-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ್ (Shwetha Srivatsava), ಅತ್ಯಾಕರ್ಷಕ ಲೆಹೆಂಗಾದಲ್ಲಿ ಮಿಂಚಿದ್ದಾರೆ. ಫೆಸ್ಟಿವ್ ಸೀಸನ್ನಲ್ಲಿ, ಎಥ್ನಿಕ್ ಲುಕ್ ನೀಡಿರುವ ಈ ಡಿಸೈನರ್ ಲೆಹೆಂಗಾದಲ್ಲಿ ಥೇಟ್ ಬಾಲಿವುಡ್ ತಾರೆಯಂತೆ ಕಂಗೊಳಿಸಿದ್ದಾರೆ. ಅಂದಹಾಗೆ, ಅವರ ರೆಕ್ಕೆ ಇದ್ದರೇ ಸಾಕೇ! ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಲೆಹೆಂಗಾದಲ್ಲಿ ಕಾಣಿಸಿಕೊಂಡು (Star Fashion) ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ. ಫೆಸ್ಟಿವ್ ಸೀಸನ್ನಲ್ಲಿ ಗ್ರ್ಯಾಂಡ್ ಎಥ್ನಿಕ್ ಲುಕ್ ನೀಡಿರುವ ಅವರ ಈ ವಿಶೇಷ ಡಿಸೈನರ್ ಲೆಹೆಂಗಾ ವಿಶೇಷತೆಯೇನು? ಎಂಬುದರ ಬಗ್ಗೆ ಖುದ್ದು ಅವರೇ ವಿಶ್ವವಾಣಿ ಡಿಜಿಟಲ್ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.
ನಟಿ ಶ್ವೇತಾ ಫ್ಯಾಷನ್ ಟಾಕ್
ನನಗಂತೂ ಎಥ್ನಿಕ್ವೇರ್ಗಳೆಂದರೆ ಮೊದಲಿನಿಂದಲೂ ಕೊಂಚ ಪ್ರೀತಿ ಹೆಚ್ಚೇ! ದೇಸಿ ಲುಕ್ ನೀಡುವ ಸೀರೆಗಳಿಂದ ಹಿಡಿದು ನಾನಾ ಪ್ರಯೋಗಾತ್ಮಕ ಡಿಸೈನರ್ವೇರ್ಗಳನ್ನು ಆಗಾಗ ಧರಿಸಲು ಇಷ್ಟಪಡುತ್ತೇನೆ. ಇನ್ನು, ಈ ಡಿಸೈನರ್ ಲೆಹೆಂಗಾವನ್ನು ನಾನೇ ಖುದ್ದು ಕಸ್ಟಮೈಸ್ಟ್ ಡಿಸೈನ್ ಮಾಡಿಸಿದ್ದೇನೆ ಎನ್ನುತ್ತಾರೆ ನಟಿ ಶ್ವೇತಾ ಶ್ರೀವಾತ್ಸವ್.
ಮಲ್ಟಿ ಕಲರ್ಡ್ ಕೆಟಗರಿಗೆ ಸೇರುವ ಕ್ರಾಪ್ ಡಿಸೈನರ್ ಬ್ರೋಕೆಡ್ ಬ್ಲೌಸ್ ಹಾಗೂ ಸಿಲ್ಕ್ ಟಿಶ್ಶ್ಯೂ ಫ್ಯಾಬ್ರಿಕ್ನ ಗೋಟಾ ಎಂಬ್ರಾಯ್ಡರಿ ಇರುವ ಬಿಗ್ ಬಾರ್ಡರ್ ಡಿಸೈನ್ನ ಲೆಹೆಂಗಾ, ಇದಕ್ಕೆ ಗ್ರೀನ್ ಕಟೌಟ್ ಬಾರ್ಡರ್ ವಿನ್ಯಾಸದ ದಾವಣಿ/ದುಪಟ್ಟಾ ಡಿಸೈನ್ ಇರುವ ಲೆಹೆಂಗಾ ನೆರಿಗೆಗಳನ್ನು ಹೈಲೈಟ್ ಮಾಡಿ, ಗ್ರ್ಯಾಂಡ್ ಲುಕ್ ನೀಡಿದೆ. ಡಿಸೈನರ್ ಮಾನಸ ಚಂದ್ರ, ಲೆಹೆಂಗಾ ಡಿಸೈನ್ ಮಾಡಿದ್ದಾರೆ ಎಂದಿದ್ದಾರೆ ನಟಿ ಶ್ವೇತಾ ಶ್ರೀವಾತ್ಸವ್.
