ಇಂಡಿ : ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಇಂದು ಜಿಲ್ಲಾ ಪಂಚಾಯತ ವಿಜಯಪುರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಇಂಡಿ ಹಾಗೂ ವಿಶ್ವಭಾರತಿ ವಿದ್ಯಾ ಕೇಂದ್ರ ಪ್ರಾಥಮಿಕ , ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಚ್ಯಾಣ ವಲಯ ಮಟ್ಟದ ಕ್ರೀಡಾಕೂಟ ಜರುಗಿತು.
೨೦೨೨-೨೩ ಸಾಲಿನ ಪ್ರಾಥಮಿಕ ಶಾಲೆಗಳ ಲಚ್ಯಾಣ ವಲಯ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಎಸ್.ಆರ್ ನಡಗಡ್ಡಿ ಅವರು ಉದ್ಘಾಟಿಸಿ ಮಾತನಾಡಿ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಎಂಬAತೆ ಮೊದಲು ಶರೀರ ಸದೃಢವಾಗಿದ್ದರೆ ಮಾತ್ರ ಮನಸ್ಸು ಸದೃಢವಾಗುತ್ತದೆ . ೨ ವರ್ಷಗಳಿಂದ ಕರೋನ ರೋಗದ ಪರಿಣಾಮ ಯಾವುದೇ ಆಟೋಟಗಳು ನಡೆಯದೆ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳು ನಡೆಯದೆ ನಿರುತ್ಸಾಹಿಗಳಾಗಿದ್ದರು . ಇಂದು ಈ ಕಾರ್ಯಕ್ರಮ ನೋಡಿದರೆ ಮಕ್ಕಳು ಅತ್ಯಂತ ಉತ್ಸುಕರಾಗಿದ್ದು ಪ್ರಾಮಾಣಿಕವಾಗಿ ಕ್ರೀಡೆಯಲ್ಲಿ ನಿಮ್ಮ ಪ್ರತಿಭೆಯನ್ನು ಹೊರಹಾಕಿ ಮುಂದೆ ತಾಲುಕಾ , ಜಿಲ್ಲಾ , ರಾಜ್ಯ ಮಟ್ಟಕ್ಕೂ ಆಯ್ಕೆಯಾಗಿ ನಿಮ್ಮ ಪಾಲಕರ , ಶಿಕ್ಷಕರ , ತಾಲೂಕು , ಜಿಲ್ಲೆಯ ಹೆಸರನ್ನು ತರುತ್ತೀರಿ ಎಂದು ಹಾಗೂ ಸುಮಾರು ೧೦ ವರ್ಷಗಳಿಂದ ನಾನು ಗಮನಿಸುತ್ತಿದ್ದೇನೆ . ಈ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯ ಕ್ರಮಗಳು ತಾಲೂಕಿಗೆ ಮಾದರಿಯಾಗಿವೆ ಎಂದರು.
ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ , ಕ್ರೀಡೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಾಲೂಕಿಗೆ ಹೆಸರಾದ ಶಾಲೆ ಎಂದು ಹೇಳಿದರು . ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿಕೊಂಡು ಮಾತನಾಡಿದ ಗ್ರಾಮದ ಪೂಜ್ಯರಾದ ವೇ.ಶ್ರೀ.ದಯಾನಂದ ಮ ಹಿರೇಮಠ ಸ್ವಾಮಿಗಳವರು ಆಶೀರ್ವೊಚನ ನೀಡಿ ಸೋಲೆ ಗೆಲುವಿನ ಸೋಪಾನ ಸೋತಾಗ ಕುಗ್ಗದೆÀ ಗೆದ್ದಾಗ ಬಹಳ ಹಿಗ್ಗದೆ ಸಮನಾಗಿ ಸ್ವೀಕರಿಸಬೇಕು ಎಂದು ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ.ಎಸ್ ಲಾಳಸೇರಿ ಹೇಳಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ.ಜಿ ಕಲ್ಮನಿ ವಹಿಸಿಕೊಂಡಿದ್ದರು, ಗ್ರಾಮಪಂಚಾಯತ ಉಪಾಧ್ಯಕ್ಷರಾದ ಗಾಡಿವಡ್ಡರ, ಸಾಹೇಬ ಗೌಡ ಬಿರಾದರ, ಭೀಮರಾಯ್ ಮೇತ್ರಿ , ಸೋಮನಾಥ ಕುಂಬಾರ ನೆರವೇರಿಸಿದರು.ಶಂಕರಗೌಡ ಬಿರಾದರ. ರಮೇಶ ತಮಶೆಟ್ಟಿ, ಎಸ್.ಬಿ ಕಲ್ಲೊಳಿ ್ಳರಾಜೇಶ ಪವಾರ ಇದ್ದರು.