Friday, 22nd November 2024

ಡಿಕೆಶಿ ತಾಯಿ, ಪತ್ನಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪತ್ನಿಿ ಮತ್ತು ತಾಯಿಗೆ ದೆಹಲಿ ಹೈಕೋರ್ಟ್ ತಾತ್ಕಾಾಲಿಕ ನೆಮ್ಮದಿ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಬ್ಬರನ್ನೂ ವಿಚಾರಣೆ ನಡೆಸಲು ಮುಂದಾಗಿದ್ದು, ಅಕ್ಟೋೋಬರ್ 31ಕ್ಕೆೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಸಮನ್‌ಸ್‌ ನೀಡಿತ್ತು. ಇದನ್ನು ಅವರು ದೆಹಲಿ ಹೈಕೋಟ್‌ರ್ರ್ನಲ್ಲಿ ಪ್ರಶ್ನಿಿಸಿ, ಗೌರಮ್ಮ ವಯೋಸಹಜ ಕಾರಣಗಳಿಂದ ದೆಹಲಿಗೆ ವಿಚಾರಣೆಗೆ ಬರಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿಯೇ ಅವರ ವಿಚಾರಣೆ ನಡೆಸಬೇಕು ಎಂದು ಡಿಕೆಶಿ ಪರ ವಕೀಲರು ವಾದ ಮಂಡಿಸಿದ್ದರು. ವಾದ ಆಲಿಸಿದ ನ್ಯಾಾಯಪೀಠ, ಅಕ್ಟೋೋಬರ್ 31ರಂದು ಉಷಾ ಮತ್ತು ಗೌರಮ್ಮ ಇ.ಡಿ ವಿಚಾರಣೆಗೆ ಹಾಜರಾಗುವುದು ಬೇಡ ಎಂದು ಹೇಳಿ, ಅರ್ಜಿಯ ವಿಚಾರಣೆಯನ್ನು ನವೆಂಬರ್ 4ಕ್ಕೆೆ ಮುಂದೂಡಿದೆ.