Wednesday, 30th October 2024

Star Saree Fashion: ಹೊಸ ಜಮಾನಾದ ಹುಡುಗಿಯರ ಗಮನ ಸೆಳೆದಿದೆ ನಟಿ ತೃಪ್ತಿ ದಿಮ್ರಿಯ 1.65 ಲಕ್ಷ ರೂ. ಮೌಲ್ಯದ ಸೀರೆ!

Star Saree Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಆಕರ್ಷಕ ಎಂಬ್ರಾಯ್ಡರಿ ಹೊಂದಿರುವ ರೋಸ್‌ ಪಿಂಕ್‌ ಬಣ್ಣದ ರೆಡಿ ಶೀರ್‌ ಸೀರೆಯಲ್ಲಿ (Star Saree Fashion) ಬಾಲಿವುಡ್‌ ನಟಿ ತೃಪ್ತಿ ದಿಮ್ರಿ (Tripti Dimri) ಕಾಣಿಸಿಕೊಂಡಿದ್ದು, ಇದು ಜೆನ್‌ ಜಿ ಹುಡುಗಿಯರ ಹಾಗೂ ಸೀರೆ ಪ್ರಿಯರ ಗಮನ ಸೆಳೆದಿದೆ. ಅನಿಮಲ್‌ ಹಿಂದಿ ಸಿನಿಮಾದ ಮೂಲಕ ಹಾಟ್‌ ನಟಿಯೆಂದೇ ಖ್ಯಾತಿ ಗಳಿಸಿರುವ ತೃಪ್ತಿ ದಿಮ್ರಿ, ಫೆಸ್ಟಿವ್‌ ಸೀಸನ್‌ನಲ್ಲಿ ಇದ್ದಕ್ಕಿಂದ್ದಂತೆ ಸೀರೆಯಲ್ಲಿ ಕಾಣಿಸಿಕೊಂಡಿರುವುದಕ್ಕೆ ಸಾಕಷ್ಟು ಮಂದಿ ಹುಬ್ಬೇರಿಸಿದ್ದಾರೆ.

ತೃಪ್ತಿ ದಿಮ್ರಿ, ಬಾಲಿವುಡ್‌ ನಟಿ

1,65,000 ಲಕ್ಷ ರೂ.ಗಳ ರೆಡಿ ಸೀರೆಯಿದು

ಜೆನ್‌ ಜಿ ಹುಡುಗಿಯರನ್ನು ಸೆಳೆದಿರುವ ಈ ಸೀರೆಯ ಬೆಲೆ ಕಡಿಮೆಯೇನಿಲ್ಲ! ರೇಷ್ಮೆ ಸೀರೆಯಷ್ಟೇ ದುಬಾರಿ ಬೆಲೆ ಇದಕ್ಕಿದೆ. ಅಂದಾಜು ಸರಿ ಸುಮಾರು 1,65,000 ಲಕ್ಷರೂ.ಗಳ ಬೆಲೆ ಹೊಂದಿದೆಯೆನ್ನಲಾಗಿದೆ. ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ಮ್ಯಾಚ್‌ ಆಗುವಂತಹ ವಿನ್ಯಾಸ ಹೊಂದಿದೆ. ಹಾಗಾಗಿ ಈ ಶೈಲಿಯ ಸೀರೆಗಳನ್ನು ಸೆಲೆಬ್ರೆಟಿ ಸೀರೆಗಳೆಂದು ಕರೆಯಲಾಗುತ್ತದೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ದೀಪಾವಳಿ ಫೆಸ್ಟಿವ್‌ ಪ್ರಿ ಸೆಲೆಬ್ರೇಷನ್‌ ಸೀರೆಯಿದು

“ತೃಪ್ತಿ ಮೊದಲಿನಿಂದಲೂ ಗ್ಲಾಮರಸ್‌ ಲುಕ್‌ನಲ್ಲೆ ಕಾಣಿಸಿಕೊಂಡವರು. ಇದ್ದಕ್ಕಿದ್ದಂತೆ ಸೀರೆಯಲ್ಲಿ ಕಾಣಿಸಿಕೊಂಡಾಗ ಎಲ್ಲರಿಗೂ ಅಚ್ಚರಿ ಮೂಡುವುದು ಸಹಜ. ದೀಪಾವಳಿ ಫೆಸ್ಟಿವ್‌ ಸೀಸನ್‌ ಆಗಿರುವುದರಿಂದ ಬಾಲಿವುಡ್‌ನಲ್ಲಿ ಸಾಕಷ್ಟು ಹಬ್ಬದ ಪ್ರಿ ಸೆಲೆಬ್ರೇಷನ್‌ ಪಾರ್ಟಿಗಳು ನಡೆಯುತ್ತವೆ. ಅಲ್ಲದೇ, ಪ್ರಮೋಷನ್‌ಗಳು ಕೂಡ ನಡೆಯುತ್ತವೆ. ಇದಕ್ಕೆ ಪೂರಕ ಎಂಬಂತೆ, ಸೆಲೆಬ್ರೆಟಿ ಡಿಸೈನರ್‌ ಅರ್ಪಿತಾ ಮೆಹ್ತಾ ಅವರ ಈ ಡಿಸೈನರ್‌ ಸೀರೆಯಲ್ಲಿ ತೃಪ್ತಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದು ಸೋಷಿಯಲ್‌ ಮೀಡಿಯಾದಲ್ಲಿ ಸೀರೆ ಪ್ರಿಯರನ್ನು ಸೆಳೆದಿದೆ” ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ತೃಪ್ತಿ ಉಟ್ಟ ರೆಡಿಮೇಡ್‌ ಶೀರ್‌ ಎಂಬ್ರಾಯ್ಡರಿ ಸೀರೆ ವಿಶೇಷತೆ

ಅಂದಹಾಗೆ, ತೃಪ್ತಿ ಉಟ್ಟಿರುವ ಸೀರೆ ರೆಡಿಮೇಡ್‌ ಸೀರೆಯಾಗಿದೆ. ಅಲ್ಲಲ್ಲಿ ಗೋಲ್ಡನ್‌ ಎಂಬ್ರಾಯ್ಡರಿ ಬುಟಾ ಡಿಸೈನ್‌ ಹೊಂದಿದ್ದು, ತಿಳಿ ಗುಲಾಬಿ ಬಣ್ಣದ್ದಾಗಿದೆ. ಪಾರದರ್ಶಕವಾಗಿರುವ ಈ ಶೀರ್‌ ಸೀರೆಯು ನೆರಿಗೆಯ ಬದಲು ರಫಲ್ಸ್ನಂತಹ ಡಿಸೈನ್‌ ಹೊಂದಿದೆ. ಒಂದು ನಿಮಿಷದಲ್ಲಿ ಯಾರೂ ಬೇಕಾದರೂ ಉಡಬಹುದಾದಂತಹ ಸೀರೆಯಿದು. ಇನ್ನು ಇದಕ್ಕೆ ಮ್ಯಾಚ್‌ ಮಾಡಿರುವ ಡಿಸೈನರ್‌ ಸ್ಲಿವ್‌ಲೆಸ್‌ ಬ್ಲೌಸ್‌ ಕಂಪ್ಲೀಟ್‌ ಗೋಲ್ಡ್‌ ಡಿಸೈನ್‌ ಹೊಂದಿದೆ. ಅತ್ಯಾಕರ್ಷಕ ವಿನ್ಯಾಸ ಒಳಗೊಂಡಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)