Saturday, 28th September 2024

Star Nail Art: ಅಕ್ರಾಲಿಕ್‌ ನೇಲ್‌ ಆರ್ಟ್ ಬಗ್ಗೆ ಕನ್ನಡ ರ‍್ಯಾಪರ್‌ ಇಶಾನಿಯ ಟಿಪ್ಸ್ ಹೀಗಿದೆ!

Star Nail Art

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕನ್ನಡ ಲೇಡಿ ರ‍್ಯಾಪರ್‌, ಬಿಗ್‌ ಬಾಸ್‌ (Bigg Boss) ಸ್ಪರ್ಧಿ ಇಶಾನಿಗೆ (Ishani) ಇದೀಗ ನೇಲ್‌ ಆರ್ಟ್ (Star Nail Art) ಮೇಲೆ ಲವ್‌ ಆಗಿದೆ. ರಾಯಲ್‌ ಲುಕ್‌ ನೀಡುವ ಅತ್ಯಾಕರ್ಷಕ ಅಕ್ರಾಲಿಕ್‌ ನೇಲ್‌ ಆರ್ಟ್ ಮಾಡಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಸದ್ಯದ ಫ್ಯಾಷನ್‌ ಸ್ಟೇಟ್‌ಮೆಂಟ್‌ ಬದಲಾಗಿದೆ. ಇತ್ತೀಚೆಗಷ್ಟೇ ತಮ್ಮ ಹೊಸ ಕನ್ನಡ ರ‍್ಯಾಪ್‌ ಆಲ್ಬಂ ಬಿಡುಗಡೆ ಮಾಡಿರುವ ಇಶಾನಿ, ತಮ್ಮ ಹೇಟರ್ಸ್‌ಗೆಲ್ಲಾ ಆಲ್ಬಂನ ಸ್ಕ್ರಿಪ್ಟ್ ಮುಖಾಂತರವೇ ನೇರವಾಗಿ ಉತ್ತರ ನೀಡಿದ್ದಾರೆ. ಈ ಆಲ್ಬಂನಲ್ಲಿ ಅವರು ಕಂಪ್ಲೀಟ್‌ ಅಲ್ಟ್ರಾ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೈ ಎಂದಿದ್ದಾರೆ. ಇನ್ನು, ಈ ಲುಕ್‌ಗೆ ಪೂರಕವಾಗುವಂತೆ, ನೇಲ್‌ ಆರ್ಟ್‌ಗೂ ಸೈ ಎಂದಿದ್ದಾರೆ.

ಕನ್ನಡ ರ‍್ಯಾಪರ್‌ ಇಶಾನಿಯ ಆಕರ್ಷಕ ನೇಲ್‌ ಆರ್ಟ್

ನೇಲ್‌ ಆರ್ಟ್ ಬಗ್ಗೆ ಇಶಾನಿ ಹೇಳುವುದೇನು?

ನನ್ನ ಅಕ್ರಾಲಿಕ್‌ ನೇಲ್‌ ಆರ್ಟ್ ನನಗೆ ತುಂಬಾ ಇಷ್ಟವಾಗಿದೆ. ಆಲ್ಬಂಗಾಗಿ ಈ ನೇಲ್‌ ಆರ್ಟ್ ಮಾಡಿಸಿದೆ. ಅದಕ್ಕಾಗಿ ನಾನು ಒಂದಿಷ್ಟು ನೇಲ್‌ ಆರ್ಟ್ ಕುರಿತಂತೆ ಸರ್ಚ್ ಕೂಡ ಮಾಡಿದ್ದೆ. ಅದರಲ್ಲಿ ರಾಯಲ್‌ ಲುಕ್ ನೀಡುವ ಅಕ್ರಾಲಿಕ್‌ ನೇಲ್‌ ಆರ್ಟ್ ಬಲು ಇಷ್ಟವಾಯಿತು. ಇದಕ್ಕೆ ಪೂರಕ ಎಂಬಂತೆ, ಗ್ಲಾಮ್‌ ಕಾಸ್ಮಿಕ್‌ ನೇಲ್ಸ್‌ನವರು, ನನಗೆ ಬೇಕಾದಂತೆ, ಇದನ್ನು ಕಲಾತ್ಮಕವಾಗಿ ಉಗುರುಗಳ ಮೇಲೆ ಮೂಡಿಸಿದರು. ಪರಿಣಾಮ, ನನ್ನ ಲುಕ್‌ಗೆ ಇದು ಮತ್ತಷ್ಟು ಸಾಥ್‌ ನೀಡಿತು ಎಂದು ಇಶಾನಿ ನೇಲ್‌ ಆರ್ಟ್ ಲವ್‌ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರಕೃಪೆ: ಗ್ಲಾಮ್‌ ಕಾಸ್ಮಿಕ್‌ ಲ್ಯಾಶೆಸ್ & ನೇಲ್ಸ್

