ಇಂಡಿ: ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮರಗೂರ ಚುನಾವಣೆ ಪ್ರಯುಕ್ತ ೩ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ನಮಗೆ ಆಯ್ಕೆ ಮಾಡಿದರೆ ರೈತರ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆ ಹಿತ ಕಾಪಾಡುವದರೊಂದಿಗೆ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವುದುಗಾಗಿ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಹೇಳಿದರು.
ಪಟ್ಟಣದ ಅಮರ ಇಂಟರ್ ನ್ಯಾಶನಲ್ ಹೋಟೇಲ್ ಆವರಣದಲ್ಲಿ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಪ್ರಯುಕ್ತ ಕರೇದ ಪತ್ರೀಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅತ್ಯೆಂತ ಪಾರದರ್ಶಕ ನಡೆಯಬೇಕು. ಚುನಾವಣೆ ಗಳಿಲ್ಲದೆ ಯಾವುದೇ ಆಡಳಿತ ಮಂಡಳಿ ನಡೆಸಿದರೆ ದುರುಪಯೋಗವಾಗುತ್ತದೆ ಕಳೆದ ಆಡಳಿತ ಮಂಡಳಿ ಒಂದೇ ಇರುವದರಿಂದ ಕಾರ್ಖಾನೆಯ ಅಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ.ಕಳೆದ ೭ ವರ್ಷಗಳಿಂದ ಸಾಲದ ಸುಳಿಯಲ್ಲಿಯೇ ನಡೇದಿರುವುದು ವಿಷಾದನೀಯ ಸಂಗತಿ ಎಂದರು.
ಬರುವ ೫ ವರ್ಷಗಳಲ್ಲಿ ಕಾರ್ಖಾನೆಯನ್ನು ಸಾಲ ಮುಕ್ತಮಾಡುವ ಏಕಮಾತ್ರ ಉದ್ದೇಶದಿಂದ ಡಾ. ಸಾರ್ವಭೌಮ ಬಗಲಿ ,ನಾಗನಾಥ ಬಿರಾದಾರ, ಇವರು ಪ್ರಸಕ್ತ ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ. ಮುತ್ತಪ್ಪ ತಿಪ್ಪಣ್ಣಾ ಪೋತೆ ಇವರು ಪರಿಶಿಷ್ಠ ಜಾತಿ ಮೀಸಲು ನಿರ್ದೇಶಕ ಮಂಡಳಿ ಚುನಾವಣೆ ಸ್ಪರ್ಧಿಸುತ್ತಿದ್ದೇವೆ. ಅದಕ್ಕೆ ತಮ್ಮ ಅಮೂಲ್ಯವಾದ ಮತವನ್ನು ಕ್ರಮವಾಗಿ ಡಾ. ಸಾರ್ವಬೌಮ ಬಗಲಿ ಗುರುತು ಕ್ಯಾಮರಾ ಕ್ರಮಸಂಖ್ಯೆ ೦೮, ನಾಗನಾಥ ಮಹಾದೇವ ಬಿರಾದಾರ ಇವರ ಗುರ್ತು ದ್ರಾಕ್ಷಿ ಕ್ರಮ ಸಂಖ್ಯೆ ೦೨, ಪರಿಶಿಷ್ಠ ಜಾತಿ ಮೀಸಲು ಅಭ್ಯರ್ಥಿ ಮುತ್ತಪ್ಪ ಪೋತೆ ಗುರ್ತು ಗ್ಯಾಸ್ ಸಿಲಿಂಡರ್ ಕ್ರಮ ಸಂಖ್ಯೆ ೦೨, ಇವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕಾರ್ಖಾನೆಯ ಶ್ರೇಯೋಭಿವೃದ್ದಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ವಿನಂತಿಸಿ ದರು.
ಚುನಾವಣೆಯಲ್ಲಿ ರೈತಾಪಿ ವರ್ಗ ಯಾವುದೇ ಆಶೇ ಆಮೀಶೆಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದರು.
