-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಮನಮೋಹಕವಾಗಿರುವ ಡಿಸೈನರ್ ನೆಟ್ಟೆಡ್ ಸೀರೆಯಲ್ಲಿ ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Star Saree Fashion), ದಂತದ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಲುಕ್ ನೀಡುವ ಪೀಕಾಕ್ ಗ್ರೀನ್ ಕಲರ್‌ನ ವಿಭಿನ್ನ ಕಾಂಬಿನೇಷನ್‌ನ ಸೂಕ್ಷ್ಮ ವಿನ್ಯಾಸದ ನೆಟ್ಟೆಡ್ ಸೀರೆಯಿದು. ಪಿಂಕ್ ಶೇಡ್‌ನ ಚಿಕ್ಕ ಬಾರ್ಡರ್ ಇದಕ್ಕಿದೆ. ಈ ಶೈಲಿಯ ನೆಟ್ಟೆಡ್ ಸೀರೆಗಳು ಬ್ರಂಚ್ ಪಾರ್ಟಿ, ನೈಟ್ ಪಾರ್ಟಿಗಳಲ್ಲಿ ಗ್ಲಾಮರಸ್ ದೇಸಿ ಲುಕ್ ಬಯಸುವವರು ಧರಿಸಬಹುದಾಗಿದೆ. ಇದು ಕಸ್ಟಮೈಸ್ಡ್ ಸೀರೆಯಾಗಿದ್ದು, ಗ್ಲಾಮರಸ್ ಲುಕ್‌ಗಾಗಿ ಸಿಕ್ವೀನ್ಸ್ ಸ್ಲಿವ್‌ಲೆಸ್ ಬ್ಲೌಸ್ ಮ್ಯಾಚ್ ಮಾಡಲಾಗಿದೆ ಎನ್ನುತ್ತಾರೆ ಈ ಸೀರೆಯನ್ನು ವಿನ್ಯಾಸಗೊಳಿಸಿರುವ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ.
ಸೀರೆ ಕುರಿತು ಮಾನ್ವಿತಾ ಮಾತು
ಮನಮೋಹಕವಾಗಿ ಕಾಣಿಸುತ್ತಿರುವ ಈ ನೆಟ್ಟೆಡ್ ಡಿಸೈನರ್ ಸೀರೆಯ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸೀರೆ ಪ್ರಿಯರನ್ನು ಸೆಳೆದಿರುವುದು ಮಾತ್ರವಲ್ಲ, ಇತರೇ ಅಭಿಮಾನಿಗಳಿಗೂ ಇಷ್ಟವಾಗಿದೆ. ಆ ಮಟ್ಟಿಗೆ ಈ ಸೀರೆ ಜಾದೂ ಮಾಡಿದೆ. ನನಗೂ ಇಷ್ಟವಾಗಿದೆ ಎನ್ನುತ್ತಾರೆ ನಟಿ ಮಾನ್ವಿತಾ ಕಾಮತ್.
ನಟಿ ಮಾನ್ವಿತಾ ಸೀರೆ ಲವ್
ಸೀರೆಯಲ್ಲಿನ ಬ್ಯೂಟಿಫುಲ್ ಲುಕ್ ಕುರಿತಂತೆ ವಿಶ್ವವಾಣಿ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಮಾನ್ವಿತಾ, ಫೆಮಿನೈನ್ ಲುಕ್‌ಗೆ ಸಾಥ್ ನೀಡುವ ಸೀರೆಯ ಸ್ಟೈಲಿಂಗ್ ಯಾವತ್ತಿಗೂ ನನ್ನ ಇಷ್ಟವಾದ ಎವರ್‌ಗ್ರೀನ್ ಸ್ಟೈಲಿಂಗ್‌ನಲ್ಲಿರುತ್ತದೆ. ಅದರಲ್ಲೂ ಈ ಕಸ್ಟಮೈಸ್ಡ್ ನೆಟ್ಟೆಡ್ ಸೀರೆ ನನ್ನತನವನ್ನು ಪ್ರತಿಬಿಂಬಿಸಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Reliance Retail: ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಐಷಾರಾಮಿ ಬ್ಯೂಟಿ ಸ್ಟೋರ್ ಆರಂಭಿಸಿದ ಟಿರಾ!
ಸೀರೆಯಲ್ಲಿ ಮಾನ್ವಿತಾರಂತೆ ಕಾಣಿಸಲು ಇಲ್ಲಿದೆ 7 ಸಿಂಪಲ್ ಐಡಿಯಾ
- ಆದಷ್ಟೂ ಎಲಿಗೆಂಟ್ ಲುಕ್ ನೀಡುವ ಬಣ್ಣದ ನೆಟ್ಟೆಡ್ ಸೀರೆ ಆಯ್ಕೆ ಮಾಡಬೇಕು.
- ಕಂಟೆಂಪರರಿ ಲುಕ್‌ಗಾಗಿ ಟ್ರೆಡಿಷನಲ್ ಮೇಕಪ್ ಹಾಗೂ ಹೇರ್‌ಸ್ಟೈಲ್ ಆವಾಯ್ಡ್ ಮಾಡಬೇಕು.
- ಕಸ್ಟಮೈಸ್ಡ್ ಡಿಸೈನರ್ ಸೀರೆಗಳು ಬಾಡಿಟೈಪ್‌ಗೆ ಹೊಂದಿಕೊಳ್ಳುತ್ತವೆ. ಹಾಗಾಗಿ ಅಂತಹವನ್ನೇ ಸೆಲೆಕ್ಟ್ ಮಾಡುವುದು ಬೆಸ್ಟ್.
- ಸೆಲೆಬ್ರೆಟಿ ಲುಕ್‌ಗಾಗಿ ಸಿಕ್ವೀನ್ಸ್ ಸ್ಲಿವ್‌ಲೆಸ್ ಬ್ಲೌಸನ್ನು ನೆಟ್ಟೆಡ್ ಸೀರೆಗೆ ಮ್ಯಾಚ್ ಮಾಡಿದಲ್ಲಿ ಸೀರೆ ಹೈಲೈಟಾಗುವುದು.
- ನೆಟ್ಟೆಡ್ ಸೀರೆ ಉಡುವವರು ಮೊದಲೇ ಔಟ್‌ಲುಕ್ ಬಗ್ಗೆ ಪ್ಲಾನ್ ಮಾಡಬೇಕು.
- ಪಾರ್ಟಿವೇರ್ ಬದಲು ಈ ಶೈಲಿಯ ಸೀರೆಗಳನ್ನು ಉಡಬಹುದು. ಆದರೆ, ಇಂಡೋ-ವೆಸ್ಟರ್ನ್ ಸ್ಟೈಲಿಂಗ್ ಮಾಡಬೇಕಾಗುತ್ತದೆ.
- ಸೀರೆಗೆ ತಕ್ಕಂತೆ ಮೇಕೋವರ್ ಕೂಡ ಅಗತ್ಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)