ಏನಿದು ಅಕ್ರಾಲಿಕ್‌ ನೇಲ್‌ ಆರ್ಟ್?

ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ರಾಯಲ್‌ ಲುಕ್‌ ನೀಡುವ ಸ್ವರೊಸ್ಕಿ ಸ್ಟೋನ್ಸ್ ಬಳಸಿ ಮಾಡುವ ನೇಲ್‌ ಆರ್ಟ್ ಎಕ್ಸ್‌ಟೆನ್ಷನ್‌ ಇದು ಎನ್ನುತ್ತಾರೆ ಕಾಸ್ಮಿಕ್‌ ಲ್ಯಾಶೆಸ್‌ ಮತ್ತು ನೇಲ್ಸ್ ಸಂಸ್ಥೆಯ ಸಂಸ್ಥಾಪಕರಾದ ರಂಜಿತಾ. ಅವರು ಹೇಳುವಂತೆ, ಓರಿಜಿನಲ್‌ ನೇಲ್‌, ಸಿದ್ಧಗೊಳಿಸಿ, ಅದರ ಮೇಲೆ ಈ ಚಿತ್ತಾರ ಮೂಡಿರುವ ಅಕ್ರಾಲಿಕ್‌ ನೇಲ್‌ ಆರ್ಟ್ ಎಕ್ಸ್‌ಟೆನ್ಷನ್‌ ಸ್ಟಿಕ್‌ ಮಾಡಲಾಗುತ್ತದೆ. ಸೂಕ್ತ ನಿರ್ವಹಣೆಗೆ ತಕ್ಕಂತೆ ಸುಮಾರು ಒಂದೂವರೆ ತಿಂಗಳ ಕಾಲ ಇವು ಬಾಳಿಕೆ ಬರುತ್ತವೆ ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | Star Fashion: ಬೂಟ್‌ ಕಟ್‌ ಪ್ಯಾಂಟ್‌ ಕೋ ಆರ್ಡ್ ಸೆಟ್‌! ನಟಿ ಸಮಂತಾ ಧರಿಸಿದ್ದ ಈ ಡ್ರೆಸ್ ನೀವೂ ಧರಿಸಲು ಇಲ್ಲಿದೆ ಟಿಪ್ಸ್

ನೇಲ್‌ ಆರ್ಟ್ ಪ್ರಿಯರಿಗೆ ನೇಲ್‌ ಡಿಸೈನರ್ಸ್ ಸಿಂಪಲ್‌ ಟಿಪ್ಸ್

ಪಾರ್ಟಿ ಮಾತ್ರವಲ್ಲ, ಮದುವೆ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೂ ನೇಲ್‌ ಆರ್ಟ್ ಆಕರ್ಷಕವಾಗಿ ಕಾಣಿಸುತ್ತದೆ.
ನೇಲ್‌ ಆರ್ಟ್ ನಂತರ ಉಗುರುಗಳನ್ನು ಬಳಸಿ, ರಫ್‌ ವರ್ಕ್‌ ಮಾಡಲಾಗದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಮೆನಿಕ್ಯೂರ್‌ ಮಾಡಿಸಿದ ನಂತರ ನೇಲ್‌ ಆರ್ಟ್ ಮಾಡಿಸಬೇಕು.
ನಿಮ್ಮ ಕೈಗಳಿಗೆ ಅಂದ ಕಾಣಿಸುವಂತಹ ನೇಲ್‌ ಆರ್ಟ್‌ ಅನ್ನು ಮೊದಲೇ ಚೂಸ್‌ ಮಾಡಿಕೊಳ್ಳಬಹುದು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)