-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವೀಕೆಂಡ್‌ನಲ್ಲಿ ನಟ ಸುದೀಪ್ (Sudeep) ಅವರು ಧರಿಸಿದ್ದ, ಔಟ್‌ಫಿಟ್‌ಗಳು ಮತ್ತೊಮ್ಮೆ ಫ್ಯಾಷನ್ ಪ್ರಿಯರನ್ನು (Super Star Fashion) ಸೆಳೆದಿವೆ. ಅಲ್ಲದೇ, ಪ್ರಯೋಗಾತ್ಮಕ ಮೆನ್ಸ್ ಔಟ್‌ಫಿಟ್ಸ್ ಟ್ರೆಂಡ್‌ಗೆ ನಾಂದಿ ಹಾಡಿವೆ.
ಭರತ್ ಸಾಗರ್ ಡಿಸೈನರ್‌ವೇರ್ಸ್‌ನಲ್ಲಿ ಸುದೀಪ್
ಅಂದಹಾಗೆ, ಈ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನ ಸುದೀಪ್‌ರ ಸಾಕಷ್ಟು ಎಲ್ಲಾ ಔಟ್‌ಫಿಟ್‌ಗಳನ್ನು ಡಿಸೈನ್ ಮಾಡಿರುವುದು ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್. ಇವರನ್ನು ಕ್ರಿಯೆಟೀವ್ ಡಿಸೈನರ್ ಎನ್ನಬಹುದು. ಪ್ರತಿ ಬಾರಿಯೂ ಡಿಸೈನರ್‌ವೇರ್‌ಗಳ ಡಿಸೈನ್‌ಗಳು ರಿಪೀಟ್ ಆಗದಂತೆ ವಿನ್ಯಾಸಗೊಳಿಸುವುದೇ ಇವರ ಸ್ಪೆಷಾಲಿಟಿ. ಅಲ್ಲದೇ, ನಟ ಸುದೀಪ್ ಅವರನ್ನು ಆಕರ್ಷಕವಾಗಿ ಕಾಣಿಸುವಂತೆ, ವಿನ್ಯಾಸಗೊಳಿಸುವುದು ಇವರಿಗೆ ಕರಗತವಾಗಿದೆ. ಇದೇ ರೀತಿ ಪ್ರತಿ ವೀಕೆಂಡ್‌ನಲ್ಲೂ, ಸುದೀಪರನ್ನು ತಮ್ಮ ಡಿಸೈನರ್‌ವೇರ್‌ಗಳಿಂದ ಅತ್ಯಾಕರ್ಷಕವಾಗಿ ಬಿಂಬಿಸಿ, ಫ್ಯಾಷನ್ ಪ್ರಿಯರಿಂದ ಸೈ ಎನಿಸಿಕೊಳ್ಳುತ್ತಿರುತ್ತಾರೆ.
ಸುದೀಪ್ ಔಟ್‌ಫಿಟ್‌ಗಳ ವಿಶೇಷತೆ
ಬಿಗ್ ಬಾಸ್‌ನ ವೀಕೆಂಡ್‌ನಲ್ಲಿ ಸುದೀಪ್ ಧರಿಸಿದ್ದ, ಗ್ರೇಯಿಶ್ ಗ್ರೀನ್ ಶೇಡ್‌ನ ಲೆನಿನ್ ಜ್ಯೂಟ್ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡಿದ್ದ, ಅಸ್ಸೆಮ್ಮಿಟ್ರಿಕಲ್ ಓವರ್‌ಲ್ಯಾಪ್ಡ್ ಕುರ್ತಾ, ಕಾಂಟ್ರಸ್ಟ್ ಶೇಡ್‌ನ ಸ್ಟ್ರೇಟ್ ಬೆಲ್ ಬಾಟಮ್ ಪ್ಯಾಂಟ್ ಸೆಟ್ ಎಲಿಗೆಂಟ್ ಲುಕ್‌ಗೆ ಸಾಥ್ ನೀಡಿತ್ತು ಎನ್ನುವ ಡಿಸೈನರ್ ಭರತ್ ಸಾಗರ್, ಪ್ರತಿಬಾರಿಯೂ ಡಿಫರೆಂಟ್ ಲುಕ್ ನೀಡುವ ಡಿಸೈನರ್‌ವೇರ್‌ಗಳನ್ನು ವಿನ್ಯಾಸಗೊಳಿಸಲು ಪ್ರಯತ್ನಿಸುತ್ತಿರುತ್ತಾರಂತೆ.
ಇನ್ನು, ಬಿಗ್ ಬಾಸ್ ವೀಕೆಂಡ್ ಶೋನ ಎರಡನೇ ದಿನ, ಸುದೀಪ್ ಧರಿಸಿದ್ದ, ಇಂಡೋ –ವೆಸ್ಟರ್ನ್ ಕೊರಿಯನ್ ಶೈಲಿಯ ಡಾರ್ಕ್ ಬ್ರೌನ್ ಶೇಡ್‌ನ ವೂಲ್ ಟ್ವೀಡ್ ಫ್ಯಾಬ್ರಿಕ್‌ನ ಬಿಗ್ ಕಾಲರ್ ಬಟನ್‌ನ ಕ್ರಾಪ್ಡ್ ಜಾಕೆಟ್, ಅವರಿಗೆ ವಿಂಟೆಜ್ ಲುಕ್ ನೀಡುವುದರೊಂದಿಗೆ ಆಕರ್ಷಕವಾಗಿಸಿತ್ತು ಎನ್ನುತ್ತಾರೆ.
ಒಟ್ಟಾರೆ, ಈ ಡಿಸೈನರ್‌ವೇರ್‌ಗಳು, ಪ್ರಸ್ತುತ ಸೀಸನ್‌ನ ಮೆನ್ಸ್ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿ ಸೇರಿಕೊಂಡವು ಎಂಬುದು ಫ್ಯಾಷನ್ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಈ ಸುದ್ದಿಯನ್ನೂ ಓದಿ | Winter Headband Fashion: ವಿಂಟರ್ ಹೇರ್ ಸ್ಟೈಲ್ ವಿನ್ಯಾಸಕ್ಕೆ ಬಂತು ಆಕರ್ಷಕ ಹೆಡ್ ಬ್ಯಾಂಡ್ಸ್!
ಡಿಸೈನರ್ ಭರತ್ ಸಾಗರ್ ಅಭಿಪ್ರಾಯ
ನಟ ಸುದೀಪ್ ಅವರ ಫ್ಯಾಷನ್, ಸದಾ ಕ್ಲಾಸಿ ಲುಕ್ ನೀಡುವುದರೊಂದಿಗೆ ಫ್ಯಾಷನ್ ಪ್ರಿಯ ಯುವಕರನ್ನು ಸೆಳೆಯುತ್ತದೆ. ಇದಕ್ಕೆ ಪ್ರಮುಖ ಕಾರಣ, ಖುದ್ದು ಅವರು ನಿರ್ಧರಿಸುವ ಪ್ರತಿ ಯೂನಿಕ್ ಡಿಸೈನ್ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ಸೆಲೆಬ್ರೆಟಿ ಡಿಸೈನರ್ ಭರತ್ ಸಾಗರ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)