Monday, 13th May 2024

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ೧ ನೂರಾ ೧೫ ಕೋಟಿ ನಷ್ಟ: ಮಾಜಿ ಶಾಸಕ ಡಾ,ಸಾರ್ವಭೌಮ ಬಗಲಿ ಆರೋಪ

ಇಂಡಿ: ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ೨೦೨೨ ಮಾರ್ಚ ೩೧ ಕ್ಕೆ ಇರುವಂತೆ ಸಂಘದ ಸಂದಾಯ ಷೇರು ೭೩.೫೦೦ ಎಂದು ಹೊಂದಿಸ ಲಾಗಿದೆ. ಸಾಮಾನ್ಯ ಷೇರು ೭೩.೫೦೦ ಇರಲು ಸಾಧ್ಯವೆ ? ಯಾಕೆಂದರೆ ಷೇರಿನ ಮುಖಬೆಲೆ ಮತ್ತು ಸಾಮಾನ್ಯ ಷೇರಿನ ಮೊತ್ತ ತಾಳೆ ಹೊಂದಾಣಿಕೆ ಯಾಗುವುದಿಲ್ಲ ತಪ್ಪು ವರದಿಯಾಗಿದೆ.ಕಳೇದ ಮೂರು ವರ್ಷಗಳಿಂದ ೧ ನೂರಾ ೧೫ ಕೋಟಿ ನಷ್ಟದಲ್ಲಿದ್ದು ಇದಕ್ಕೆ ಸಂಪೂರ್ಣ ಕಾರ್ಖಾನೆಯ ಅಧ್ಯಕ್ಷ , ಆಡಳಿತ ಮಂಡಳಿಯವರ ಅಚಾರ್ತ್ಯುವೆ ಕಾರಣ ಎಂದು ಮಾಜಿ ಡಾ. ಸಾರ್ವಭೌಮ ಬಗಲಿ ಆರೋಪಿಸಿದ್ದಾರೆ.

೨೦೨೧-೨೨ನೇಸಾಲಿನಲ್ಲಿ ಕೆವಲ ೪ ಸಲ ಮಾತ್ರ ಮೀಟಿಂಗ್ ಕರೆಯಲಾಗಿದೆ ವ್ಯಸ್ಥಾಪಕ ನಿರ್ದೇಶಕರು ಮತ್ತು ಸರಕಾರದ ನಾಮನಿರ್ದೇಶಕರು ಹಾಜರಾಗಿರುವುದಿಲ್ಲ. ಇವರ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮತ್ತು ಬೆಳವಣಿಗೆ ವಿಷಯಗಳನ್ನು ಚರ್ಚಿಸಿ ಠರಾವು ಅನುಮೂದಿಸುವುದು ಹೇಗೆ ಸಾಧ್ಯ ? ವ್ಯವಸ್ಥಾಪಕ ನಿರ್ದೇಶಕರ ಅನುಪಸ್ಥಿತಿಯಲ್ಲಿ ತೆಗೆದುಕೊಂಡ ಠರಾವುಗಳಿಗೆ ಕಾನೂನು ರಕ್ಷಣೆವಿರುವುದಿಲ್ಲ. ಇದಕ್ಕೆ ಅಧ್ಯಕ್ಷರು. ಉಪಾ ಧ್ಯಕ್ಷರು ,ನಿರ್ದೇಶಕರು ನೇರ ಹೊಣೆ ಆದ್ದರಿಂದ ಠರಾವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು.

ಶ್ರೀಭೀಮಾಶಂಕರ ಸಕ್ಕರೆ ಕಾರ್ಖಾನೆ ಸಕ್ಕರೆ ಇಳುವರಿ ೧೦.೨೩ ಮತ್ತು ಕಾಕಾಂಬಿಯ ಇಳುವರಿ ೪.೪೨ ಎಂದು ವೈಬ್‌ಸೈಟ್ ವರದಿ ತೋರಿಸಲಾಗಿದೆ ಈ ಅಂಕಿ ಆಂಸಗಳು ಪ್ರಶ್ನಾವಳಿಯಾಗಿವೆ. ಸಕ್ಕರೆ ಉತ್ಪಾದನೆ ಪ್ರಮಾಣ ದಲ್ಲಿ ೪ಸಾವಿರ ಕ್ವೀಂಟಲ್ ಸಕ್ಕರೆ ಸೋರಿಕೆಯಾಗಿರಬಹುದು ಅಂದಾಜಿಸಲಾಗಿದೆ ಎಂದು ಆರೋಪಿಸಿದರು.

