಎಂದು ತಿಳಿಸಿದೆ.

ರೈಲು ಸಂಖ್ಯೆ 06587/06588 ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಜೋಧಪುರದ ಭಗತ್ ಕೊಥಿ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸುವ ಈ ರೈಲು ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಡಲಿದೆ. ಇನ್ನು ಭಗತ್ ಕೊಥಿ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗ ಈ ರೈಲು ಬೆಂಗಳೂರಿನತ್ತ ವಾಪಾಸ್‌ ಆಗಲಿದೆ. ಈ ರೈಲು ಬೆಂಗಳೂರಿನ ವಿಶ್ವೇಶ್ವರಯ್ಯ ನಿಲ್ದಾಣದಿಂದ ಹೊರಟು ಬಾಣಸವಾಡಿ-ತುಮಕೂರು-ದಾವಣಗೆರೆ-ಪುಣೆ-ಸೂರತ್-ವಡೋದರ ಹಾಗೂ ಅಬು ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

ಇದನ್ನೂ ಓದಿ: Crime News : ಮಂಗಳೂರಿನಲ್ಲಿ ರೈಲು ಹಳಿ ಮೇಲೆ ಕಲ್ಲಿಟ್ಟು ದುಷ್ಕೃತ್ಯಕ್ಕೆ ಯತ್ನ