Sunday, 15th December 2024

Star Fashion: ಟ್ರೆಡಿಷನಲ್‌ ವೇರ್‌‌‌ನಲ್ಲಿ ಸ್ಯಾಂಡಲ್‌‌‌ವುಡ್‌ ನಟಿ ಭಾವನಾ ರಾವ್‌ ಗ್ಲಾಮರಸ್ ಲುಕ್‌!

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರೆಡಿಷನಲ್‌ ವೇರ್‌ನಲ್ಲಿಯೂ ಸ್ಯಾಂಡಲ್‌ವುಡ್‌ ನಟಿ ಭಾವನಾ ರಾವ್‌ (Star Fashion) ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಸಾಂಪ್ರದಾಯಿಕ ಲುಕ್‌ ನೀಡುವ ಬಿಗ್‌ ಬಾರ್ಡರ್‌ ರೇಷ್ಮೆ ಲಂಗಕ್ಕೆ ಬ್ಯಾಕ್‌ಲೆಸ್‌ ಕ್ರಾಪ್‌ ಡಿಸೈನರ್‌ ಬ್ಲೌಸ್‌ ಧರಿಸಿ ಅವರು ಕಾಣಿಸಿಕೊಂಡಿದ್ದು, ಇದೀಗ ಈ ಲುಕ್‌ ಈ ಜನರೇಷನ್‌ನ ಜೆನ್‌ ಜಿ ಹುಡುಗಿಯರಿಗೆ ಪ್ರಿಯವಾಗಿದೆ. ರೇಷ್ಮೆ ಲಂಗವನ್ನು ಹೀಗೂ ಧರಿಸಬಹುದು! ಎಂಬ ಕಾನ್ಸೆಪ್ಟ್‌ಗೆ ಅವರ ಈ ಗ್ಲಾಮರಸ್‌ ಲುಕ್‌ ಕೈಗನ್ನಡಿಯಂತಿದೆ. ಅಂದಹಾಗೆ, ಭಾವನಾ ರಾವ್‌ (Bhavana Rao) ಧರಿಸಿರುವ ಈ ಸಾಂಪ್ರದಾಯಿಕ ಉದ್ದ-ಲಂಗದಲ್ಲಿ (Traditional Wear) ಅವರು ಹೇಗೆ ಮಾರ್ಡನ್‌ ಆಗಿ ಕಾಣಿಸುತ್ತಿದ್ದಾರೆ? ಅವರ ಈ ಸ್ಟೈಲಿಂಗ್‌ ಹುಡುಗಿಯರಿಗೆ ಇಷ್ಟವಾಗಲು ಕಾರಣವೇನು ? ಎಂಬುದರ ಕುರಿತಂತೆ ಫ್ಯಾಷನ್‌ ವಿಶ್ಲೇಷಕರು ರಿವ್ಯೂ ಮಾಡಿದ್ದಾರೆ.

