Thursday, 12th December 2024

ಪ್ರತಿಭಾ ಕಾರಂಜಿ ಮೂಲಕ ಮಕ್ಕಳ ಪ್ರತಿಭಾನ್ವೇಷಣೆ: ಶಾಸಕ ಜಾಧವ

ಚಿಂಚೋಳಿ: ಮಕ್ಕಳ ಪ್ರತಿಭೆ ಹೊರತರುವ ಉದ್ದೇಶದಿಂದ ಸರಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಭೆ ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕ ಡಾ. ಅವಿನಾಶ ಉಮೇಶ ಜಾಧವ ಅವರು ಹೇಳಿ ದರು.

ತಾಲೂಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡ 2022-23 ನೇ ಸಾಲಿನ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮತ್ತು 10 ಗಣಕ ಯಂತ್ರ ಗಳಿಗೆ ಉದ್ಘಾಟಿಸಿ ಮಾತನಾಡಿದರು.

ನಾನು ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದರು. ಪ್ರತಿಭೆ ಗುರುತಿಸುವ ಕಾರ್ಯಕ್ರಮಗಳು ನಮಗೆ ಸಿಕ್ಕಿಲ್ಲ. ಆದರೆ, ಸರಕಾರ ಒಳ್ಳೆಯ ಕಾರ್ಯಕ್ರಮ ರೂಪಿಸಿ ಪ್ರತಿಭೆಗಳಿಗೆ ಗುರುತಿಸುವ ಯೋಜನೆ ತಂದಿದೆ. ಮಕ್ಕಳು ಒಳ್ಳೆಯ ವಿದ್ಯಾಭ್ಯಾಸದ ಜೊತೆಗೆ ತಂದೆ -ತಾಯಿಯರಿಗೆ ಮನಸ್ಸಿಗೆ ನೋವಾಗದ ರೀತಿಯಲ್ಲಿ ಗೌರವದಿಂದ ನಡೆದುಕೊಳ್ಳಬೇಕು. ಇಡೀ ರಾಜ್ಯದಲ್ಲಿ 74 ಆದರ್ಶ ವಿದ್ಯಾಲಯ ಶಾಲೆಗಳು ಸರಕಾರ ತೆರದಿದೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಚಿಂಚೋಳಿ ಆದರ್ಶ ವಿದ್ಯಾಲಯ ಶಾಲೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರತಿಭೆ ಮತ್ತು ಕೌಶಲ್ಯದ ಜತೆಗೆ ಶಿಕ್ಷಣ, ಆರೋಗ್ಯ ಇದ್ದರೆ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಬಹುದು. ತಂದೆಯವರು ಡಾ. ಉಮೇಶ ಜಾಧವ ಅವರು ಶಾಸಕರಾಗಿದ್ದಾಗ ಕಟ್ಟಡಕ್ಕೆ 5.5 ಕೋಟಿ ರೂ ಅನುದಾನ ನೀಡಿದರು. ನನ್ನ ಅವಧಿಯಲ್ಲಿ ಶಾಲಾಭಿವೃದ್ಧಿಗೆ 74 ಲಕ್ಷ ರೂ ನೀಡಿದ್ದೇನೆ. ಇನ್ನೂ ಹೆಚ್ಚಿನ ಶಾಲಾಭಿವೃದಿಗೆ ಬೇಕಾಗುವ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಆವಂಟಿ, ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ಮಾತನಾಡಿದರು.

ಪ್ರಾಸ್ತವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಆದರ್ಶ ವಿದ್ಯಾಲಯ ಪೋಲಕಪಳ್ಳಿ ಶಾಲೆಯ ಪ್ರಾಂಶುಪಾಲರು ನಾಗಶೆಟ್ಟಿ ಭದ್ರಶೆಟ್ಟಿ ಮಾತನಾಡಿದರು.

ಈ ಸಂಧರ್ಭದಲ್ಲಿ ಕಸಪ ಅಧ್ಯಕ್ಷ ಸುರೇಶ ದೇಶಪಾಂಡೆ, ಕ್ಷೇತ್ರ ಸಮನ್ವಯಧಿಕಾರಿ ಮಾರುತಿ ಯಂಗಂನೂರ್, ದೇವೀಂದ್ರಪ್ಪ ಹೊಳ್ಕರ್, ಸುರೇಶ ಕೊರವಿ, ಖುರ್ಶಿದಮಿಯಾ, ಮಾರುತಿ ಪತಂಗೆ, ಶಾಮರಾವ್ ಮೋಘ, ಮಲ್ಲಿಕಾರ್ಜುನ ಪಾಲಾಮೂರ್ ಅವರು ಇದ್ದರು.