ಇಂಡಿ: ಪ್ರಾಚೀನ ಕಾಲದಲ್ಲಿ ಗುರುವಿಗೆ ಇರುವಷ್ಟು ಗೌರ ಮತ್ಯಾರಿಗೂ ಇಲ್ಲ. ಶಿಕ್ಷಕರು ದೇವರ ಸಮಾನ ಅಜ್ಞಾನದಿಂದ ಜ್ಞಾನದ ಕಡೆ ಕತ್ತಲೆಯಿಂದ ಬೆಳಕಿನಡೆ ಸಾಗಿಸಿದ ಸಹಕಾರ ಮೂರ್ತಿ ಶಿಕ್ಷಕ ಎಂದು ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಹೇಳಿದರು.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾ ಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲಿಕಾರ್ಜುನ.ಪಿ ಬಿರಾದಾರ, ಸಂಗನಬಸವ ಕಾಲೇಜಿ ಪ್ರಾಚಾರ್ಯ ಎನ್. ಆರ್ ಬೋಂದರಡೆ ಜಂಟಿಯಾಗಿ ಸನ್ಮಾನಿಸಿ ಮಾತನಾಡಿದರು.
ಅಜ್ಞಾನದಿಂದ ಜ್ಞಾನದ ಕಡೆ ಸಾಗಿಸಿ ಸಾವಿರಾರು ವಿಧ್ಯಾರ್ಥಿಗಳಿಗೆ ಉನ್ನತ ಹುದ್ದೆ ಜೊತೆ ಒಳ್ಳೆಯ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ನೀಡಿದ ನಿಮಗೆ ಹೃದಯ ಪೂರ್ವಕ ಕೃತಜ್ಞತೆ ಎಂದ ಅವರು ಗುರುವಿಗೆ ನೆನೆದರೆ ಬೆಟ್ಟದಷ್ಟು ಕಷ್ಟ ಮಾಯವಾಗುತ್ತದೆ ಎಂಬುದು ನೀಜ ನೀವು ಒಬ್ಬ ಒಳ್ಳೆಯ ಜವಾಬ್ದಾರಿ ಶಿಕ್ಷಕರಾಗಿ ವಿಧ್ಯಾರ್ಥಿಗಳೊಂದಿಗೆ ಬಡವ ಶ್ರೀಮಂತ ಎನ್ನದೆ ಸಮಭಾವದಿಂದ ಶಿಕ್ಷಣ ನೀಡಿರುವುದು ನಿಮ್ಮ ದೊಡ್ಡಗುಣ.
ಸರಕಾರ ಸೇವೆಯಲ್ಲಿ ನಿವೃತ್ತಿ ಎಂಬುದು ಕೂಡಾ ಅಷ್ಠೇ ಖಚಿತ ಆದ್ದರಿಂದ ಸೇವೆಯಿಂದ ನಿವೃತ್ತಿ ಹೊಂದಿರಬುಹುದು ಆದರೆ ನಿಮ್ಮ ಸೇವೆ ಸಮಾಜಮುಖಿಯಾಗಿ ಬಡವರ ,ದೀನದರ್ಬಲರ, ನೊಂದವರ ಪರವಾಗಿ ನಿಮ್ಮ ಕೆಲಸ ನಡೆಯಲಿ ಭಗವಂತ ನಿಮಗೆ ಒಳ್ಳೆಯ ಆರೋಗ್ಯ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಸಿದ್ದು ಡಂಗಾ , ಶ್ರೀಶೈಲಗೌಡ ಪಾಟೀಲ, ದುಂಡು ಬಿರಾದಾರ, ಬಾಳು ರಾಠೋಡ ಉಪಸ್ಥಿತರಿದ್ದರು.