Monday, 28th October 2024

Gubbi News: ಉಪ ಲೋಕಾಯುಕ್ತರೆದುರೇ ಭಿಕ್ಷೆ ಬೇಡಿದ ವಿಶೇಷ ಚೇತನ ವೃದ್ಧೆ; ಮೂಲಸೌಕರ್ಯವಿಲ್ಲದೆ ಹಂದಿಜೋಗಿಗಳ ಪರದಾಟ

ಹಂದಿಜೋಗಿ ಕುಟುಂಬ

ತುಮಕೂರು: ಜಿಲ್ಲೆಯ ಗುಬ್ಬಿ ಪಟ್ಟಣದ (Gubbi News) ಮಾರನಕಟ್ಟೆಯಲ್ಲಿರುವ ಹಂದಿಜೋಗಿ ಕುಟುಂಬಗಳು ಕನಿಷ್ಠ ಮೂಲ ಸೌಕರ್ಯಗಳಿಲ್ಲದೇ ಹತ್ತಾರು ವರ್ಷಗಳಿಂದ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಬಿ‌.ವೀರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ವೇಳೆ ಉಪ ಲೋಕಾಯುಕ್ತರೆದುರೇ ವಿಶೇಷ ಚೇತನ ವೃದ್ಧೆಯೊಬ್ಬರು ಭಿಕ್ಷೆ ಬೇಡಿದ ಘಟನೆ ನಡೆದಿದೆ. ವೃದ್ಧೆಯ ಪೂರ್ವಾಪರ ಪರ ವಿಚಾರಿಸಿದ ಉಪ ಲೋಕಾಯುಕ್ತರು, ಆಕೆಗೆ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಕೂಡಲೇ ಮೂಲ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಾರನಕಟ್ಟೆಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಹಂದಿಜೋಗಿ ಕುಟುಂಬಗಳು,
ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಸಾರ್ವಜನಿಕ ಕುಂದು ಕೊರತೆ ಅಹವಾಲು‌ ಸ್ವೀಕಾರ ಸಭೆಯಲ್ಲಿ ಉಪಲೋಕಾಯಕ್ತರಿಗೆ ಮನವಿ ಮಾಡಿದ್ದರು. ಹೀಗಾಗಿ ಹಂದಿಜೋಗಿ ಸಮುದಾಯದ ವಾಸಸ್ಥಳದ ಪರಿಶೀಲನೆಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿದ್ದರು. ಪರಿಶೀಲನೆ ವೇಳೆ‌ ಉಪಲೋಕಾಯುಕ್ತರ ಬಳಿಯೇ ವೃದ್ಧೆ ಭಿಕ್ಷೆ ಬೇಡಿ‌ದರು. ಈ ವೇಳೆ ವೃದ್ಧೆಯ ಪೂರ್ವ ಪರ ಪರ ವಿಚಾರಿಸಿದ ಉಪಲೋಕಾಯುಕ್ತರು, ಹಣ ಸಹಾಯ ಮಾಡಿ ಅವರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಗುಡಿಸಲುಗಳು ತಗ್ಗಿನ ಪ್ರದೇಶದಲ್ಲಿರುವುದರಿಂದ ನೀರು ಒಳಗೆ ನುಗ್ಗದಂತೆ ಅಗತ್ಯ ಅಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ತಾಲೂಕು ಆಡಳಿತ ತಕ್ಷಣಕ್ಕೆ ಮಾಡಿರುವ ತಾತ್ಕಾಲಿಕ ವ್ಯವಸ್ಥೆ ಹಾಗೂ ಶಾಶ್ವತ ಪರಿಹಾರವಾಗಿ ನಿವೇಶನ ಒದಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.

ನಂತರ ಮಾತನಾಡಿದ ಅವರು, ಈ ಪ್ರದೇಶ ತಗ್ಗಿನಲ್ಲಿರುವುದರಿಂದ ನೀರು ನಿಂತು ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಶೀಘ್ರ ಎಲ್ಲರಿಗೂ ನಿವೇಶನ ಒದಗಿಸುವಂತೆ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಇಲ್ಲಿನ ನಿವಾಸಿಗಳು ತಾಲೂಕು ಆಡಳಿತ ನೀಡಿರುವ ಜಾಗಕ್ಕೆ ತುರ್ತಾಗಿ ತೆರಳಬೇಕು. ತಾಲೂಕು ಆಡಳಿತ ಈಗಾಗಲೇ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದು, ಶೀಘ್ರ ಹಕ್ಕುಪತ್ರ ವಿತರಿಸಲು ಸೂಚಿಸಲಾಗಿದೆ. ನಿವಾಸಿಗಳು ನಿಯಮಾನಸಾರ ತಾಲೂಕು ಆಡಳಿತಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ನಿವೇಶನ ಪಡೆದುಕೊಳ್ಳುವಂತೆ ತಿಳಿಸಿದರು.

ಉಪಲೋಕಾಯುಕ್ತರಿಗೆ ಕಾನೂನು ಸೇವಾಪ್ರಾಧಿಕಾರದ ನ್ಯಾಯಾದೀಶೆ ನೂರುನ್ನಿಸಾ ಸಾಥ್ ನೀಡಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೆ ಕೇಂದ್ರದ ಸಿದ್ಧತೆ