ಕಾಕಾಂಬಿ ಭಾರತ ಸರಕಾರದ ಕಾನೂನಿ ಪ್ರಕಾರ ತೆರೆದ ಕಂಟೇನರ್‌ನಲ್ಲಿ ಹಾಕಲು ಅವಕಾಶ ಇರುವುದಿಲ್ಲ . ಕಾಕಾಂಬಿ ಬಾಯ್ ಪ್ರೋಡೇಕ್ಟ್ ಆಗಿರುತ್ತದೆ .ಆಡಳಿತ ಮಂಡಳಿಯವರು ಕಾಕಾಂಬಿಯನ್ನು (ಮಾಲಾಸಿಸ್) ತೆರೆದ ಕಂಟೇನರಲ್ಲಿ ಹಾಕಿರುತ್ತಾರೆ ಎಂದು ಹೇಳಲಾಗಿದೆ ,ಕಾಕಾಂಬಿ ತೆರೆದ ಕಂಟೇರ್‌ ನಲ್ಲಿ ಹಾಕುವುದರಿಂದ ಜನಸಾಮಾನ್ಯರಿಗೆ, ಕಾರ್ಮಿಕರಿಗೆ ತೊಂದರೆ ಇದ್ದು ಕೆಲಸ ಸಂದರ್ಬಗಳಲ್ಲಿ ಬೆಂಕಿ ಹತ್ತು ಸಂಭವ ಹೆಚ್ಚು . ಕಂಟೆನರ್‌ಗಳಲ್ಲಿದ್ದ ಕಾಕಾಂಬಿ ಲೆಕ್ಕಕ್ಕೆ ತಗೆದುಕೊಳ್ಳದೆ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತದೆ ,ಓರ್‌ಹಿಟ್ ಆಗಿದೆ ಸುಟ್ಟು ಹೋಗಿದೆ ಎಂದು ಹೇಳುತ್ತಾರೆ ಆರೋಪಿಸಿದ ಅವರು ಇದರಿಂದ ಸುಮಾರು ೩ಕೋಟಿ ಕಾರ್ಖಾನೆಗೆ ನಷ್ಟವಾಗಿದೆ ಇದನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ಸರಿಪಡಿಸಬೇಕು ಎಂದರು.
ಸಕ್ಕರೆ ಅಕ್ರಮ ರಪ್ತು ಕುರಿತಂತೆ ನಂದಿ ಸಕ್ಕರೆ ಕಾರ್ಖಾನೆಯಲ್ಲಿ ಮಾತ್ರವೇ ನಡೇದಿಲ್ಲ .ಜಿಲ್ಲೆಯಲ್ಲಿ ಇದೊಂದೆ ಅಲ್ಲ ಶ್ರೀಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಕೂಡಾ ನಡೆದಿದೆ ಎಂದು ನಂದಿ ಕಾರ್ಖಾನೆಯ ಅಧ್ಯಕ್ಷರು ಹೇಳಿರುವ ಮಾರ್ಚ ೮ರಂದು ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿಯಾಗಿದೆ ಎಂದು ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇನ್ನಾದರು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಕ್ಕರೆಯಿಂದ ಬರುವ ಲಾಭ ರೈತರಿಗೆ ನೀಡಿ ,ಕಾರ್ಖಾನೆ ಸಾಲದ ಖುಣಭಾರದಿಂದ ಮುಕ್ತಿ ಮಾಡಬೇಕು ಎಂದರು.

error: Content is protected !!