Sunday, 15th December 2024

ಡಿ.೫ರಿಂದ ೭ ರವರೆಗೆ ಶ್ರೀಸದ್ಗುರು ಶಾಂತೇಶ್ವರ ಜಾತ್ರ ಮಹೋತ್ಸವ ಸುಕ್ಷೇತ್ರ

ಇಂಡಿ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇದೇ ಶಾಲಿವಾಹನ ಶಕೆ ೧೯೯೪ ಶುಭಕೃತುನಾಮ ಸಂವತ್ಸರ ದಕ್ಷೀಣಾಯಣ ಚಂಪಾಪಷಷ್ಠಿಯಾದ ಬರುವ ಸೋಮ ವಾರ ಮಾರ್ಗಶಿರ್ಷ ಶುದ್ದ ನವಮಿ ದಶಮಿ ಏಕಾದಶಿ ಸೋಮವಾರ ದಿ.೦೫-೧೨-೨೦೨೨ ರಿಂದ ೦೭-೧೨-೨೦೨೨ ರವರೆಗೆ ಶ್ರೀಸದ್ಗುರು ಶಾಂತೇಶ್ವರ ಜಾತ್ರಮಹೋತ್ಸವ ಸುಕ್ಷೇತ್ರ ಇಂಡಿ ಜರುಗಲಿದೆ.

ಶ್ರೀಶಾಂತೇಶ್ವರ ವ-ಹಿರೇಇಂಡಿ, ಹನುಮಂತ ದೇವರ ಟ್ರಸ್ಟ ಕಮೀಟಿ ಎ-೨೦೭ ಮತ್ತು ಶ್ರೀಶಾಂತೇಶ್ವರ ಸೌಹಾರ್ದತಾ ಪತ್ತಿನ ಸಹಕಾರಿ ನಿ,ಇಂಡಿ ಇವರ ಸಂಯುಕ್ತಾಶ್ರಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ , ಡಿ,೫ ರಂದು ಶ್ರೀಮದ್ ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯೆ ಶಿವಾಚಾರ್ಯರಗಳು ಅಡ್ಡ ಪಲ್ಲಕ್ಕಿ ಉತ್ಸವ, ಹಾಗೂ ಸುಮಂಗಲೆಯರಿ0ದ ಕುಂಬ ಮೇರವಣಿಗೆ ಸಕಲ ವಾದ್ಯೆ ವೈಭೋಗಳಿಂದ ಶ್ರೀಶಾಂತೇಶ್ವರ ದೇವಸ್ಥಾನಕ್ಕೆ ಬಂದ ತಲುಪಿದ ನಂತರ ಪೂಜ್ಯರಿಂದ ಸಾಮೂಹಿಕ ವಿವಾಹ ,
ಸೋಮವಾರ ೦೫ ರಾತ್ರಿ ೯ ಗಂಟೆಗೆ ಹರದೇಶಿ ನಾಗೇಶಿ ಡಪ್ಪಿನ ಪದ, ಮಂಗಳವಾರ ಡಿ,೬ ಅಕ್ಕಿಪೂಜೆ ಡಾ.ಸಂತೋಷ ಸಾರ್ವಭೌಮ ಬಗಲಿಯವರಿಂದ ಹಾಗೂ ನಂದಿಕೋಲ ಪ್ರದಕ್ಷೀಣೆ, ನಂತರ ಬೆಳಿಗ್ಗೆ ೯-೦೦ ಯಿಂದ ೪-೦೦ ಗಂಟೆಯವರೆಗೆ ಗೀಗೀ ಹರದೇಶಿ ನಾಗೇಶಿ ಪದಗಳ ಸಂಗಮ, ಡಿ೭ರ0ದು ಬೆಳಗಿನ ೪-೦೦ ಗಂಟೆಗೆ ಮಂಗಳಾರತಿ ದಿ.ದಾದಾಗೌಡ ಪಾಟೀಲ ಮನೆತನದವ ರಿಂದ ನಂತರ ಬೆಳಗಿನ ೬-೦೦ ಗಂಟೆಗೆ ಕಳ್ಳಿಮಠದಿಂದ ತಂಗಿದ ನಂದಿಕೋಲ ಹಾಗೂ ಬಾಸಿಂಗ್ ಪುರವಂತರು ದೇವರ ಪಲ್ಲಕ್ಕಿ. ಕೀಲಗೋಂಬೆ ವಿವಿಧ ವಾದ್ಯ ವೈಭೋಗಳೊಂದಿಗೆ ಮೆರವಣಿಗೆ ನಂತರ ದೇವರ ಮುಖ್ಯ ದ್ವಾರದ ಮುಂದೆ ಹರಕೆ ಭಕ್ತರಿಂದ ಸಿಡಿಗಾಯಿ ಅರ್ಪಣೆ, ಡಿ೭ ರಂದು ಮಧ್ಯಾಹ್ನ ಜಂಗೀ ನಿಕಾಲಿ ಕುಸ್ತಿ ಪುರಸಭೆ ವತಿಯಿಂದ ಜರಗುವವು.

ಅದೇ ದಿನ ರಾತ್ರಿ ೭-೦೦ ಗಂಟೆಗೆ ದೇವರ ಪಲ್ಲಕ್ಕಿ ಪೀರ ಮಂಜಲೇಖಾನ್ ಗಂಧ ಗಲೀಪ್ ಹೂ ಕಾಯಿ ಕರ್ಪೂರ ಅರ್ಪಣೆ ನಂತರ ದೇವರು ಹಳ್ಳದ ಪಾದಗಟ್ಟಿಗೆ ತಲುಪಿ, ರಾತ್ರಿ ೧೦ ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು ಆದ್ದರಿಂದ ಭಕ್ತಾದಿಗಳು ಶಾಂತೇಶ್ವರ ಜಾತ್ರಾಮಹೋತ್ಸವಗೆ ಆಗಮಿಸಿ ದೇವರ ದರ್ಶನ ಪಡೇದು ಪುನಿತರಾಗಬೇಕು ಎಂದು ಸದ್ಗುರು ಶಾಂತೇಶ್ವರ ದೇವರ ಹಿರೇಇಂಡಿ ಹನುಮಂತ ದೆವರ ಟ್ರಸ್ಟ ರ.ನಂಎ -೨೦೭ ಇಂಡಿ.ಶ್ರೀಶಾAತೇಶ್ವರ ಸೌರ್ಹಾದತಾ ಪತ್ತಿನ ಸಹಕಾರಿ ನಿ ಇಂಡಿ ಅಧ್ಯಕ್ಷರು ಪ್ರಕಟಣೆಗೆ ತಿಳಿಸಿದ್ದಾರೆ.