ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Karnataka Governor Thawar Chand Gehlot) ಅವರಿಗೆ ಕೇಂದ್ರ ಗೃಹ ಸಚಿವಾಲಯ (Home ministry) ಝಡ್+ ಕೆಟಗರಿ (Z plus Security) ಭದ್ರತೆಯನ್ನು ನೀಡಿದೆ. ಇತ್ತೀಚೆಗೆ ಅವರಿಗೆ ಬುಲೆಟ್ ಪ್ರೂಫ್ ಕಾರನ್ನು ಒದಗಿಸಲಗಿತ್ತು.
ಮುಡಾ ಪ್ರಕರಣದಲ್ಲಿ ಸಿಎಂ ಮೇಲಿನ ತನಿಖೆಗೆ ಆದೇಶ ನೀಡಿದ ನಂತರ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ, ಈ ಹಿಂದೆ ರಾಜ್ಯ ಪೊಲೀಸರು ನಿರ್ವಹಿಸುತ್ತಿದ್ದ ರಾಜ್ಯಪಾಲರ ಭದ್ರತೆಯನ್ನು ಈಗ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನಿರ್ವಹಿಸುತ್ತದೆ. ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಸಿಬ್ಬಂದಿಯ ತಂಡ ರಾಜ್ಯಪಾಲರೊಂದಿಗೆ ಪಾಳಿಯಲ್ಲಿ ಹೋಗುತ್ತದೆ.
ರಾಜ್ಯಪಾಲರು ಇದೀಗ ರಾಜ್ಯಾದ್ಯಂತ ಪ್ರಯಾಣಿಸುವುದಿಲ್ಲ. ಕೇಂದ್ರ ಗುಪ್ತಚರ ಸಂಸ್ಥೆಗಳ ಭದ್ರತಾ ಪರಿಶೀಲನೆಯ ಬಳಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಾರೆ. ಈ ಮೊದಲು ರಾಜ್ಯಪಾಲರಿಗೆ ಕರ್ನಾಟಕ ಪೊಲೀಸರು ಭದ್ರತೆ ಒದಗಿಸುತ್ತಿದ್ದರು. ಕರ್ನಾಟಕ ಸರ್ಕಾರವು ಈಗಾಗಲೇ ಗೆಹಲೋತ್ ಅವರಿಗೆ ಬುಲೆಟ್ ಪೂ›ಫ್ ಎಸ್‌ಯುವಿ ಒದಗಿಸಿದೆ.
ಮುಡಾ ಪ್ರತಿಭಟನೆಗಳ ಸಂದರ್ಭದಲ್ಲಿ, ರಾಜ್ಯಪಾಲರನ್ನು ಪದಚ್ಯುತಗೊಳಿಸಲು ‘ಬಾಂಗ್ಲಾದೇಶ ಮಾದರಿಯ ಆಂದೋಲನ’ದ ಎಚ್ಚರಿಕೆಯನ್ನು ಕಾಂಗ್ರೆಸ್ ಎಂಎಲ್‌ಸಿ ಐವನ್ ಡಿಸೋಜಾ ನೀಡಿದ್ದರು. ಅವರ ವಿವಾದಾತ್ಮಕ ಹೇಳಿಕೆ ಸೇರಿದಂತೆ ಕಾಂಗ್ರೆಸ್‌ನ ಪ್ರತಿಭಟನೆಯ ನಂತರ ಈ ಭದ್ರತೆಯನ್ನು ನವೀಕರಿಸಲಾಗಿದೆ.
ಎಲ್ಲಾ ಗವರ್ನರ್‌ಗಳು Z+ ಭದ್ರತೆಗೆ ಅರ್ಹರಾಗಿದ್ದರೂ, ಜುಲೈ 2021 ರಲ್ಲಿ ಅಧಿಕಾರ ವಹಿಸಿಕೊಂಡ ಗೆಹ್ಲೋಟ್, ಇದುವರೆಗೂ ಈ ಮಟ್ಟದ ರಕ್ಷಣೆಯನ್ನು ಆರಿಸಿಕೊಂಡಿರಲಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ನಡೆಸಲಾಗುವ ಬೆದರಿಕೆ ಮೌಲ್ಯಮಾಪನದ ನಂತರ ಕೇಂದ್ರವು ಈ ವರ್ಧಿತ ರಕ್ಷಣೆಯನ್ನು ಒದಗಿಸಿದೆ.
76 ವರ್ಷದ ಗೆಹ್ಲೋಟ್ ಅವರು ಈ ಹಿಂದೆ 2014 ರಿಂದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಮಧ್ಯಪ್ರದೇಶದಿಂದ ಕರ್ನಾಟಕದಲ್ಲಿ ರಾಜ್ಯಪಾಲರ ಸ್ಥಾನವನ್ನು ಅಲಂಕರಿಸಿದ ಮೊದಲ ವ್ಯಕ್ತಿಯಾಗಿದ್ದಾರೆ.
ಇದನ್ನೂ ಓದಿ: R Ashok: ಟಿಪ್ಪುವೇ ಸಿದ್ದರಾಮಯ್ಯ ಮನೆ ದೇವರು ಆರ್. ಅಶೋಕ್ ಗೇಲಿ