Sunday, 15th December 2024

ಕಲ್ಗುಡಿಯಲ್ಲಿ 7ನೇ ತಾಲೂಕು ಸಾಹಿತ್ಯ ಸಮ್ಮೇಳನ

ಗಂಗಾವತಿ: ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಭಾನುವಾರ ನಡೆದ 7ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದರು.

ಸಮ್ಮೇಳನದ ಅಧ್ಯಕ್ಷರಾಗಿ ಅಲ್ಪ ಸಂಖ್ಯಾತ ಸಮಾಜದ ಮಹಿಳೆ ಡಾ.ಮಮ್ತಾಜ್ ಬೇಗಂ ಆಯ್ಕೆ ಗೊಂಡಿರುವುದು ಇಡೀ ಮಹಿಳೆಯರಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಮಹಿಳೆಯರು ಬಲಿಷ್ಠರಾಗಬೇಕು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆಯಬೇಕು ಎಂದು ತಿಳಿಸಿದರು. ಮಮ್ತಾಜ್ ಬೇಗಂ ಅನೇಕ ಸಾಹಿತ್ಯ ಕ್ರತಿಗಳನ್ನು ರಚಿಸಿದ್ದಾರೆ. ಇವರು ಬರಹಗಳು ಅಕ್ಷರ ಲೋಕಕ್ಕೆ ಸವಾಲಾಗಿದೆ ಎಂದು ಹೇಳಿ ದರು.