ಮಾನವೀಯತೆ ಮಾರಾಟಕ್ಕಿಟ್ಟ ಕರೋನಾ
ಶವದ ಹೆಸರಿನಲ್ಲಿಯೂ ಸುಲಿಗೆ
ವಿಶೇಷ ವರದಿ: ರಂಗನಾಥ ಕೆ.ಮರಡಿ
ತುಮಕೂರು: ಕರೋನಾ ಮಾರಿ ಮಾನವೀಯತೆನ್ನು ಮಾರಾಟಕ್ಕಿಟ್ಟಿದೆ. ಮನುಷ್ಯರು ಹಣಕ್ಕಾಗಿ ಹೃದಯವಂತಿಕೆಯನ್ನು ಮರೆಯುತ್ತಿರುವುದು ದುರಂತ. ಕೆಲವು ಖಾಸಗಿ ಆಸ್ಪತ್ರೆಗಳು, ಶವವಸಂಸ್ಕಾರ ಕಾರ್ಯ ನೆರವೇರಿಸುವ ವ್ಯಕ್ತಿಗಳು ಮೃತರಿಗೆ ಮುಕ್ತಿ ನೀಡಲು ಮೂವತ್ತು ಸಾವಿರ ಪ್ಯಾಕೇಜ್ ಮಾಡಿರುವುದು ನಾಚಿಕೆಗೇಡಿನ ಸಂಗತಿ.
ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟರೆ ಅಂತಹವರನ್ನು ಅಂತ್ಯಸಂಸ್ಕಾರ ಮಾಡಲು ಕೆಲವು ಆಸ್ಪತ್ರೆಗಳು ಮೂವತ್ತು ಸಾವಿರ ಪೀಕುತ್ತಿರುವುದು ಮಾನವೀಯ ಘಟನೆ. ಕರೋನಾದಿಂದ ಮೃತಪಟ್ಟವರನ್ನು ಶವಸಂಸ್ಕಾರ ಮಾಡಲು ಕೆಲವು ವ್ಯಕ್ತಿಗಳ ಟೀಂ ಕರೋನಾ ಬಂಡವಾಳಮಾಡಿಕೋಮಡು ೩೦ ಸಾವಿರ ಪೀಕುತ್ತಿವೆ.
ಜಿಲ್ಲೆಯಲ್ಲಿ ಇನ್ನೂ ಕೆಲವರು ಕನಿಷ್ಠ ೧೦ ಸಾವಿರದಿಂದ ಆರಂಭಿಸಿ ೩೦ ಸಾವಿರದವರೆಗೆ ವಸೂಲಿ ಮಾಡುತ್ತಿದ್ದಾರೆ. ಹಣವಂತರು ಕೊಡುತ್ತಾರೆ ಆದರೆ ಬಡವರು ಏನು ಮಾಡಬೇಕು. ಮನುಷ್ಯರು ಹೃದಯವಂತಿಕೆಯನ್ನು ಮರೆತು ಹಣಕ್ಕೆ ಬೆಲೆ ನೀಡಿದರೆ ಮೌಲ್ಯಗಳು ಉಳಿಯುವುದಾದರೂ ಹೇಗೆ?
ಮೂರುಪಟ್ಟು ದರಕ್ಕೆ ಆಕ್ಸಿಜನ್ ಮಾರಾಟ
೨೫ ಸಾವಿರ ಮೌಲ್ಯದ ೫ ಲೀಟರ್‌ನ ಆಕ್ಸಿಜನ್ ಸಿಲಿಂಡರ್ ೬೦ರಿಂದ ೮೦ ಸಾವಿರದವರೆಗೆ ಮಾರಾಟವಾಗುತ್ತಿದೆ. ೯ ಲೀಟರ್‌ನ ಆಕ್ಸಿಜನ್ ಸಿಲಿಂಡರ್ ೭೫ರಿಂದ ೧ ಲಕ್ಷ ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಕಳುಹಿಸುವ ಸ್ಥಳದಲ್ಲಿಯೇ ೩ ಪಟ್ಟು ಆಕ್ಸಿಜನ್ ದರ ಹೆಚ್ಚಿಸಲಾಗಿದೆ. ಇದರಿಂದ ೧೦ ರೂ. ಬೆಲೆ ಬಾಳುವುದನ್ನು ೩೦ ರೂಪಾಯಿಗೆ ಖರೀದಿಸುವಂತಾಗಿದೆ.
ತುಮಕೂರು ಜಿಲ್ಲೆಗೆ ಸರಿಯಾಗಿ ಆಕ್ಸಿಜನ್ ಸರಬರಾಜು ಆಗುತ್ತಿದೆ. ತಾಲೂಕು ಕೇಂದ್ರ‍್ರದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದರಿಂದ ಜನರು ಜಿಲ್ಲಾ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಈ ಬಾರಿ ಒತ್ತಡ ಹೆಚ್ಚಾಯಿತು. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆ ಇರುವುದು ನಿಜ. ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಸರಬರಾಜು ಆಗಲಿದೆ. ಈಗ ನೀಡಿರುವ ವ್ಯಾಕ್ಸಿನ್‌ನನ್ನು ಸ್ಥಳದಲ್ಲಿಯೇ ಆನ್‌ಲೈನ್‌ನಲ್ಲಿ ದಾಖಲು ಮಾಡಲಾಗುತ್ತಿದೆ. ಆಕ್ಸಿಜನ್ ದರ ತೀವ್ರತರವಾಗಿ ಹೆಚ್ಚಿಸಿರುವುದು ಸರಿಯಲ್ಲ ಎಂದು ಶಾಸಕ ಜ್ಯೋತಿಗಣೇಶ್ ಕಿಡಿಕಾರಿದರು.
ಉಚಿತ ಶವಸಂಸ್ಕಾರ
ಕರೋನಾ ಶವಸಂಸ್ಕಾರದಿಂದ ಹಣ ಮಾಡಲು ಮುಂದಾಗಿರುವ ಕೆಲವು ವ್ಯಕ್ತಿಗಳ ನಡುವೆ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಮುಸ್ಲಿಂ ಕರೋನಾ ವಾರಿರ‍್ಸ್ ತಂಡ ಸೇರಿದಂತೆ ವೈಯಕ್ತಿಕವಾಗಿ ಅನೇಕ ಮಂದಿ ಜಿಲ್ಲೆಯಲ್ಲಿ ನಿಸ್ವಾರ್ಥದಿಂದ ಗೌರವ ಪೂರ್ವಕವಾಗಿ ಮೃತರಿಗೆ ಮುಕ್ತಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ನಗರ ಸೇರಿದಂತೆ ಜಿಲ್ಲೆಯ ೧೦ ತಾಲೂಕಿನಲ್ಲಿ ನೂರಾರು ಮೃತರ ಶವಸಂಸ್ಕಾರ ಮಾಡಿ ಹಣವೇ ಜೀವನವಲ್ಲ ಎಂಬುದನ್ನು ಕರೋನಾ ವಾರಿರ‍್ಸ್ ತೋರಿಸಿ ಕೊಟ್ಟಿದ್ದಾರೆ.