Sunday, 15th December 2024

ಜನಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಖಂಡನೀಯ

ಬಸವನಬಾಗೇವಾಡಿ: ಇಂದಿನಿಂದ ಸರ್ಕಾರ ಬಡವರು ಹಾಗೂ ಜನಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಮಾಡಿರುವುದು ಖಂಡ ನೀಯ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ್ ಅವರು ಹೇಳಿದರು.
ಮೊಸರು, ಲಸ್ಸಿ, ಮಜ್ಜಿಗೆ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನಸಾಮಾನ್ಯರು ಬಡವರು ರೈತರು ದಿನ ನಿತ್ಯ ಬಳಸುವ ಹಾಲು ಮೊಸರು ಮಜ್ಜಿಗೆ ಅಕ್ಕಿ ಗೋಧಿ ಬೆಲ್ಲ ಹಾಗೂ ಅನೇಕ ದಿನ ಬಳಕೆಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿ.ಎಸ್. ಟಿ ತೆರಿಗೆಯನ್ನು ಮಾಡಿರುವುದು ನೋಡಿದರೆ ನಮ್ಮನ್ನು ಆಳುವ ಸರ್ಕಾರಕ್ಕೆ ಬಡವರ ಮೇಲೆ ಕಿಂಚೆತ್ತು ಕಾಳಜಿ ಇಲ್ಲದ ಹಾಗೆ ಕಾಣುತ್ತದೆ ಅಲ್ಲದೆ ಕಡಿಮೆ ವೆಚ್ಚದ ಹೋಟೆಲ್ ರೂಮಗಳು ಆಸ್ಪತ್ರೆಯ ಹಾಸಿಗೆಗಳು ಔಷಧ ಮಾತ್ರೆಯ ಮೇಲೆ ಹೆಚ್ಚಿಗೆ ತೆರಿಗೆ ಜಾರಿಗೆ ತಂದಿರುವುದನ್ನು ನೋಡಿದರೆ ಬಡವರ ಹೊಟ್ಟೆಯ ಮೇಲೆ ಹೊಡೆ ದಂತಾಗಿದೆ ದೇಶದಲ್ಲಿ ನರೇಂದ್ರ ಮೋದಿ  ಸರಕಾರ ಜನಸಾಮಾನ್ಯರ ಜೀವನ ಜೊತೆ ಆಟವಾಡುತ್ತಿದೆ.
ಗೃಹ ಉಪಯೋಗಿ ಗ್ಯಾಸ್ ಬೆಲೆ ಕೂಡ ಮೇಲಿಂದ ಮೇಲೆ ಹೆಚ್ಚುತ್ತಿದೆ ಕೂಡಲೆ ಸರ್ಕಾರ ಈ ತೆರಿಗೆ ಕ್ರಮವನ್ನು ಹಿಂದಕ್ಕೆ ಪಡೆಯ ಬೇಕು. ಇದರ ಬದಲಾಗಿ ಸಂಸದರಿಕೆ ಶಾಸಕರಿಗೆ ಸಚಿವರಿಗೆ ಕೊಡುವ ಎಲ್ಲ ವಿನಾಯಿತಿಯನ್ನು ತೆಗೆದು ಹಾಕಬೇಕು. ಅವರಿಗೆ ಕೊಡುವ ಸಂಬಳದ ಹಣದಲ್ಲಿ ಬೇಕಾದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳ ಬಹುದು  ಎಂದರು.