ಭಾವನಾ ರಾವ್‌, ಸ್ಯಾಂಡಲ್‌ವುಡ್‌ ನಟಿ

ಭಾವನಾ ರಾವ್‌ ಟ್ರೆಡಿಷನಲ್‌ವೇರ್‌ನ ಗ್ಲಾಮರಸ್‌ ಲುಕ್‌

ಕ್ರೀಮ್‌ ಹಾಗೂ ಪರ್ಪಲ್‌ ಬಿಗ್‌ ಬಾರ್ಡರ್‌ನ ರೇಷ್ಮೆಯ ಲಂಗ (ದಾವಣಿಯಿಲ್ಲದ ಇದನ್ನು ಇತ್ತೀಚೆಗೆ ಟ್ರೆಡಿಷನಲ್‌ ಲೆಹೆಂಗಾ ಎಂದು ಕೂಡ ಕರೆಯಲಾಗುತ್ತಿದೆ ) ಹಾಗೂ ಅದಕ್ಕೆ ಧರಿಸಿದ ಶಾರ್ಟ್ ಬ್ಯಾಕ್‌ಲೆಸ್‌ ಕ್ರಾಪ್‌ ಶೈಲಿಯ ಟೈಯಿಂಗ್‌ ಬ್ಲೌಸ್‌ ನೋಡಲು ಮನಮೋಹಕವಾಗಿದೆ. ಅಲ್ಲದೇ, ಭಾವನಾ, ಎಲ್ಲರಂತೆ ದಾವಣಿಯನ್ನು ಇದಕ್ಕೆ ಧರಿಸಿಲ್ಲ! ಬದಲಿಗೆ ಇದನ್ನು ಇಂಡೋ-ವೆಸ್ಟರ್ನ್‌ ಶೈಲಿಯ ಉಡುಪಿನಂತೆ ಕ್ಯಾರಿ ಮಾಡಿದ್ದಾರೆ. ಇವರ ಈ ಪಕ್ಕಾ ಸಾಂಪ್ರದಾಯಿಕ ಉಡುಪು ಕೊಂಚ ಸ್ಟೈಲಿಂಗ್‌ ಬದಲಾವಣೆಯಿಂದ ಮಾರ್ಡರ್ನ್‌ ಟಚ್‌ ಪಡೆದುಕೊಂಡಿದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರಾದ ಸಾನಿಯಾ. ಅವರ ಪ್ರಕಾರ, ಇಡೀ ಉಡುಪಿನ ಲುಕ್‌ ಅನ್ನು ಕೇವಲ ಒಂದು ಸ್ಟೈಲಿಂಗ್‌ ಬದಲಿಸಬಹುದಂತೆ.

ಫೋಟೋಗ್ರಾಫಿ: ವಿಶ್ಯುವಲ್‌ ಗ್ಯಾರೇಜ್‌

ಜೆನ್‌ ಜಿ ಹುಡುಗಿಯರಿಗೆ ಪ್ರಿಯ ಈ ಸ್ಟೈಲಿಂಗ್‌

ತೀರಾ ಟ್ರೆಡಿಷನಲ್‌ ಆಗಿಯೂ ಎಥ್ನಿಕ್‌ವೇರ್‌ಗಳನ್ನು ಧರಿಸಲು ಇಷ್ಟಪಡದ ಈ ಜನರೇಷನ್‌ನ ಹುಡುಗಿಯರಿಗೆ ನಟಿ ಭಾವನಾ ರಾವ್‌ ಧರಿಸಿರುವ ಈ ಉಡುಪು ಪ್ರಿಯವಾಗಿದೆಯಂತೆ. ದಾವಣಿರಹಿತ ಕ್ರಾಪ್‌ ಬ್ಲೌಸ್‌ ಲಂಗ ನೋಡಲು ಥೇಟ್‌ ಲಾಂಗ್‌ ಸ್ಕರ್ಟ್ ಹಾಗೂ ಕ್ರಾಪ್‌ ಟಾಪ್‌ನಂತೆ ಬಿಂಬಿಸುತ್ತದೆ. ಇದು ಮಾಡರ್ನ್‌ ಟಚ್‌ ನೀಡುತ್ತದೆ. ಇಂತಹ ಸ್ಟೈಲಿಂಗ್‌ ನಮಗಿಷ್ಟವಾಗಿದೆ ಎನ್ನುತ್ತಾರೆ ಫ್ಯಾಷನ್‌ ಪ್ರಿಯರಾದ ಜಿಯಾ, ಸಖಿ ಹಾಗೂ ಸವಿ.

ಭಾವನಾ ರಾವ್‌ರಂತೆ ಕಾಣಿಸಲು ಈ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ

ಟ್ರೆಡಿಷನಲ್‌ ವೇರ್‌ಗೆ ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ ಮಾಡಿ.
ಗ್ಲಾಮರಸ್‌ ಲುಕ್‌ಗಾಗಿ ಕ್ರಾಪ್‌ ಬ್ಲೌಸ್‌ ಧರಿಸಿ.
ಟ್ರೆಂಡಿ ಕಾಂಟ್ರಸ್ಟ್ ಕಲರ್‌ನ ಡಿಸೈನರ್‌ ವೇರ್‌ ಆಯ್ಕೆ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)