ಫ್ಯಾಷೆನಬಲ್ ನಟಿ ಶ್ವೇತಾ ಶ್ರೀವಾತ್ಸವ್
ಇನ್ನು, ಸಿನಿಮಾಗಳಲ್ಲಿ ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ನಟಿ ಶ್ವೇತಾ ಶ್ರೀವಾತ್ಸವ್ ಫ್ಯಾಷೆನಬಲ್ ನಟಿ ಎನ್ನಲಡ್ಡಿಯಿಲ್ಲ! ಯಾಕೆಂದರೆ, ಅವರು ವೆಸ್ಟರ್ನ್ ಔಟ್ಫಿಟ್ಗಳಲ್ಲೂ ಅಂದವಾಗಿ ಮಾಡರ್ನ್ ಲುಕ್ನಲ್ಲಿ ಕಾಣಿಸುತ್ತಾರೆ. ಅದೇ ರೀತಿ ತೀರಾ ಟ್ರೆಡಿಷನಲ್ ಸೀರೆಗಳಲ್ಲಿ ದೇಸಿ ಲುಕ್ನಲ್ಲಿ ಮನಮೋಹಕವಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು, ಡಿಸೈನರ್ವೇರ್ಗಳಲ್ಲಿ ಥೇಟ್ ಮಾಡೆಲ್ನಂತೆಯೇ ಮಿಂಚುತ್ತಾರೆ ಎಂಬುದು ಫ್ಯಾಷನ್ ವಿಮರ್ಶಕರ ಅಭಿಪ್ರಾಯ.
ಫೆಸ್ಟಿವ್ ಸೀಸನ್ಗೆ ಶ್ವೇತಾ ಲೆಹೆಂಗಾ ಐಡಿಯಾ
ಸದ್ಯ, ನಟಿ ಶ್ವೇತಾ ಧರಿಸಿದ ಲೆಹೆಂಗಾ, ಈ ಫೆಸ್ಟಿವ್ ಸೀಸನ್ನಲ್ಲಿ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಅಲ್ಲದೇ, ಹೊಸ ಲುಕ್ ಇರುವ ಲೆಹೆಂಗಾದ ಸ್ಲೀವ್, ನೆಕ್ ಡಿಸೈನ್ ಹಾಗೂ ಅಪರೂಪದ ಕಲರ್ ಕಾಂಬಿನೇಷನ್ ಎಥ್ನಿಕ್ವೇರ್ ಪ್ರಿಯರಿಗೆ ಒಂದಿಷ್ಟು ಪ್ರಯೋಗಾತ್ಮಕ ಲೆಹೆಂಗಾ ಡಿಸೈನ್ಗಳಿಗೆ ಐಡಿಯಾ ನೀಡಿದೆ. ಅಲ್ಲದೇ, ಅವರ ಮೇಕೋವರ್ ಕೂಡ ಮುಂಬರುವ ಹಬ್ಬಕ್ಕೆ ಕಾಣಿಸಿಕೊಳ್ಳಲು ಸ್ಪೂರ್ತಿಯಾಗುವಂತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಈ ಸುದ್ದಿಯನ್ನೂ ಓದಿ | Deepavali Party Fashion: ತಾರೆಯರ ದೀಪಾವಳಿ ಪಾರ್ಟಿಯಲ್ಲಿ ಮಿನುಗಿದ ಎಥ್ನಿಕ್ ವೇರ್ಸ್!
ಶ್ವೇತಾ ಲೆಹೆಂಗಾ ಫ್ಯಾಷನ್ ಲುಕ್ಗೆ ಸಾಥ್ ನೀಡಿದ ಅಂಶಗಳಿವು
ಲೆಹೆಂಗಾದ ನೆರಿಗೆ ಮತ್ತು ಬಿಗ್ ಬಾರ್ಡರ್.
ಕಟೌಟ್ ಬಾರ್ಡರ್ನ ಅತ್ಯಾಕರ್ಷಕ ದುಪಟ್ಟಾ .
ಸ್ಲೀವ್ಲೆಸ್ ಡಿಸೈನರ್ ಲೆಹೆಂಗಾದ ಕ್ರಾಪ್ ಬ್ಲೌಸ್.
ಅತ್ಯಾಕರ್ಷಕ ಮೇಕಪ್ & ಹೇರ್ಸ್ಟೈಲ್.
ಹಣೆಗಿಟ್ಟ ಪುಟ್ಟ ರೆಡ್ ಬಿಂದಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)