ನಿರ್ದೇಶಕ ಮಂಡಳಿಗೆ ನಮಗೆ ಅವಕಾಶ ಮಾಡಿಕೊಟ್ಟಿದಲ್ಲಿ ಮುಂಬರುವ ದಿನಗಳಲ್ಲಿ ಕಾರ್ಖಾನೆ ನೌಕರರ ವರ್ಗದಲ್ಲಿ ನೇಮಕಾತಿಯಲ್ಲಿ ಮಹಿಳೆಯ ರಿಗೆ ಶೆ.೩೩ ರಷ್ಟು ಆದ್ಯತೆ ನೀಡಲಾಗುವುದು. ಸದ್ಯ ಮಹಿಳೆಯರ ಸಂಖ್ಯೆ ಕಾರ್ಖಾನೆಯಲ್ಲಿ ಕಡಿಮೆ ಇರುವದರಿಂದ್ದ ಮುಂಬರುವ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು, ಷೇರುದಾರರಿಗೆ ಪ್ರತಿವರ್ಷ ೫೦ ಕೆ.ಜಿ ಸಕ್ಕರೆ ವಿತರಣೆ ಮಾಡಲಾಗುವುದು, ಎಲ್ಕಾ÷್ಟçನಿಕ್ ತೂಕದ ಮಶಿನ್ ಅಳವಡಿಸ ಲಾಗುವುದು. ವಿಜಯಪೂರ ಜಿಲ್ಲೆಯಲ್ಲಿನ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗಿಂತ ೧೦೦ ರೂ, ಹೆಚ್ಚಿನ ದರ ನೀಡುತ್ತೇವೆ. ಕಬ್ಬು ಸಾಗಾಟ, ಕಟಾವು ನುರಿಸುವಿಕೆ ಸಂಧರ್ಬದಲ್ಲಿ ಅಫಘಾತ ಸಂಭವಿಸಿದಲ್ಲಿ ರೈತರು ಕಾರ್ಮಿಕರು, ಮೃತರಾದರೆ ೫ ಲಕ್ಷ ಪರಿಹಾರ ನೀಡಲಾಗುವುದು. ಕಬ್ಬು ಅಕಸ್ಮೀಕ ಸುಟ್ಟರೆ ಇಂತಹ ಕಬ್ಬನ್ನು ತುರ್ತು ಸಾಗಿಸಲಾಗುವುದು. ಏಥೀನಾಲ್, ಮಳ್ಳಿ ,ಬೂದಿ ವಿದ್ಯುತ ಉತ್ಪಾದನೆ ಮಾಡಿ ಅದರ ಲಾಭ ಕಬ್ಬು ಬೆಳೆಗಾರರಿಗೆ ಹಂಚ್ಚುತ್ತೇವೆ. ಸದ್ಯಕ್ಕೆ ಬೇರೆ ರಾಜ್ಯದ ಉದ್ಯೋಗಿಗಳು ಹೆಚ್ಚಾಗಿರುವರಿಂದ ಸ್ಥಳೀಯ ರೈತರ ಮಕ್ಕಳಿಗೆ ಉದ್ಯೋಗ ನೀಡಲಾಗುವುದು. ಕಬ್ಬು ಬೆಳೆಗಾರರಿಗೆ ಆರ್ಥಿಕ ಸಂಕಷ್ಟದಲ್ಲಿರುವ ಕಬ್ಬು ಬೆಳೆಗಾರರಿಗೆ ಗೋಬ್ಬರ ಹಾಗೂ ಪ್ರಥಮ ಹಂತದ ಕಬ್ಬು ನಾಟೀ ಮಾಡುವ ರೈತಾಪಿ ವರ್ಗಕ್ಕೆ ಬೀಜ ವಿತರಣೆ ಮಾಡಲಾಗುವುದು ನಂತರ ಕಬ್ಬಿನ ಬಿಲ್ಲ ರೈತರು ಪಡೆಯುವಾಗ ಬೀಜ ,ಗೋಬ್ಬರದ ಹಣ ಮುರಿದು ಕೊಡಲಾಗುವುದು. ಒಟ್ಟಾರೆ ಶ್ರೀಭಿಮಾ ಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಖುಣ ಮುಕ್ತವನ್ನಾಗಿ ಮಾಡುವ ಮೂಲಕ ರೈತರ ,ಹಾಗೂ ಕಾರ್ಖಾನೆಯ ಉದ್ಯೋಗಿಗಳ ಹಿತ ಕಾಪಾಡ ಲಾಗುವುದು ಆದ್ದರಿಂದ ಎಲ್ಲಾ ಮತದಾರರ ಬಾಂಧವರು ಮೂರು ಅಭ್ಯರ್ಥಿಗಳನ್ನು ತಮ್ಮ ಅಮೂಲ್ಯವಾದ ಮತ ನೀಡಿ ಅರ್ಶೀವಾದ ಮಾಡಬೇಕು ಎಂದು ವಿನಂತಿಸಿದರು.
ಜೆ.ಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ,ನಾಗನಾಥ ಬಿರಾದಾರ, ಮುತ್ತಪ್ಪ ಪೋತೆ, ಶ್ರೀಶೈಲಗೌಡ ಬಿರಾದಾರ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಮುಕುಂದ ಕಾಂಬಳೆ ಮಾತನಾಡಿದರು. ಸಂಕೇತ ಬಗಲಿ, ಮಲ್ಲಿಕಾರ್ಜುನ ಹಾವಿನಾಳಮಠ, ಶಿವಾನಂದ ದೇವರ,ಅಯೂಬ ನಾಟೀಕಾರ, ನಾಗೇಶ ಶಿವಶರಣ ಅನೇಕ ಮುಖಂಡರು ಇದ್ದರು.