Wednesday, 11th December 2024

Theft Case: ಪಾರಿವಾಳಗಳನ್ನು ಬಳಸಿ ಬೆಂಗಳೂರಿನಲ್ಲಿ 50 ಮನೆ ದೋಚಿದ ಕಳ್ಳ!

theft case

ಬೆಂಗಳೂರು: ಪಾರಿವಾಳಗಳನ್ನು (Pigeon) ಬಳಸಿಕೊಂಡು ಸುಮಾರು 50 ಮನೆಗಳನ್ನು ದೋಚಿದ (Theft Case) ಕಳ್ಳನೊಬ್ಬನನ್ನು ಬೆಂಗಳೂರು (Bangalore crime news) ಪೊಲೀಸರು ಬಂಧಿಸಿದ್ದಾರೆ. ಬೀಗ ಹಾಕಿದ್ದ ಮನೆಗಳಿಗೆ ನುಗ್ಗಲು ಈತ ಪಾರಿವಾಳಗಳನ್ನು ಬಳಸುತ್ತಿದ್ದ ಎಂದು ಗೊತ್ತಾಗಿ ಪೊಲೀಸರೇ ಶಾಕ್‌ ಆಗಿದ್ದಾರೆ.

ʼಪಾರಿವಾಳ ಮಂಜʼ ಎಂದು ಕರೆಯಲ್ಪಡುವ 38 ವರ್ಷದ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿ ಮಂಜುನಾಥ್ ಹೊಸೂರು ಮೂಲದವರಾಗಿದ್ದು, ಬೆಂಗಳೂರಿನ ನಗರ್ತಪೇಟೆಯ ನಿವಾಸಿ.ನಗರದಾದ್ಯಂತ ಕನಿಷ್ಠ 50 ಕಳ್ಳತನಗಳನ್ನು ಈತ ಮಾಡಿದ್ದಾನೆ ಎಂದು ಅಧಿಕಾರಿಗಳು ನಂಬಿದ್ದಾರೆ.

ಮಂಜುನಾಥ್ ಕಳವಿಗೆ ವಿಚಿತ್ರ ವಿಧಾನ ಅನುಸರಿಸುತ್ತಿದ್ದ. ಆತ ಯಾವ ಕಟ್ಟಡದಲ್ಲಿ ಕಳವು ಮಾಡಬಹುದು ಎಂದು ಪರಿಶೀಲಿಸಲು ಹೋಗುವಾಗ ತನ್ನೊಂದಿಗೆ ಪಾರಿವಾಳಗಳನ್ನು ಒಯ್ಯುತ್ತಿದ್ದ. ಮುಖ್ಯವಾಗಿ ಸೆಕ್ಯುರಿಟಿ ಇಲ್ಲದ ಬಹುಮಹಡಿ ಕಟ್ಟಡಗಳ ಮೇಲೆ ಅವರ ಗಮನ ಕೇಂದ್ರೀಕೃತವಾಗಿತ್ತು. ಒಮ್ಮೆ ಗುರಿಯನ್ನು ಗುರುತಿಸಿದ ಬಳಿಕ ಒಂದು ಅಥವಾ ಎರಡು ಪಾರಿವಾಳಗಳನ್ನು ಕಟ್ಟಡದ ಬಳಿ ಬಿಡುತ್ತಿದ್ದ.

ಪಕ್ಷಿಗಳು ಸಾಮಾನ್ಯವಾಗಿ ಮೇಲ್ಛಾವಣಿಗೆ ಅಥವಾ ಬಾಲ್ಕನಿಗೆ ಹಾರುತ್ತವೆ. ನಂತರ ಈತ ಅವುಗಳನ್ನು ಹಿಡಿಯಲು ಮುಂದಾಗುವವನಂತೆ ನಟಿಸುತ್ತಿದ್ದ. ಅನುಮಾನದಿಂದ ನಿವಾಸಿಗಳು ಈತನನ್ನು ಪ್ರಶ್ನಿಸಿದರೆ, ತನ್ನ ಪಾರಿವಾಳಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ವಿವರಿಸುತ್ತಿದ್ದ. ಬೀಗ ಹಾಕಿರುವ ಮನೆಯನ್ನು ಗುರುತಿಸಿ ಕಬ್ಬಿಣದ ರಾಡ್ ಬಳಸಿ ಮುಂಬಾಗಿಲು ಒಡೆದು ಒಳನುಗ್ಗುತ್ತಿದ್ದ. ನಂತರ ಕಪಾಟುಗಳು ಮತ್ತು ತಿಜೋರಿಗಳನ್ನು ಮುರಿದು ಚಿನ್ನಾಭರಣ ಮತ್ತು ನಗದನ್ನು ಹೊತ್ತುಕೊಂಡು ಪರಾರಿಯಾಗುತ್ತಿದ್ದ.

ಈ ಕದ್ದ ವಸ್ತುಗಳನ್ನು ನಂತರ ಹೊಸೂರಿನಲ್ಲಿ ಮಾರಾಟ ಮಾಡುತ್ತಿದ್ದ. ಈ ಹಿಂದೆ ಹಲವು ಬಾರಿ ಬಂಧನಕ್ಕೊಳಗಾಗಿದ್ದರೂ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮಂಜುನಾಥ್ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ್ದ. ಆತನ ಇತ್ತೀಚಿನ ಬಂಧನವು ಸಿಟಿ ಮಾರ್ಕೆಟ್ ಮತ್ತು ಹಲಸೂರು ಗೇಟ್ ಪ್ರದೇಶಗಳಲ್ಲಿ ಕನಿಷ್ಠ ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ. ಮಂಜುನಾಥ್ ಒಬ್ಬನೇ ಕಳವು ಮಾಡಿದ್ದಾನೆ. ಸಾಮಾನ್ಯವಾಗಿ ಹಗಲಿನಲ್ಲಿ ನಿವಾಸಿಗಳು ಕೆಲಸಕ್ಕೆ ಹೋದಾಗ ಮನೆ ಒಡೆಯುತ್ತಿದ್ದ.

ಇದನ್ನೂ ಓದಿ: Viral News: ಮೊಬೈಲ್ ಕಳವು ಆರೋಪ; ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ ಥಳಿಸಿದ ಯುವಕರು